ತಿರುವನಂತಪುರಂ: ಕೇರಳ ವಿಧಾನಸಭೆ ಫಲಿತಾಂಶ ಈಗಾಗಲೇ ಬಹಿರಂಗಗೊಂಡಿದ್ದು, 140 ಕ್ಷೇತ್ರಗಳ ಪೈಕಿ 91 ಸ್ಥಾನಗಳಲ್ಲಿ ಎಲ್ಡಿಎಫ್ ಗೆಲುವು ದಾಖಲು ಮಾಡಿ, ಸರ್ಕಾರ ರಚನೆ ಮಾಡಲು ಮುಂದಾಗಿದೆ.
ಆದರೆ, ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಮಟ್ಟದಲ್ಲಿ ಮಹಿಳೆಯರು ಆಯ್ಕೆಯಾಗಿರುವುದು ವಿಶೇಷವಾಗಿದೆ. 2016ರ ವಿಧಾನಸಭೆ ಚುನಾವಣೆಯಲ್ಲಿ 8 ಮಹಿಳೆಯರು ಆಯ್ಕೆಯಾಗಿದ್ದರು. ಆದರೆ, ಈ ಸಲ 11 ಮಹಿಳೆಯರು ವಿಧಾನಸಭೆ ಪ್ರವೇಶ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಫಸ್ಟ್ ಮಿಲ್ಕ್ ಟ್ರೈನ್: 45,000 ಲೀಟರ್ ಹಾಲು ಹೊತ್ತು ನಾಗ್ಪುರದಿಂದ ದೆಹಲಿಯತ್ತ ಪ್ರಯಾಣ
2001ರ ಬಳಿಕ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. 10 ಮಹಿಳೆಯರು ಎಲ್ಡಿಎಫ್ ಹಾಗೂ ಒಬ್ಬರು ಯುಡಿಎಫ್ನಿಂದ ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ 103 ಕ್ಷೇತ್ರಗಳಿಂದ ಮಹಿಳಾ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.
ಆರ್ಎಂಪಿ ನಾಯಕಿ ಕೆ.ಕೆ ರಮಾ ಯುಡಿಎಫ್ನಿಂದ ಗೆದ್ದಿರುವ ಏಕೈಕ ಮಹಿಳಾ ಶಾಸಕಿಯರಾಗಿದ್ದಾರೆ. ಆರೋಗ್ಯ ಸಚಿವೆ ಕೆ.ಕೆ ಶೈಲಜಾ ದಾಖಲೆಯ 60 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ.
ಪ್ರಮುಖವಾಗಿ ವೀಣಾ ಜಾರ್ಜ್, ಸಿ.ಕೆ ಆಶಾ ಮತ್ತು ಯು. ಪ್ರತಿಭಾ ಎರಡನೇ ಅವಧಿಗೆ ಶಾಸಕಿಯರಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ನ ಪಿ.ಕೆ ಜಯಲಕ್ಷ್ಮೀ, ಉಸ್ಮಾನ್, ಬಿಂದು ಕೃಷ್ಣಾ ಹಾಗೂ ಬಿಜೆಪಿಯ ಶೋಭಾ ಸುರೇಂದ್ರನ್ ಸೋಲು ಕಂಡಿದ್ದಾರೆ.