ETV Bharat / bharat

’’ಮಹಾ‘‘ಅಧಿವೇಶನ: ಡೆಪ್ಯುಟಿ ಸ್ಪೀಕರ್​ ವಜಾಕ್ಕೆ ಪ್ರತಿಪಕ್ಷಗಳ ಹೋರಾಟ.. ಅತ್ತ ಮೂರನೇ ಬಾರಿ ಪವಾರ್​ ಭೇಟಿ ಮಾಡಿದ ಪವಾರ್​!! - ಜಯಂತ್ ಪಾಟೀಲ್ ಪ್ರಸ್ತಾಪಿಸಿದ ವಿಚಾರ

ಮಹಾರಾಷ್ಟ್ರದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನವೇ ವಿರೋಧ ಪಕ್ಷಗಳು ಕಾನೂನಿನ ಪ್ರಕಾರ ಕೌನ್ಸಿಲ್ ಉಪ ಅಧ್ಯಕ್ಷರಾಗಿರುವ ನೀಲಂ ಗೋರ್ಹೆ ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿವೆ.

MH Opposition parties  demand removal of Neelam Gorhe  Council deputy chairperson  ಮಹಾ ಮುಂಗಾರು ಅಧಿವೇಶನ  ಶಿಂಧೆ ಪಕ್ಷ ಸೇರಿದ ನೀಲಂ ಗೋರ್ಹೆ  ಸ್ಪೀಕರ್​ನಿಂದ ತೆಗೆದು ಹಾಕುವಂತೆ ಪ್ರತಿಪಕ್ಷಗಳ ಹೋರಾಟ  ಇಂದಿನಿಂದ ಮುಂಗಾರು ಅಧಿವೇಶನ ಪ್ರಾರಂಭ  ಉಪ ಅಧ್ಯಕ್ಷರಾಗಿ ನೀಲಂ ಗೋರ್ಹೆ  ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ  ಜಯಂತ್ ಪಾಟೀಲ್ ಪ್ರಸ್ತಾಪಿಸಿದ ವಿಚಾರ  ಮಹಾರಾಷ್ಟ್ರ ಎನ್‌ಸಿಪಿ ಬಿಕ್ಕಟ್ಟು
ಮಹಾ ಮುಂಗಾರು ಅಧಿವೇಶನ
author img

By

Published : Jul 17, 2023, 5:59 PM IST

ಮುಂಬೈ, ಮಹಾರಾಷ್ಟ್ರ: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನ ಪರಿಷತ್​ನ ಮೊದಲ ದಿನವಾದ ಇಂದು ಉಪಸಭಾಪತಿ ಸ್ಥಾನದ ವಿಚಾರವಾಗಿ ವಾಗ್ವಾದ ನಡೆಯಿತು . ಅಜಿತ್ ಪವಾರ್ ಅವರ ಗುಂಪು ಅಧಿಕಾರಕ್ಕೆ ಬಂದ ಮೇಲೆ ಹಲವು ರಾಜಕೀಯ ಸಮೀಕರಣಗಳು ಬದಲಾಗಿವೆ. ವಿಧಾನ ಪರಿಷತ್ ಉಪಸಭಾಪತಿ ನೀಲಂ ಗೋರ್ಹೆ ಅವರು ಉದ್ಧವ್ ಠಾಕ್ರೆ (ಉಬಾತ) ಶಿವಸೇನೆ ತೊರೆದು ಶಿಂಧೆ ಗುಂಪಿಗೆ ಸೇರಿದ್ದಾರೆ. ಇಂದು ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು ವಿಧಾನ ಪರಿಷತ್ತಿಗೆ ಮುತ್ತಿಗೆ ಹಾಕಿ ಸದನದಿಂದ ನಿರ್ಗಮಿಸಿದವು.

ಜಯಂತ್ ಪಾಟೀಲ್ ಪ್ರಸ್ತಾಪಿಸಿದ ವಿಚಾರ: ಅಜಿತ್ ಪವಾರ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ರಾಜಕೀಯ ಸಮೀಕರಣಗಳು ಸಂಪೂರ್ಣ ಬದಲಾಗಿವೆ. ಅದರಲ್ಲೂ ಆಡಳಿತಾರೂಢ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಪ್ರತಿಪಕ್ಷಗಳು ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಸವಾಲೊಡ್ಡಲು ಹಲವು ಸಮಸ್ಯೆಗಳಿವೆ. ಉಪ ಸ್ಪೀಕರ್ ನೀಲಂ ಗೋರ್ಹೆ ಅವರು ಉದ್ಧವ್ ಠಾಕ್ರೆ ಅವರ ಬೆಂಬಲವನ್ನು ತೊರೆದು ಶಿಂಧೆ ಗುಂಪಿಗೆ ಸೇರಿದ ಕಾರಣ ಪ್ರತಿಪಕ್ಷವೂ ಅವರ ಸ್ಥಾನಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಈ ಕಾರಣಕ್ಕೆ ಇಂದು ವಿಧಾನಪರಿಷತ್​ನಲ್ಲಿ ಅಧಿವೇಶನ ಆರಂಭವಾದ ಬಳಿಕ ಶಾಸಕ ಜಯಂತ್ ಪಾಟೀಲ್ ಸದನದಲ್ಲಿ ವಿಷಯ ಪ್ರಸ್ತಾಪಿಸಿ ನೀಲಂ ಗೊರ್ಹೆ ಹುದ್ದೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಉಪಸಭಾಪತಿ ಉತ್ತರ ಹೀಗಿದೆ: ಜಯಂತ್ ಪಾಟೀಲ್ ಅವರ ಆಕ್ಷೇಪಕ್ಕೆ ಪ್ರತಿಪಕ್ಷಗಳು ಬೆಂಬಲ ಸೂಚಿಸಿದ್ದರಿಂದ ಸದನದಲ್ಲಿ ಗದ್ದಲ ಆರಂಭವಾಯಿತು. ಪ್ರತಿಪಕ್ಷಗಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪಸಭಾಪತಿ ನೀಲಂ ಗೊರ್ಹೆ, ಪ್ರತಿಪಕ್ಷಗಳ ಆಕ್ಷೇಪಣೆ ಇದ್ದಲ್ಲಿ ಗುಂಪಿನ ಸಭೆಯಲ್ಲಿ ಚರ್ಚಿಸಬೇಕಿತ್ತು. ಆದರೆ, ಸಂವಿಧಾನ ಸಭೆಯ ವೇಳೆ ಪ್ರತಿಪಕ್ಷಗಳು ಗೈರುಹಾಜರಾಗಿದ್ದರಿಂದ ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದರು. ಉಪಸಭಾಪತಿ ಅವರ ನಿರ್ಧಾರದಿಂದ ವಿಪಕ್ಷಗಳು ತೃಪ್ತರಾಗದ ಕಾರಣ ಆಕ್ರೋಶದ ನಿಲುವು ತಳೆದು ಸದನದಿಂದ ನಿರ್ಗಮಿಸಿದವು.

ಪ್ರತಿಪಕ್ಷಗಳ ಆಕ್ಷೇಪವೇನು?: ಈ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಅಂಬಾದಾಸ್ ದಾನ್ವೆ, ನೀಲಂ ಗೊರ್ಹೆ ಅವರನ್ನು ಅನರ್ಹಗೊಳಿಸಿದ ಕುರಿತು ಕಾರ್ಯದರ್ಶಿಗೆ ಪತ್ರ ನೀಡಲಾಗಿದೆ. ಆದರೆ, ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದರು. ಇನ್ನು ಠಾಕ್ರೆ ಬಣದ ಶಿವಸೇನೆ ನಾಯಕ ಶಾಸಕ ಅನಿಲ್ ಪರಬ್ ಮಾತನಾಡಿ, ಕಾನೂನು ಪ್ರಕಾರ ಉಪ ಸ್ಪೀಕರ್ ನೀಲಂ ಗೊರ್ಹೆ ಅವರನ್ನು ಅನರ್ಹಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಅವರಿಗೆ ಈ ಹುದ್ದೆಯನ್ನು ಅಲಂಕರಿಸಲು ಅವಕಾಶ ನೀಡಬಾರದು. ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಡೆಪ್ಯೂಟಿ ಸ್ಪೀಕರ್ ಆ ಕುರ್ಚಿಯನ್ನು ಅಲಂಕರಿಸಬಾರದು ಎಂದು ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ. ಆದ್ದರಿಂದ ನಾವು ಸದನವನ್ನು ಬಹಿಷ್ಕರಿಸಿದ್ದೇವೆ ಅಂತಾ ಪರಬ್​ ಹೇಳಿದ್ದಾರೆ.

ಓದಿ: ವಿಪಕ್ಷಗಳ ಸಭೆ: ಬೆಂಗಳೂರಿಗೆ ಬಂದಿಳಿದ ಸೋನಿಯಾ, ರಾಹುಲ್​, ಅಖಿಲೇಶ್​, ಮಮತಾ ಸೇರಿ ಇನ್ನೂ ಹಲವು ಗಣ್ಯರು!

ಮಹಾರಾಷ್ಟ್ರ ಎನ್‌ಸಿಪಿ ಬಿಕ್ಕಟ್ಟು: ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಮತ್ತೊಮ್ಮೆ ತೀವ್ರಗೊಂಡಿದೆ. ಅಜಿತ್ ಪವಾರ್ ಬಣದ ನಾಯಕರು ಸೋಮವಾರ ಮುಂಬೈನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಮತ್ತೆ ಭೇಟಿ ಮಾಡಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅವರ ಬಣದ ಎನ್‌ಸಿಪಿ ಶಾಸಕರು ಸತತ ಎರಡನೇ ದಿನವಾದ ಸೋಮವಾರ ಶರದ್ ಪವಾರ್ ಅವರನ್ನು ಭೇಟಿಯಾದರು. ಮುಂಬೈನ ವೈ ಬಿ ಚವಾಣ್ ಸೆಂಟರ್ ನಲ್ಲಿ ಈ ಸಭೆ ನಡೆದಿದೆ. ಎನ್‌ಸಿಪಿಯಲ್ಲಿ ಬಂಡಾಯದ ನಂತರ ಶರದ್ ಪವಾರ್ ಜೊತೆ ಅಜಿತ್ ಪವಾರ್ ನಡೆಸುತ್ತಿರುವ ಮೂರನೇ ಸಭೆ ಇದಾಗಿದೆ. ಈ ಸಭೆಯ ನಂತರ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ನಾವು ಅಜಿತ್ ಪವಾರ್ ಅವರೊಂದಿಗೆ ಬಂದಿದ್ದೇವೆ ಎಂದು ಹೇಳಿದರು.

ಅವರ ನೇತೃತ್ವದಲ್ಲಿ ಪಕ್ಷ ಒಗ್ಗಟ್ಟಾಗಿ ಉಳಿಯಬೇಕು ಎಂದು ಮನವಿ ಮಾಡಿದ್ದೇವೆ. ಅವರು ನಮ್ಮ ಮಾತನ್ನು ಆಲಿಸಿದ್ದಾರೆ. ಆದರೆ, ಈ ಬಗ್ಗೆ ಏನನ್ನೂ ಹೇಳಲಿಲ್ಲ. ಮಂಗಳವಾರ ದೆಹಲಿಯಲ್ಲಿ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ತಾವು ಮತ್ತು ಅಜಿತ್ ಪವಾರ್ ಪಾಲ್ಗೊಳ್ಳಲಿದ್ದೇವೆ ಎಂದು ಪಟೇಲ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಭಾನುವಾರ (ಜುಲೈ 16) ಮುಂಬೈನ ವೈಬಿ ಚವಾಣ್ ಸೆಂಟರ್‌ನಲ್ಲಿ ಅಜಿತ್ ಪವಾರ್ ಬಣದ ನಾಯಕರು ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ರಾಜ್ಯದಲ್ಲಿ ರಾಜಕೀಯ ಸಂಚಲನ ಮೂಡಿತ್ತು. ಅಜಿತ್ ಪವಾರ್ ಹೊರತುಪಡಿಸಿ, ಹಸನ್ ಮುಶ್ರಿಫ್, ಛಗನ್ ಭುಜಬಲ್, ಅದಿತಿ ತತ್ಕರೆ ಮತ್ತು ದಿಲೀಪ್ ವಲ್ಸೆ ಪಾಟೀಲ್ ಶರದ್ ಪವಾರ್ ಅವರನ್ನು ಭೇಟಿಯಾದರು. ಒಟ್ಟಿನಲ್ಲಿ ಅಜಿತ್​ ಪವಾರ್​ ನಾಲ್ಕು ದಿನಗಳಲ್ಲಿ ಮೂರನೇ ಬಾರಿ ಶರದ್​ ಪವಾರ್​ನ್ನು ಭೇಟಿ ಮಾಡಿದ್ದು, ಅವರ ನಡೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.