ETV Bharat / bharat

ಬಿರುಕು ಬಿಟ್ಟಿರುವ 'ಗೇಟ್‌ವೇ ಆಫ್ ಇಂಡಿಯಾ', ಸರ್ಕಾರ ಸರಿಪಡಿಸಲಿದೆ: ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿಕೆ

ಭಾರತವನ್ನು 150 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು ಆಳಿದರು. ಮುಂಬೈ ಗೇಟ್‌ವೇ ಆಫ್ ಇಂಡಿಯಾವನ್ನು ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವು ನೂರು ವರ್ಷಗಳಿಗಿಂತಲೂ ಹಳೆಯದು. ಇತಿಹಾಸದ ಹಿನ್ನೆಲೆಯಲ್ಲಿ ಹೊಂದಿರುವ ಈ ಕಟ್ಟಡ ಬಿರುಕು ಬಿಟ್ಟಿದೆ.

MH Gateway of India Cracked
ಗೇಟ್‌ವೇ ಆಫ್ ಇಂಡಿಯಾ
author img

By

Published : Mar 9, 2023, 9:36 PM IST

Updated : Mar 10, 2023, 10:39 AM IST

ಕೇಂದ್ರ ಸಚಿವ ಹರ್ದೀಪ್ ಪುರಿ ಹೇಳಿಕೆ

ಮುಂಬೈ (ಮಹಾರಾಷ್ಟ್ರ): ಭಾರತವನ್ನು 150 ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು ಆಳಿದರು. ಮುಂಬೈ ಗೇಟ್‌ವೇ ಆಫ್ ಇಂಡಿಯಾವನ್ನು ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವು ನೂರು ವರ್ಷಗಳಿಗಿಂತಲೂ ಹಳೆಯದು. ಇತಿಹಾಸದ ಹಿನ್ನೆಲೆಯಲ್ಲಿ ಹೊಂದಿರುವ ಈ ಕಟ್ಟಡ ಇದೀಗ ಬಿರುಕು ಬಿಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪುರಾತತ್ವ ಇಲಾಖೆ ವರದಿ ಕಳುಹಿಸಿದೆ. ಈ ನಡುವೆ ಹರ್ದೀಪ್ ಪುರಿ ಅವರು, ''ಈ ಐತಿಹಾಸಿಕ ಕಟ್ಟಡವನ್ನು ದುರಸ್ತಿ ಮಾಡಿ ಮತ್ತು ಸಂರಕ್ಷಿಸಿ ಅದನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

'ಗೇಟ್‌ವೇ ಆಫ್ ಇಂಡಿಯಾ'ದಲ್ಲಿ ಬಿರುಕು: ಬ್ರಿಟಿಷರು ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ನಂತರ ಅವರು ಭಾರತವನ್ನು ಆಳಿದರು. ಬ್ರಿಟಿಷರು ಬಂದ ದಾರಿಯಲ್ಲಿಯೇ ಭಾರತಕ್ಕೆ ಬಂದ ಇಂಗ್ಲೆಂಡಿನ 5ನೇ ಕಿಂಗ್ ಜಾರ್ಜ್ ಅವರನ್ನು ಸ್ವಾಗತಿಸಲು 1911ರಲ್ಲಿ, ಗೇಟ್‌ವೇ ಆಫ್ ಇಂಡಿಯಾ ಕಟ್ಟಡ ಕಟ್ಟಲು ಪ್ರಾರಂಭಿಸಲಾಯಿತು. ಈ ಕಟ್ಟಡದ ನಿರ್ಮಾಣವು 1924ರಲ್ಲಿ ಪೂರ್ಣಗೊಂಡಿತು. ಅಂದಿನಿಂದ, ಕಟ್ಟಡವು ಸಮುದ್ರದ ಅಲೆಗಳು, ಮಳೆ, ಬಿಸಿಲು ಮತ್ತು ಚಳಿ ಸಹಿಸಿಕೊಂಡಿದೆ.

ಸರ್ಕಾರಕ್ಕೆ ವರದಿ ಸಲ್ಲಿಕೆ: ಐತಿಹಾಸಿಕ ಗೇಟ್‌ವೇ ಆಫ್ ಇಂಡಿಯಾ ಇತ್ತೀಚೆಗೆ ರಚನಾತ್ಮಕವಾದ ಪರಿಶೋಧನೆಗೆ ಒಳಪಡಿಸಲಾಯಿತು. ಕಟ್ಟಡದಲ್ಲಿ ಹಲವಾರು ಬಿರುಕುಗಳು, ಈ ಬಿರುಕಿನ ನಡುವೆ ಸಸ್ಯಗಳು ಬೆಳೆದಿವೆ, ಗುಮ್ಮಟದ ಜಲನಿರೋಧಕ ಮತ್ತು ಸಿಮೆಂಟ್​ನ ಕಾಂಕ್ರೀಟ್‌ ಕೂಡಾ ಹಾನಿಯಾಗಿರುವುದನ್ನು ಪರಿಶೀಲನೆಯಿಂದ ಕಂಡು ಹಿಡಿದಿದೆ. ಇತ್ತೀಚೆಗೆ ಬೀಸಿದ ಚಂಡಮಾರುತದ ವೇಳೆ ಕಟ್ಟಡ ಪಕ್ಕದ ತಡೆಗೋಡೆ ಕುಸಿದಿದ್ದು, ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಗೇಟ್ ವೇ ಆಫ್ ಇಂಡಿಯಾ ಬಿರುಕು ಬಿಟ್ಟಿರುವ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಗೇಟ್ ಆಫ್ ಇಂಡಿಯಾ ದುರಸ್ತಿಗೆ ಕ್ರಮ: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಈ ಐತಿಹಾಸಿಕ ಕಟ್ಟಡವನ್ನು ದುರಸ್ತಿಗೊಳಿಸಿ ಸಂರಕ್ಷಿಸಲಿವೆ. ಐತಿಹಾಸಿಕ ಸ್ಮಾರಕ ಸಂರಕ್ಷಿಸಲು ಸರ್ಕಾರದ ಆದ್ಯತೆ ಮತ್ತು ಅದನ್ನು ನೋಡಿಕೊಳ್ಳಲಾಗುವುದು ಎಂದು ಹರ್ದೀಪ್ ಪುರಿ ಪ್ರತಿಕ್ರಿಯಿಸಿದ್ದಾರೆ.

ಗೇಟ್ ವೇ ಆಫ್ ಇಂಡಿಯಾದ ಇತಿಹಾಸ: ಬ್ರಿಟಿಷರು ಬಂದ ದಾರಿಯಲ್ಲಿಯೇ ಭಾರತಕ್ಕೆ ಬಂದ ಇಂಗ್ಲೆಂಡಿನ 5ನೇ ಕಿಂಗ್ ಜಾರ್ಜ್ ಅವರನ್ನು ಸ್ವಾಗತಿಸಲು 1911ರಲ್ಲಿ, ಗೇಟ್‌ವೇ ಆಫ್ ಇಂಡಿಯಾ ಕಟ್ಟಡವನ್ನು ಕಟ್ಟಲು ಪ್ರಾರಂಭಿಸಲಾಯಿತು. ಅಂದಿನ ಕಾಲದ ವಿಖ್ಯಾತ ಬ್ರಿಟಿಷ್ ಕಟ್ಟಡ ನಿರ್ಮಾಪಕ ಜಾರ್ಜ್ ವಿಟೆಟ್ ಅವರು, ಸಿದ್ಧಪಡಿಸಿ ಒಪ್ಪಿಸಿದ ಹಲವಾರು ನೀಲನಕ್ಷೆಗಳಲ್ಲಿ ಕೊನೆಯ ನಕ್ಷೆಗೆ, ಆಗಸ್ಟ್ 1914 ರಂದು ಒಪ್ಪಿಗೆ ನೀಡಿದ್ದರು.

1915 ಮತ್ತು 1919ರ ಮಧ್ಯೆ ಗೇಟ್ ವೇ ಆಫ್ ಇಂಡಿಯಾ ಕಟ್ಟಡದ ನಿರ್ಮಾಣ ಕಾರ್ಯ ಶುರುವಾಯಿತು. ಇದಕ್ಕೆ ಪೂರ್ವ ಸಿದ್ಧತೆಯಾಗಿ ಇದರ ಶಿಲಾನ್ಯಾಸವನ್ನು 1911ರ ಮಾರ್ಚ್ 31ಕ್ಕೆ ಆಗಿನ ಬೊಂಬಾಯಿನ ಗವರ್ನರ್, ಸರ್ ಜಾರ್ಜ್ ಸಿಢ್ ನಮ್ ಕ್ಲಾರ್ಕ್ ಅವರ ಹಸ್ತದಿಂದ ಮಾಡಲಾಗಿತ್ತು. ಅಧಿಕಾರಿಗಳು ಆಪ್ಪೊಲೊ ಪಿಯರ್​ನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಆ ಜಾಗದ ಮೇಲೆ ಸಮುದ್ರಕ್ಕೆ ಹೊಸದಾದ ಹಾಗೂ ಭದ್ರವಾದ ತಳಪಾಯದ ಗೋಡೆ ನಿರ್ಮಾಣ ಮಾಡಿದ್ದರು. ಅದರ ಮೇಲೆ ಕಟ್ಟಡವನ್ನು ನಿರ್ಮಿಸಲಾಯಿತು. ಈ ಕಟ್ಟಡದ ನಿರ್ಮಾಣವು 1924ರಲ್ಲಿ ಪೂರ್ಣಗೊಂಡಿತು.

ಇದನ್ನೂ ಓದಿ: ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಬಂಧಿಸಿದ ಇಡಿ..!

Last Updated : Mar 10, 2023, 10:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.