ಮುಂಬೈ (ಮಹಾರಾಷ್ಟ್ರ): ಕೆಲವು ದಿನಗಳ ಹಿಂದೆ ಬಿಜೆಪಿಯ ಹಿರಿಯ ನಾಯಕಿ ಪಂಕಜಾ ಮುಂಡೆ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಕತೆ ನಡೆದಿತ್ತು. ಈ ವಿಚಾರವಾಗಿ ಇಂದು ಪಂಕಜಾ ಮುಂಡೆ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಬಿತ್ತರಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಅವರು ಘೋಷಿಸಿದ್ದಾರೆ. ಇದೇ ವೇಳೆ ಸದ್ಯದ ರಾಜಕೀಯ ಪರಿಸ್ಥಿತಿಯಿಂದ ಬೇಸತ್ತು 2 ತಿಂಗಳು ವಿಶ್ರಾಂತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.
ಸೋನಿಯಾ, ರಾಹುಲ್ ಅವರನ್ನು ಭೇಟಿ ಮಾಡಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಪಂಕಜಾ ಮುಂಡೆ, 2019ರ ಚುನಾವಣೆಯಲ್ಲಿ ನಾನು ಸೋತಿದ್ದೆ. ಬಳಿಕ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆ ನಿರ್ಧಾರದಿಂದ ನನಗೆ ಅಸಮಾಧಾನವಿದ್ದು, ಪಕ್ಷ ತೊರೆಯುತ್ತೇನೆ ಎಂಬ ಚರ್ಚೆಗಳು ನಡೆದಿವೆ. ನಾನು ಮತ್ತೆ ಮತ್ತೆ ನನ್ನ ನಿಲುವನ್ನು ಪ್ರತಿಪಾದಿಸಿದ್ದೇನೆ. ಕಳೆದ ಕೆಲವು ದಿನಗಳಿಂದ ಅನೇಕ ನಾಯಕರು ನನ್ನ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ, ಹಿಂದಿನ ದಿನ ನಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದೆ ಎಂಬ ಸುದ್ದಿ ಇತ್ತು. ಇದು ಸ್ಪಷ್ಟವಾಗಿ ಸುಳ್ಳು. ಈ ಸುದ್ದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. ಏಕೆಂದರೆ ನಾನು ನಿಜವಾಗಿ ನನ್ನ ಜೀವನದಲ್ಲಿ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯನ್ನು ಭೇಟಿ ಮಾಡಿಲ್ಲ ಎಂದು ಮುಂಡೆ ಇದೇ ವೇಳೆ ಸ್ಪಷ್ಟಪಡಿಸಿದರು.
‘ಖಾತೋ ನಾತಿ ಖಾವನೋ ದೇಗೇ ನಾತಿ’ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ನನಗೆ ಯಾವಾಗಲೂ ನೆನಪಾಗುತ್ತವೆ. ಇದರಿಂದಾಗಿ ಅವರ ಆಲೋಚನೆಗಳು ನನಗೆ ತುಂಬಾ ಇಷ್ಟವಾಗುತ್ತವೆ ಎಂದು ಪಂಕಜಾ ಮುಂಡೆ ಹೇಳಿದ್ದಾರೆ. ಸದ್ಯ ಶರದ್ ಪವಾರ್ ಅವರ ಎನ್‌ಸಿಪಿ ಇನ್ನಿಲ್ಲ. ಬಾಳಾಸಾಹೇಬ್ ಠಾಕ್ರೆಯವರ ಶಿವಸೇನೆ ಇನ್ನಿಲ್ಲ. ಆದರೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಬಿಜೆಪಿ ಪಕ್ಷ ಹಾಗೆಯೇ ಇರಬೇಕೆಂದು ನಾನು ಬಯಸುತ್ತೇನೆ ಎಂದು ಪಂಕಜಾ ಮುಂಡೆ ಹೇಳಿದ್ದಾರೆ.
ನಾನು ಯಾರನ್ನೂ ಭೇಟಿಯಾಗಿಲ್ಲ: ನನ್ನ ಪ್ರವೇಶದ ಬಗ್ಗೆ ನಾನು ಇನ್ನೂ ಯಾವುದೇ ಪಕ್ಷದ ನಾಯಕರನ್ನು ಭೇಟಿ ಮಾಡಿಲ್ಲ. ನನಗೆ ತುಂಬಾ ದುಃಖವಾಗಿದೆ. ನಮ್ಮ ಚರ್ಚೆಗಳು ಈಗ ಎಲ್ಲಿಗೆ ಹೋಗುತ್ತಿವೆ? ಡ್ರಗ್ಸ್ ಸುಲಭವಾಗಿ ಪತ್ತೆಯಾಗುತ್ತದೆ. ಮಹಿಳೆಯರನ್ನು ನಿಂದಿಸಲಾಗುತ್ತದೆ. ಇದು ಯಾರ ವೈಫಲ್ಯ. ನಾನು ಇದೀಗ ತುಂಬಾ ಗೊಂದಲಕ್ಕೊಳಗಾಗಿದ್ದೇನೆ. ನಾನು ವಿಶ್ರಾಂತಿ ಪಡೆಯಬೇಕು. ರಾಜಕೀಯದಿಂದ ಹೊರಬರಲು ನಾನು ಹಿಂತಿರುಗಿ ನೋಡುವುದಿಲ್ಲ. ಆದರೆ ಈಗ ಒಂದರಿಂದ ಎರಡು ತಿಂಗಳು ಬಿಡುವು ಮಾಡಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಸಹೋದರ ಮಂತ್ರಿಯಾದರೆ ಹೆಚ್ಚು ಖುಷಿಯಾಗುತ್ತಾನೆ: ನಾಲ್ಕು ದಿನಗಳ ಹಿಂದೆ ಧನಂಜಯ್ ಮುಂಡೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರು ಮಂತ್ರಿಯಾಗುತ್ತಿದ್ದಂತೆ ನಾನು ಅವರನ್ನು ಮೆಚ್ಚಿದೆ. ಬೇರೆಯವರು ಸಚಿವರಾಗುವುದಕ್ಕಿಂತ ನನ್ನ ಸಹೋದರ ಸಚಿವರಾದರೆ ಅವರಿಗೆ ಹೆಚ್ಚು ಖುಷಿ. ಆದರೆ ಇವತ್ತು ಆ ಫೋಟೋ ಯಾಕೆ ಟ್ವೀಟ್ ಮಾಡಿದ್ದಾರೆ ಅಂತ ಗೊತ್ತಿಲ್ಲ ಅಂತ ಪಂಕಜಾ ಮುಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Covid ನಿಯಮ ಉಲ್ಲಂಘನೆ: ಪಂಕಜಾ ಮುಂಡೆ ಸೇರಿ 42 ಜನರ ವಿರುದ್ಧ FIR