ETV Bharat / bharat

ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ - ಮುಂಬೈ ಪೊಲೀಸರು

ಮುಂಬೈ ನಗರದ ಕರಿ ರಸ್ತೆಯ ಅವಿಘ್ನ ಪಾರ್ಕ್‌ ಕಟ್ಟಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳವು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

Avighna building in Mumbai
ಅವಿಘ್ನ ಪಾರ್ಕ್‌ ಬಹುಮಹಡಿ ಕಟ್ಟಡ
author img

By

Published : Dec 15, 2022, 12:50 PM IST

ಮುಂಬೈ: ನಗರದ ಕರಿ ರಸ್ತೆಯ ಅವಿಘ್ನ ಪಾರ್ಕ್‌ ಬಹುಮಹಡಿ ಕಟ್ಟಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಮುಂಬೈನ ಮಹಾದೇವ ಪಲವ್ ಮಾರ್ಗದ ಕರಿ ರಸ್ತೆಯ ಭಾರತ್ ಮಾತಾ ಚಿತ್ರಮಂದಿರದ ಎದುರಿಗೆ ಇರುವ ಅವಿಘ್ನಾ ಪಾರ್ಕ್‌ನ ಕಟ್ಟಡದ ಒಂದು ಅಪಾರ್ಟ್​ಮೆಂಟ್​​​ನಲ್ಲಿ ಬೆಳಗ್ಗೆ 10.45ಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು, ಅಗ್ನಿ ಶಾಮಕ ದಳಕ್ಕೆ ಜನರು ಮಾಹಿತಿ ತಲುಪಿಸಿದ್ದಾರೆ. ಕೂಡಲೇ ಅಗ್ನಿ ಶಾಮಕ ದಳ, ಮುಂಬೈ ಪೊಲೀಸರು, ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಪ್ರಯತ್ನಿಸಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ವರ್ಷ ಬೆಂಕಿ ಅವಘಡ: ಹಿಂದಿನ ವರ್ಷವೂ ಅವಿಘ್ನ ಪಾರ್ಕ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು, ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ವ್ಯಕ್ತಿಯೊಬ್ಬ ಕಟ್ಟಡದಿಂದ ಹೊರ ಜಿಗಿದು ಮೃತಪಟ್ಟಿದ್ದನು. ಇದೀಗ ಅದೇ ಕಟ್ಟಡದ ಒಂದು ಅಪಾರ್ಟ್​ಮೆಂಟ್​​ನಲ್ಲಿ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿ ಸುರಕ್ಷತೆ ವಿಚಾರ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ:ಪೊಲೀಸ್ ಕಾನ್​ಸ್ಟೇಬಲ್​ ನೇಮಕಾತಿ: ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಅಡ್ಡದಾರಿ ಹಿಡಿದ ಯುವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.