ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ ನಡುವೆ ಭಾರತದ ಲೋಹದ ವಲಯದಲ್ಲಿ ಭಾರಿ ಬದಲಾವಣೆ ಕಂಡುಬಂದಿದೆ. ಲೋಹದ ವಲಯದಲ್ಲಿನ ಷೇರುಗಳು ತೀವ್ರ ಏರಿಕೆ ಕಂಡಿವೆ.
ಇಂದು ನಿಫ್ಟಿ ಲೋಹದ ಸೂಚ್ಯಂಕವು ಶೇಕಡಾ 5 ರಷ್ಟು ಏರಿಕೆಯಾಗಿದೆ. ರಷ್ಯಾದ ರಫ್ತುಗಳನ್ನು ಮೊಟಕುಗೊಳಿಸುವುದರಿಂದ ಭಾರತೀಯ ಉಕ್ಕು ತಯಾರಕರು ರಫ್ತು ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳಲು ಇದು ಪ್ರಮುಖಪಾತ್ರ ವಹಿಸಲಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಮೇಲೆ ಬೊಮ್ಮಾಯಿ ಪ್ರೀತಿ : ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿ
ಅಲ್ಯೂಮಿನಿಯಂ ಮತ್ತು ನಿಕಲ್ನಂತಹ ಕೈಗಾರಿಕಾ ಲೋಹಗಳ ಪ್ರಮುಖ ಉತ್ಪಾದಕ ರಾಷ್ಟ್ರ ರಷ್ಯಾವಾಗಿದೆ. ಇದರ ಬೆನ್ನಲ್ಲೇ ಈಗ ಜಿಂದಾಲ್ ಸ್ಟೀಲ್ ಮತ್ತು ಪವರ್ ಅದರ ಹಿಂದಿನ ಮುಕ್ತಾಯದ ಷೇರಿಗಿಂತ ಶೇಕಡಾ 6 ರಷ್ಟು ಹೆಚ್ಚು ಸ್ಥಿರವಾಗಿದೆ. ಹಾಗೆ ಟಾಟಾ ಸ್ಟೀಲ್ ಶೇಕಡಾ 6.3 ರಷ್ಟು ಹೆಚ್ಚಾಗಿದೆ.
ಹಿಂಡಾಲ್ಕೊ ಇಂಡಸ್ಟ್ರೀಸ್ ಷೇರುಗಳು 7.2 ಏರಿಕೆ ಕಂಡರೆ, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ.4.6 ರಷ್ಟು ಏರಿಕೆಯಾಗಿದೆ.
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ, ವೇದಾಂತ ಮತ್ತು ಹಿಂದೂಸ್ತಾನ್ ಕಾಪರ್ ಷೇರುಗಳು ಶೇ.3-5ರಷ್ಟು ಏರಿಕೆ ಕಂಡಿವೆ.