ETV Bharat / bharat

ಡೆಂಘೀ - ಮಲೇರಿಯಾ: ಒಂದೇ ದಿನದಲ್ಲಿ 32 ಸಾವಿರ ಜನರಿಗೆ ತಪಾಸಣೆ... ಅನುಮಾನಕ್ಕೆ ಕಾರಣವಾದ ನಗರಸಭೆ ವರದಿ - ಮಹಾರಾಷ್ಟ್ರದ ನಾಸಿಕ್

ಮಹಾರಾಷ್ಟ್ರದ ನಾಸಿಕ್​​ ನಗರದಲ್ಲಿ ಒಂದೇ ದಿನದಲ್ಲಿ ಸುಮಾರು 7,000 ಮನೆಗಳಿಗೆ ಭೇಟಿ ನೀಡಿ ಸುಮಾರು 32,000 ನಾಗರಿಕರಿಗೆ ಡೆಂಘೀ ಮತ್ತು ಮಲೇರಿಯಾ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ನೀಡಿರುವ ವರದಿ ಅನುಮಾನಕ್ಕೆ ಕಾರಣವಾಗಿದೆ.

Etv Bharat
Etv Bharat
author img

By

Published : Jul 22, 2023, 11:21 PM IST

ನಾಸಿಕ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್​​ ನಗರದಲ್ಲಿ ಡೆಂಘೀ ಮತ್ತು ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಒಂದೇ ದಿನದಲ್ಲಿ ಸುಮಾರು 7,000 ಮನೆಗಳಿಗೆ ಭೇಟಿ ನೀಡಿ ಸುಮಾರು 32,000 ನಾಗರಿಕರಿಗೆ ತಪಾಸಣೆ ನಡೆಸಲಾಗಿದೆ ಎಂದು ನಗರಸಭೆ ಹೇಳಿದೆ. ಆದರೆ, ಈ ತಪಾಸಣೆ ವರದಿಯನ್ನು ಕುಳಿತಲ್ಲೇ ಕಾದಗದಲ್ಲೇ ತಯಾರಿಸಲಾಗಿದೆ. ಆದ್ದರಿಂದ ಈ ವರದಿಯ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ನಾಸಿಕ್​ನಲ್ಲಿ ಡೆಂಘೀ ಮತ್ತು ಮಲೇರಿಯಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕಾಗಿ ನಾಸಿಕ್ ಮುನ್ಸಿಪಲ್ ಕಾರ್ಪೊರೇಶನ್‌ನ ಮಲೇರಿಯಾ ವಿಭಾಗವು ತಪಾಸಣೆ ಅಭಿಯಾನ ಪ್ರಾರಂಭಿಸಿದೆ. ಆದರೆ, ಒಂದೇ ದಿನದಲ್ಲಿ 6 ಸಾವಿರದ 768 ಮನೆಗಳಿಗೆ ಭೇಟಿ ನೀಡಿ 32 ಸಾವಿರದ 155 ಮಂದಿಯನ್ನು ಡೆಂಗ್ಯೂ ಮತ್ತು ಮಲೇರಿಯಾ ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿ ಸಲ್ಲಿಸಿದೆ.

ಜುಲೈ 20ರಂದು ಪುರಸಭೆಯ ಜೀವಶಾಸ್ತ್ರಜ್ಞ ಡಾ.ರಾಜೇಂದ್ರ ಟ್ರಂಬಾಕೆ ಈ ದೈನಂದಿನ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ಈಗ ವರದಿಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಲೇರಿಯಾ ವಿಭಾಗ ಈ ಅಭಿಯಾನ ನಡೆಸಲು ಸಿಬ್ಬಂದಿಯೇ ಇಲ್ಲ. ಡೆಂಘೀ ಮತ್ತು ಮಲೇರಿಯಾ ನಿಯಂತ್ರಣಕ್ಕಾಗಿ ಮನೆ - ಮನೆಗೆ ತೆರಳಿ ಸಿಬ್ಬಂದಿ ಹೇಗೆ ತಪಾಸಣೆ ನಡೆಸಿದರು?. ನಿಜವಾಗಿಯೂ 6 ಸಾವಿರದ 768 ಮನೆಗಳಲ್ಲಿ ತಪಾಸಣೆ ಮಾಡಲಾಗಿದೆಯೇ?, ಭೇಟಿಯಾದ 32 ಸಾವಿರದ 151 ನಾಗರಿಕರು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಜಿತೇಂದ್ರ ಭಾವೆ ಹೇಳಿದ್ದಾರೆ.

ಈ ವರದಿಯನ್ನು ನಾವು ಒಪ್ಪುವುದಿಲ್ಲ. ತಪಾಸಣೆಗೆ ಒಳಪಡಿಸಿದ ಜನರ ಹೆಸರನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ. ಈ ವರದಿಯನ್ನು ಕುಳಿತಲ್ಲೇ ಕಾದಗದಲ್ಲೇ ತಯಾರಿಸಲಾಗಿದೆ ಎಂದು ನಾವು ಖಚಿತವಾಗಿ ಆರೋಪಿಸುತ್ತೇವೆ. ಇಡೀ ನಾಸಿಕ್ ಮುನ್ಸಿಪಲ್ ಕಾರ್ಪೊರೇಷನ್ ನಾಗರಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಲ್ಲದೇ, ನಗರದಲ್ಲಿ ಸರಿಯಾಗಿ ಫಾಗಿಂಗ್ ಸಹ ನಡೆಸಲಾಗುತ್ತಿಲ್ಲ. ನಿಖರವಾಗಿ ಎಲ್ಲಿ ಫಾಗಿಂಗ್ ನಡೆಯುತ್ತದೆ ಎಂದು ನಾವು ತಿಳಿಯಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ರಾಜೇಂದ್ರ ಟ್ರಂಬಾಕೆ, ಈ ಅಂಕಿ - ಅಂಶಗಳು ಮೇಲ್ವಿಚಾರಕರಿಂದ ತರಿಸಿಕೊಳ್ಳಲಾಗಿದೆ. ಅದರಂತೆ ಈ ತಪಾಸಣಾ ವರದಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ತಪ್ಪಿದ್ದರೆ ಮರು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 11 ದಿನದಲ್ಲಿ 178 ಡೆಂಘೀ ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.