ನಾಂದೇಡ್( ಮಹಾರಾಷ್ಟ್ರ): ಚಿಕ್ಕ ಮಕ್ಕಳು ಆಟವಾಡುವ ವೇಳೆ ಬಾಯಿಯೊಳಗೆ ಏನಾದ್ರೂ ವಸ್ತುಗಳನ್ನು ಹಾಕಿಕೊಂಡು ಪೋಷಕರನ್ನು ಪೇಚಾಟಕ್ಕೆ ಸಿಲುಕಿಸುತ್ತಾರೆ. ಹೌದು, ಮಹಾರಾಷ್ಟ್ರದ ನಾಂದೇಡ್ದ ಹಿಂಗೋಳಿಯಲ್ಲಿ ಇದೇ ರೀತಿಯ ಘಟನೆಯೊಂದು ಮತ್ತೆ ಮರುಕಳುಸಿದೆ. ಹಿಂಗೋಳಿಯ 4 ವರ್ಷದ ಬಾಲಕ 3 ಇಂಚಿನ ಲೋಹದ ಹನುಮಂತನ ಮೂರ್ತಿಯನ್ನು ನುಂಗಿದ್ದಾನೆ. ಚಿಕ್ಕ ಹನುಮನ ಮೂರ್ತಿ ಮಗುವಿನ ಅನ್ನನಾಳದಲ್ಲಿ ಸಿಕ್ಕಿಬಿದ್ದಿದೆ.
ಮಗುವಿನ ಅನ್ನನಾಳದಲ್ಲಿ ಹನುಮಂತನ ಮೂರ್ತಿ ಸಿಕ್ಕಿಬಿದ್ದರಿಂದ, ಬಾಲಕನ ಪ್ರಾಣಕ್ಕೆ ಕುತ್ತು ಎದುರಾಗಿತ್ತು. ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಪೋಷಕರು ಮಗುವನ್ನು ಕರೆದುಕೊಂಡು ವೈದ್ಯರ ಬಳಿಗೆ ಹೋದ್ದಾರೆ. ವೈದ್ಯರು ತಡ ಮಾಡದೇ ಮಗುವಿನ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಹುನುಮಂತನ ಮೂರ್ತಿಯನ್ನು ವೈದ್ಯಕೀಯ ಸಾಧನ ಬಳಸಿ ಹೊರತೆಗೆಲು ಯಶಸ್ವಿಯಾದರು. ಒಂದು ನಿಮಿಷ ಹತ್ತು ಸೆಕೆಂಡುಗಳಲ್ಲಿ ಮಗುವಿನ ಅನ್ನನಾಳದಲ್ಲಿ ಸಿಲುಕಿಕೊಂಡಿದ್ದ ಚಿಕ್ಕ ಹನುಮನ ಮೂರ್ತಿಯನ್ನು ವೈದ್ಯ ಡಾ.ನಿತಿನ್ ಜೋಶಿ ಅವರು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಮಗು ನುಂಗಿರುವ ಚಿಕ್ಕ ಹನುಮನ ಮೂರ್ತಿ ಲಾಕೆಟ್ ರೀತಿಯಿದ್ದು, ಅದನ್ನು ಚೈನ್ನಲ್ಲಿ ಸೇರಿಸಿ ಸಾಮಾನ್ಯವಾಗಿ ಕೊರಳಲ್ಲಿ ಹಾಕಿಕೊಳ್ಳಲು ಬಳಸುತ್ತಾರೆ. ಮಗು ಆಟವಾಡುತ್ತಾ ಆ ಹನುಮಂತ ಮೂರ್ತಿಯನ್ನು ಬಾಯಿಯಲ್ಲಿ ಹಾಕಿಕೊಂಡಿದೆ. ವೈದ್ಯರ ನೆರವಿನಿಂದ ಆ ಚಿಕ್ಕ ಹನುಮಂತ ಮೂರ್ತಿಯನ್ನು ಹೊರೆತೆಗೆದಿದ್ದಾರೆ. ಇದರಿಂದ ಮಗುವಿನ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ತೀವ್ರ ಪೇಚಾಟಕ್ಕೆ ಸಿಲುಕಿದ ಮಗುವಿನ ಪೋಷಕರು: ಆಟವಾಡುವಾಗ ಮಕ್ಕಳು ಏನು ಬಾಯಿಗೆ ಹಾಕಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬಾಯಿಯಲ್ಲಿ ಏನನ್ನಾದರೂ ಅಗಿಯುವಾಗ, ಅದು ಗಂಟಲಿಗೆ ಸಿಲುಕಿಕೊಳ್ಳುತ್ತದೆ ಅಥವಾ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಹೀಗಾದರೆ ಕುಟುಂಬದವರು ತೀವ್ರ ಪೇಚಾಟಕ್ಕೆ ಸಿಲುಕಿಕೊಳ್ಳುತ್ತಾರೆ. ಹಿಂಗೋಳಿಯ 4 ವರ್ಷದ ಬಾಲಕ ಮೂರು ಇಂಚಿನ ಲೋಹದ ಹನುಮಂತನನ್ನು ನುಂಗಿದ್ದಾನೆ. ಈ ವಿಗ್ರಹವು ಮಗುವಿನ ಅನ್ನನಾಳದಲ್ಲಿ ಸಿಲುಕಿಕೊಂಡಿದೆ. ಇದಾದ ಬಳಿಕ ಅವರ ಕುಟುಂಬದ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಧಾವಂತಕ್ಕೆ ಮುಂದಾದರು.
ಹಿಂಗೋಲಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾಗ ಹಣ ಹೊಂದಿಸಲು ಕುಟುಂಬದವರು ಸರಾಫ್ ಬಳಿ ತೆರಳಿದ್ದರು. ಈ ವೇಳೆ ಸರಾಫ್ ನಲ್ಲಿರುವ ಡಾ.ನಾಂದೇಡ್ ಅವರ ಬಳಿ ಮಗುವನ್ನು ಚಿಕಿತ್ಸೆಗಾಗಿ ಕರೆದೊಯ್ದರು. ಬಳಿಕ ಅವರು, ನಿತಿನ್ ಜೋಶಿಯವರ ಗ್ಯಾಲಕ್ಸಿ ಡೈಜೆಸ್ಟಿವ್ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದರು. ಅದರಂತೆ ವೈದ್ಯರನ್ನು ಸಂಪರ್ಕಿಸಲಾಯಿತು.
ನಿಟ್ಟುಸಿರು ಬಿಟ್ಟ ಪೋಷಕರು: ತಡಮಾಡದೇ ಆ ಮಗುವಿನ ಪೋಷಕರು, ತಜ್ಞ ಡಾ.ನಿತಿನ್ ಜೋಶಿ ಅವರ ಆಸ್ಪತ್ರೆ ತಲುಪಿದರು. ಮಧ್ಯಾಹ್ನ 12 ಗಂಟೆಗೆ ಮಗು ಹನುಮಂತ ಮೂರ್ತಿ ನುಂಗಿತ್ತು. ಸಂಜೆ 6.38ರವರೆಗೂ ಮಗು ವಿಪರೀತ ನೋವಿನಿಂದ ನರಳುತ್ತಿತ್ತು. ಜೊತೆಗೆ ಪೋಷಕರ ಆತಂಕವೂ ಮಿತಿಮೀರಿತ್ತು. ಈ ವೇಳೆ, ದೇವರಂತೆ ಓಡೋಡಿ ಬಂದ ಡಾಕ್ಟರ್, ಮಗುವಿನ ಅನ್ನನಾಳದಲ್ಲಿ ಸಿಲುಕಿದ್ದ ಹನುಮಂತನ ಮೂರ್ತಿಯನ್ನು ಕೇವಲ ಒಂದು ನಿಮಿಷ ಹತ್ತು ಸೆಕೆಂಡುಗಳಲ್ಲಿ ಹೊರತೆಗೆದಿದ್ದಾರೆ. ಬಳಿಕ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಪ್ರತಿಯೊಬ್ಬ ಪೋಷಕರಿಗೂ ಮಗುವಿನ ಬಗ್ಗೆ ಇರಲಿ ಎಚ್ಚರಿಕೆ: ನಿಮ್ಮ ಮಗುವಿಗೆ ಯಾವುದೇ ವಸ್ತುವನ್ನು ಕೊಡುವ ಮೊದಲು ಅಥವಾ ಕುತ್ತಿಗೆಗೆ ಕಟ್ಟುವ ಮೊದಲು, ಆ ವಸ್ತುವು ಅವನ ಆರೋಗ್ಯ ಮತ್ತು ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಬೇಕು ಎಂದು ಡಾ.ನಿತಿನ್ ಜೋಶಿ ತಿಳಿಸಿದರು.
ಪ್ರತಿಯೊಬ್ಬ ಪೋಷಕರು ತನ್ನ ಪುಟ್ಟ ಮಗುವಿನ ಕುತ್ತಿಗೆ ಅಥವಾ ಕೈಗೆ ಯಾವುದೇ ವಸ್ತುವನ್ನು ಕಟ್ಟಬಾರದು ಅಥವಾ ನೀಡಬಾರದು, ಅದು ಮಗುವಿನ ಪ್ರಾಣಕ್ಕೆ ಅಪಾಯವನ್ನುಂಟು ಮಾಡುತ್ತದೆ. ಕುತ್ತಿಗೆ ಅಥವಾ ಕೈಗೆ ಕಟ್ಟಿರುವ ವಸ್ತುವಿನಿಂದ ಮಗು ತನ್ನ ಗಂಟಲಿಗೆ ಸಿಲುಕಿಕೊಳ್ಳುವುದನ್ನು ತಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಎಚ್ಚರ... ಕಾಗದದ ಆಹಾರ ಕಂಟೇನರ್ನಲ್ಲಿರುತ್ತೆ ಅಪಾಯಕಾರಿ ಕೆಮಿಕಲ್: ಅಧ್ಯಯನ