ETV Bharat / bharat

'ಚುನಾವಣೆ ಸೋಲು ತುಂಬಾ ಪಾಠ ಕಲಿಸಿದೆ': ಸಕ್ರಿಯ ರಾಜಕಾರಣದಿಂದ ಹೊರ ಬಂದ ಮೆಟ್ರೋ ಮ್ಯಾನ್

ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಮೆಟ್ರೋ ಮ್ಯಾನ್ ಇ. ಶ್ರೀಧರನ್ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

Metroman
ಇ. ಶ್ರೀಧರನ್
author img

By

Published : Dec 16, 2021, 7:45 PM IST

ಮಲಪ್ಪುರಂ (ಕೇರಳ): ಬಿಜೆಪಿಗೆ ಸೇರಿ ಒಂದು ವರ್ಷ ಆಗುವುದರೊಳಗೇ 'ಮೆಟ್ರೋ ಮ್ಯಾನ್' ಎಂದು ಜನಪ್ರಿಯರಾಗಿರುವ ಇ. ಶ್ರೀಧರನ್ (89)ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.

ನಿವೃತ್ತ ಮೆಟ್ರೋ ಅಧಿಕಾರಿಯಾಗಿದ್ದ ಶ್ರೀಧರನ್ ಅವರು ಈ ವರ್ಷ ಫೆಬ್ರವರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಏಪ್ರಿಲ್​ನಲ್ಲಿ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್​ ಕ್ಷೇತ್ರದಿಂದ ಇವರಿಗೆ ಬಿಜೆಪಿ ಟಿಕೆಟ್​ ನೀಡಿತ್ತು. ಆದರೆ ಯುಡಿಎಫ್​​ ಅಭ್ಯರ್ಥಿ ಶಫಿ ಪರಂಬಿಲ್​ ವಿರುದ್ಧ 3,840 ಮತಗಳ ಅಂತರದಿಂದ​​ ಸೋಲು ಕಂಡಿದ್ದರು.

1995 ರಿಂದ 2012ರವರೆಗೆ ದೆಹಲಿ ಮೆಟ್ರೋದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀಧರನ್ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಕೊಂಕಣ ರೈಲ್ವೆ ಕನಸನ್ನು ಸಾಕಾರಗೊಳಿಸಿದವರು ಕೂಡಾ ಇವರೇ. ಇವರಿಗೆ 2001ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಇವರು ಮೆಟ್ರೋ ಮ್ಯಾನ್ ಎಂದು ಜನಪ್ರಿಯರಾಗಿದ್ದರು.

ಹೆಚ್ಚಿನ ಓದಿಗೆ: ಮೆಟ್ರೋ ಮ್ಯಾನ್​ ಖ್ಯಾತಿಯ ಇ. ಶ್ರೀಧರನ್​ಗೆ ಸೋಲು.. ಕೇರಳ ಸಿಎಂ ಆಗುವ ಕನಸು ಭಗ್ನ

ಇಂದು ಮಲಪ್ಪುರಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೆಟ್ರೋ ಮ್ಯಾನ್, ಚುನಾವಣೆಯ ಸೋಲು ತನಗೆ ಹಲವಾರು ಪಾಠಗಳನ್ನು ಕಲಿಸಿದೆ. ಸಕ್ರಿಯ ರಾಜಕಾರಣವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇನೆ. ಇದರರ್ಥ ರಾಜಕೀಯದಿದಂಲೇ ಹೊರ ಬರುತ್ತಿದ್ದೇನೆಂದಲ್ಲ. 'ಸಕ್ರಿಯ ರಾಜಕಾರಣ'ದಿಂದ ಮಾತ್ರ. ರಾಜಕೀಯದಿಂದ ಮಾತ್ರ ಜನಸೇವೆ ಮಾಡಬೇಕು ಎಂದೇನಿಲ್ಲ. ಆದರೆ, 90ರ ಹರೆಯದಲ್ಲಿ ಸಕ್ರಿಯ ರಾಜಕಾರಣಕ್ಕೆ ಇಳಿಯುವುದು ಅಪಾಯಕಾರಿ ಎಂದು ಹೇಳಿದರು.

ಕೇರಳದಲ್ಲಿ ಬಿಜೆಪಿ ತನ್ನ ನೀತಿಗಳನ್ನು ಬದಲಾಯಿಸಿಕೊಂಡರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಪಡೆಯಬಹುದು ಎಂದು ಸಲಹೆ ನೀಡಿದರು. 2016ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನವನ್ನಾದರೂ ಗೆದ್ದಿದ್ದ ಬಿಜೆಪಿ, ಈ ಬಾರಿ ಇದ್ದಿದ್ದ ಒಂದು ಸ್ಥಾನವನ್ನೂ ಕಳೆದುಕೊಂಡು ಶೂನ್ಯ ಸುತ್ತಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.