ಶಿಲ್ಲಾಂಗ್ (ಮೇಘಾಲಯ): ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರ ಬಿದ್ದಿದೆ. 59 ಸ್ಥಾನಗಳಲ್ಲಿ ಯಾವುದೇ ಪಕ್ಷಕ್ಕೆ 31 ಸ್ಥಾನಗಳ ಬಹುಮತವನ್ನು ತಲುಪಲು ಸಾಧ್ಯವಾಗಿಲ್ಲ. ನ್ಯಾಷನಲ್ ಪೀಪಲ್ಸ್ ಪಕ್ಷ (ಎನ್‌ಪಿಪಿ) 26 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ತನ್ನ ಹಳೆಯ ಮಿತ್ರ ಪಕ್ಷ ಬಿಜೆಪಿಯು ಎನ್‌ಪಿಪಿಗೆ ಬೆಂಬಲ ಸೂಚಿಸಿದೆ.
ಗುರುವಾರ ವಿಧಾನಸಭೆಯ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ಹಾಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಐದು ಸ್ಥಾನಗಳ ಕೊರತೆಯಿಂದ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದರಿಂದ ವಂಚಿತವಾಗಿದೆ. ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಟಿಎಂಸಿ 5 ಸ್ಥಾನಗಳನ್ನು ಗೆದ್ದಿದೆ. ಮತ್ತೊಂದೆಡೆ, ಯುನೈಟೆಡ್ ಡೆಮಾಕ್ರಟಿಕ್ ಪಕ್ಷ 11 ಸ್ಥಾನ ಮತ್ತು ಕಾಂಗ್ರೆಸ್ ಪಕ್ಷವು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಭದ್ರಕೋಟೆ 'ಕಸ್ಬಾ ಪೇಠ್' ಭೇದಿಸಿದ ಕಾಂಗ್ರೆಸ್
ಎನ್‌ಪಿಪಿಯ ಹಳೆ ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) 2 ಸ್ಥಾನಗಳನ್ನು ಗೆದ್ದಿದ್ದರೆ, ವಾಯ್ಸ್ ಆಫ್ ದಿ ಪೀಪಲ್ ಪಕ್ಷ 4 ಸ್ಥಾನ, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ತಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾನ್ರಾಡ್ ಸಂಗ್ಮಾ ಅವರು ದಕ್ಷಿಣ ತುರಾ ಕ್ಷೇತ್ರದಲ್ಲಿ 5 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.
-
Sri @SangmaConrad , Chief Minister of Meghalaya, called @AmitShah ji, Hon'ble Home Minister, and sought his support and blessings in forming the new Government.
— Himanta Biswa Sarma (@himantabiswa) March 2, 2023 " class="align-text-top noRightClick twitterSection" data="
.
">Sri @SangmaConrad , Chief Minister of Meghalaya, called @AmitShah ji, Hon'ble Home Minister, and sought his support and blessings in forming the new Government.
— Himanta Biswa Sarma (@himantabiswa) March 2, 2023
.Sri @SangmaConrad , Chief Minister of Meghalaya, called @AmitShah ji, Hon'ble Home Minister, and sought his support and blessings in forming the new Government.
— Himanta Biswa Sarma (@himantabiswa) March 2, 2023
.
ಅಮಿತ್ ಶಾಗೆ ಸಂಗ್ಮಾ ಕರೆ: ಮೇಘಾಲಯದ ಚುನಾವಣಾ ಫಲಿತಾಂಶ ಅತಂತ್ರ ಬಂದ ಬೆನ್ನಲ್ಲೆ ಕಾನ್ರಾಡ್ ಸಂಗ್ಮಾ ಅವರು ಬಿಜೆಪಿಯ ಅಮಿತ್ ಶಾ ಅವರಿಗೆ ಕರೆ ಮಾಡಿ ರಾಜ್ಯದಲ್ಲಿ ಸರ್ಕಾರ ರಚಿಸಲು ಬೆಂಬಲ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದು, ''ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ಹೊಸ ಸರ್ಕಾರವನ್ನು ರಚಿಸುವಲ್ಲಿ ಅವರ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಫಲಿತಾಂಶದಿಂದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಮತ್ತಷ್ಟು ದೃಢ: ಮೋದಿಯಿಂದ ಮತದಾರರಿಗೆ ಅಭಿನಂದನೆ
ಅಲ್ಲದೇ, ಮೇಘಾಲಯದಲ್ಲಿ ಮುಂದಿನ ಸರ್ಕಾರ ರಚಿಸಲು ಎನ್‌ಪಿಪಿಯನ್ನು ಬೆಂಬಲಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ರಾಜ್ಯ ಘಟಕಕ್ಕೆ ಸಲಹೆ ನೀಡಿದ್ದಾರೆ ಎಂದೂ ಶರ್ಮಾ ಹೇಳಿದ್ದಾರೆ. ಈ ಹಿಂದೆ ಸಂಗ್ಮಾ ಮೈತ್ರಿಯ ಸುಳಿವನ್ನು ನೀಡಿದ್ದರು. ಏಕೆಂದರೆ, ಸಮೀಕ್ಷೆಗಳು ಅತಂತ್ರ ಫಲಿತಾಂಶದ ಭವಿಷ್ಯ ನುಡಿದ್ದವು. ಅಲ್ಲದೇ, ಚುನಾವಣಾ ಹೊರ ಸಮಯದಲ್ಲೂ ಮೈತ್ರಿ ಮಾತುಗಳನ್ನಾಡಿದ್ದರು.
ನಮಗೆ ಮತ ನೀಡಿದ ರಾಜ್ಯದ ಜನತೆಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ನಮಗೆ ಕೆಲ ಸ್ಥಾನಗಳು ಕಡಿಮೆ ಬಂದಿದೆ. ಆದ್ದರಿಂದ ಅಂತಿಮ ಫಲಿತಾಂಶಗಳು ಹೊರಬರಲು ನಾವು ಕಾಯುತ್ತೇವೆ. ಅಂತಿಮ ಫಲಿತಾಂಶದ ಬಳಿಕ ನಮ್ಮ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ ಎಂದು ಸಂಗ್ಮಾ ಹೇಳಿಕೆ ನೀಡಿದ್ದರು. ಮೇಘಾಲಯದ ಒಟ್ಟು 60 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಕ್ಷೇತ್ರಗಳು ಖಾಸಿ ಮತ್ತು ಜೈನ್ತಿಯಾ ಹಿಲ್ಸ್ ಪ್ರದೇಶ ಇದ್ದು, ಮತ್ತು 24 ಗರೋ ಹಿಲ್ಸ್ ಪ್ರದೇಶದಲ್ಲಿವೆ. ಫೆಬ್ರವರಿ 27ರಂದು 59 ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಶೇ.76ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ: ಆರು ಉಪ ಚುನಾವಣೆಗಳ ಫಲಿತಾಂಶ: ಬಿಜೆಪಿ - ಕಾಂಗ್ರೆಸ್ ಸಮಬಲದ ಹೋರಾಟ, ಪಶ್ಚಿಮ ಬಂಗಾಳದಲ್ಲಿ 'ಕೈ' ಹಿಡಿದ ಮತದಾರ