ETV Bharat / bharat

ಮೇಕೆದಾಟು ಬಗ್ಗೆ ಕೇಂದ್ರದಿಂದ ಭರವಸೆ ಸಿಕ್ಕಿದೆ, ಕರ್ನಾಟಕ ಜೊತೆಗಿನ ಮಾತುಕತೆಗೆ ಮಹತ್ವವಿಲ್ಲ: ಸ್ಟಾಲಿನ್​

author img

By

Published : Jul 19, 2021, 5:40 PM IST

ಮೇಕೆದಾಟು ಯೋಜನೆ ವಿಚಾರವಾಗಿ ನಮಗೆ ಕೇಂದ್ರ ಸರ್ಕಾರದಿಂದ ಭರವಸೆ ಸಿಕ್ಕಿದೆ. ಈ ವಿಚಾರದಲ್ಲಿ ಕರ್ನಾಟಕದೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವ ಅವಶ್ಯಕತೆ ಇಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.

Tamil Nadu CM Stalin
Tamil Nadu CM Stalin

ನವದೆಹಲಿ: ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ಮಧ್ಯೆ ಮೇಕೆದಾಟು ಯೋಜನೆ ವಿಚಾರವಾಗಿ ಗುದ್ದಾಟ ನಡೆಯುತ್ತಿದೆ. ಈ ಸಮರ ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ.

ನವದೆಹಲಿಯಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್​ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಲಶಕ್ತಿ ಸಚಿವರಿಗೆ ಮೇಕೆದಾಟು ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಂದು ಕೂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರನ್ನು ಭೇಟಿ ಮಾಡಿರುವ ಸ್ಟಾಲಿನ್​, ಕರ್ನಾಟಕದ ಮೇಕೆದಾಟು ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ನಾವು ಕರ್ನಾಟಕದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ. ಅದಕ್ಕೆ ಮಹತ್ವ ಕೂಡ ಇಲ್ಲ ಎಂದರು.

ಈ ಯೋಜನೆ ಮುಂದುವರೆಸಲು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ ಅವರಿಂದ ಭರವಸೆ ಸಿಕ್ಕಿದೆ. ಈ ಪ್ರಕರಣ ಸದ್ಯ ಸುಪ್ರೀಂಕೋರ್ಟ್​ನಲ್ಲಿದೆ. ನಾವು ಸಮಸ್ಯೆಯನ್ನು ಕಾನೂನಿನ ಮೂಲಕ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

  • மாண்புமிகு @rashtrapatibhvn அவர்களை குடியரசுத்தலைவர் மாளிகையில் சந்தித்தேன்.
    சென்னை மாகாணத்தில் மக்களால் தேர்ந்தெடுக்கப்பட்ட சட்டப்பேரவை அமைந்து நூறாண்டு நிறைவுபெற்றதற்கான விழாவுக்குத் தலைமைதாங்கி, முத்தமிழறிஞர் கலைஞரின் திருவுருவப்படத்தைத் திறந்துவைக்க அழைப்புவிடுத்தேன். pic.twitter.com/V0v6x2AmfR

    — M.K.Stalin (@mkstalin) July 19, 2021 " class="align-text-top noRightClick twitterSection" data=" ">

ಮೇಕೆದಾಟು ವಿಚಾರವಾಗಿ ಜಲಸಂಪನ್ಮೂಲ ಸಚಿವರು ಈಗಾಗಲೇ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ತಮಿಳುನಾಡಿನ ನಿಯೋಗ ಕೇಂದ್ರಕ್ಕೆ ತೆರಳಿ ಜಲಶಕ್ತಿ ಸಚಿವರಿಗೆ ಮನವಿ ಸಹ ಸಲ್ಲಿಕೆ ಮಾಡಿದೆ.

ಇದನ್ನೂ ಓದಿ: ಎಸ್‌ಸಿ,ಎಸ್‌ಟಿ,ಹಿಂದುಳಿದ,ರೈತರ ಮಕ್ಕಳು ಸಚಿವರಾಗಿದ್ದು ವಿಪಕ್ಷಕ್ಕೆ ಜೀರ್ಣಿಸಲು ಆಗ್ತಿಲ್ಲ: ಮೋದಿ ವಾಗ್ದಾಳಿ

ಇದೇ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ, ಮೇಕೆದಾಟು ಯೋಜನೆ ವಿಚಾರವಾಗಿ ನಾವು ತಮಿಳುನಾಡಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಈ ಯೋಜನೆಯನ್ನು ಶೇ. 100ರಷ್ಟು ಜಾರಿಗೆ ತರುವುದಾಗಿ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.