ETV Bharat / bharat

4.9 ಸೆಕೆಂಡ್​ಗೆ 100 ಕಿ.ಮೀ. ವೇಗದ ಬೆಂಜ್​ ಕಾರು ಲಗ್ಗೆ: ಬೆಲೆ ಎಷ್ಟು ಗೊತ್ತೇ? - ಮೇಬ್ಯಾಕ್ ಲೆಟೆಸ್ಟ್​ ಕಾರು

ಮರ್ಸಿಡಿಸ್-ಮೇಬ್ಯಾಕ್ ಜಿಎಲ್‌ಎಸ್ 600 4 ಮ್ಯಾಟಿಕ್ ಬೆಲೆ 2.43 ಕೋಟಿ ರೂ. (ಎಕ್ಸ್ ಶೋ ರೂಂ). ಅಲ್ಟ್ರಾ ಐಷಾರಾಮಿ ‘ಮರ್ಸಿಡಿಸ್-ಮೇಬ್ಯಾಕ್’ ಶ್ರೇಣಿಯಲ್ಲಿ ಇದು ಮೊದಲ ಎಸ್‌ಯುವಿ ಮತ್ತು ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮುಂದಿನ ಕಾರು ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾ ತಿಳಿಸಿದೆ.

Mercedes
Mercedes
author img

By

Published : Jun 9, 2021, 11:45 AM IST

ನವದೆಹಲಿ: ಜರ್ಮನಿಯ ಕಾರು ತಯಾರಕ ಮರ್ಸಿಡಿಸ್ ಬೆಂಜ್ ಮಂಗಳವಾರ ಭಾರತೀಯ ಮಾರುಕಟ್ಟೆಗೆ ಅಲ್ಟ್ರಾ-ಐಷಾರಾಮಿ ಎಸ್‌ಯುವಿ ಸರಣಿಯ ಮರ್ಸಿಡಿಸ್-ಮೇಬ್ಯಾಕ್ ಜಿಎಲ್‌ಎಸ್ 600 4ಮ್ಯಾಟಿಕ್ ಪರಿಚಯಿಸಿದೆ.

ಇದರ ಬೆಲೆ 2.43 ಕೋಟಿ ರೂ. (ಎಕ್ಸ್ ಶೋ ರೂಂ). ಅಲ್ಟ್ರಾ ಐಷಾರಾಮಿ ‘ಮರ್ಸಿಡಿಸ್-ಮೇಬ್ಯಾಕ್’ ಶ್ರೇಣಿಯಲ್ಲಿ ಇದು ಮೊದಲ ಎಸ್‌ಯುವಿ ಮತ್ತು ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮುಂದಿನ ಕಾರು ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾ ತಿಳಿಸಿದೆ.

ಓದಿ: ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಷೇರುಪೇಟೆ: ಸೆನ್ಸೆಕ್ಸ್​ ಅಲ್ಪ ಜಿಗಿತ

‘ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ’ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ನಾವು ಜಿಎಲ್‌ಎಸ್ 600 4ಮ್ಯಾಟಿಕ್ ತರುತ್ತೇವೆ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಹೇಳಿದರು.

ಇದು ವಿ8 3,982 ಸಿಸಿ ಪೆಟ್ರೋಲ್ ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಅನನ್ಯತೆಯೆಂದರೆ, 4.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲದು. ಇದು ಗಂಟೆಗೆ ಗರಿಷ್ಠ 250 ಕಿ.ಮೀ ವೇಗದಲ್ಲಿ ಚಲಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.