ಪಾಲಕ್ಕಾಡ್ (ಕೇರಳ): ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ಕೇರಳದ ಪಾಲಕ್ಕಾಡ್ನಲ್ಲಿ ಸಾರ್ವಜನಿಕ ರ‍್ಯಾಲಿಯ್ನನುದ್ದೇಶಿಸಿ ಮಾತನಾಡಲು ಬಂದಿರುವ ಪ್ರಧಾನಿ ನರೇಂದ್ರ ಮೋದಿಗೆ 'ಮೆಟ್ರೋ ಮ್ಯಾನ್' ಎಂದು ಹೆಸರುವಾಸಿಯಾಗಿರುವ ಇ. ಶ್ರೀಧರನ್ ಸನ್ಮಾನ ಮಾಡಿದ್ದಾರೆ.
ಬಳಿಕ ಮಾತನಾಡಿದ ಶ್ರೀಧರನ್, ಪಾಲಕ್ಕಾಡ್ ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಿರುವುದಾಗಿ ತಿಳಿಸಿದರು. ಪಾಲಕ್ಕಾಡ್ಗೆ ದಿನದ 24 ಗಂಟೆಗಳ ನೀರು ಸರಬರಾಜು ಮಾಡಿಸುವೆ, ಘನತ್ಯಾಜ್ಯ ನಿರ್ವಹಣಾ ಯೋಜನೆ ಜಾರಿಗೆ ತರುವೆ ಎಂದ ಅವರು, ಮುಂದಿನ 5 ವರ್ಷಗಳಲ್ಲಿ 25 ಲಕ್ಷ ಮರಗಳನ್ನು ನೆಡುವ ಮೂಲಕ ಈ ಪ್ರದೇಶವನ್ನು ಹಸಿರಾಗಿಸುವೆ ಎಂದು ಭರವಸೆಗಳನ್ನು ನೀಡಿದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿ ವಿವಾದದಲ್ಲಿ ಸಿಲುಕಿದ ಬಾಬುಲ್ ಸುಪ್ರಿಯೋ
ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಇ. ಶ್ರೀಧರನ್ ಅವರಿಗೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಶ್ರೀಧರನ್ ಅವರು ದೆಹಲಿ ಮೆಟ್ರೋದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಮೆಟ್ರೋ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿದ್ದರು.
ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ 140 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.