ETV Bharat / bharat

ಡಿಡಿಸಿ ಚುನಾವಣೆ: ಕಾಶ್ಮೀರ ಬಿಜೆಪಿಯ ಮೊದಲ ಮಹಿಳಾ ವಿಜೇತೆ ಮಿನ್ಹಾ ಲತೀಫ್

author img

By

Published : Jan 5, 2021, 7:09 AM IST

Updated : Jan 5, 2021, 7:56 AM IST

21ನೇ ವಯಸ್ಸಿನಲ್ಲಿ, ಮಿನ್ಹಾ ಲತೀಫ್ ಕಿರಿಯ ವಿಜೇತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಏಕೈಕ ಮಹಿಳಾ ವಿಜೇತೆ. ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು ತಮ್ಮ ಕ್ಷೇತ್ರದ ಮೂಲ ಅಭಿವೃದ್ಧಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

minha
minha

ದಕ್ಷಿಣ ಕಾಶ್ಮೀರ: ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಮಿನ್ಹಾ ಲತೀಫ್ ಕಿರಿಯ ಮಹಿಳಾ ವಿಜೇತೆಯಾಗಿದ್ದು, ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಕಾಶ್ಮೀರದಲ್ಲಿ ಮೊದಲ ಬಾರಿಗೆ ಚುನಾವಣಾ ಯಶಸ್ಸು ನೀಡಿದ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯ ಏಳನೇ ಸೆಮಿಸ್ಟರ್‌ನಲ್ಲಿರುವ ಮಿನ್ಹಾ, ಪುಲ್ವಾಮಾದ ಕಾಕಪೋರಾ II ಸ್ಥಾನದಿಂದ ಗೆದ್ದಿದ್ದಾರೆ. ಈ ಗೆಲುವು ಕಾಶ್ಮೀರದಲ್ಲಿ ಮಹಿಳಾ ಸಬಲೀಕರಣದ ಮಹತ್ವವಾಗಿದೆ ಎಂದು ಮಿನ್ಹಾ ಈ ಟಿವಿ ಭಾರತದ ವಿಶೇಷ ಸಂದರ್ಶನದಲ್ಲಿ ಹೇಳಿದರು.

ಕಾಶ್ಮೀರ ಬಿಜೆಪಿಯ ಮೊದಲ ಮಹಿಳಾ ವಿಜೇತೆ ಮಿನ್ಹಾ ಲತೀಫ್

"ಮಹಿಳೆಯರಿಗಾಗಿ ಕೆಲವು ಸ್ಥಾನಗಳನ್ನು ಕಾಯ್ದಿರಿಸುವುದು ಸ್ವಾಗತಾರ್ಹ ಹೆಜ್ಜೆಯಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಬಹಳ ಹಿಂದುಳಿದಿರುವ ಮಹಿಳೆಯರಿಗೆ ಮೀಸಲಾತಿ ನೀಡಬೇಕು. ಮಹಿಳಾ ಜಾನಪದ ಕಲ್ಯಾಣಕ್ಕಾಗಿ ಕೆಲಸ ಮಾಡಬಹುದು. ಇದು ನನ್ನ ಕ್ಷೇತ್ರದ ಅಭಿವೃದ್ಧಿಯ ಆದೇಶವಾಗಿದೆ" ಎಂದು ಮಿನ್ಹಾ ಹೇಳಿದರು.

"ಸಾರ್ವಜನಿಕ ಸೇವೆಯಲ್ಲಿ ನನ್ನ ವೃತ್ತಿಜೀವನ ಬೆಂಬಲಿಸುವ ಹಿನ್ನೆಲೆ ನನ್ನಲ್ಲಿದೆ. ಜನರು ನನ್ನ ಕಡೆಗೆ ತಮ್ಮ ಬೆಂಬಲ ತೋರಿಸಿದ್ದಾರೆ ಮತ್ತು ನಾನು ಖಂಡಿತವಾಗಿಯೂ ಅವರಿಗಾಗಿ ಕೆಲಸ ಮಾಡುತ್ತೇನೆ. ನಾನು ಉತ್ತಮ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದು, ಸಾರ್ವಜನಿಕ ಅಭಿವೃದ್ಧಿ ಮಾತ್ರ ನಮ್ಮ ಪಕ್ಷದ ಧ್ಯೇಯವಾಕ್ಯ" ಎಂದು ಅವರು ಹೇಳಿದರು.

ಮಿನ್ಹಾ ರಾಜಕೀಯ ಕುಟುಂಬದಿಂದ ಬಂದವರು. ಅವರ ತಂದೆ ಲತೀಫ್ ಭಟ್, 2004ರಿಂದ ಮಾಜಿ ಕಾಂಗ್ರೆಸ್​ನಲ್ಲಿದ್ದು, 2017ರಲ್ಲಿ ಬಿಜೆಪಿ ಸೇರಿದರು. ಅವರು ಪಕ್ಷದ ಜಮ್ಮು ಕಾಶ್ಮೀರ ವಿಭಾಗದ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷರಾಗಿದ್ದಾರೆ.

ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್​ನ (ಪಿಎಜಿಡಿ)ಪ್ರಾದೇಶಿಕ ಪಕ್ಷಗಳಲ್ಲಿ ಒಂದಾದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಪ್ರತಿಸ್ಪರ್ಧಿ ರುಕಾಯಾ ಬಾನೊಗಿಂತ ಮಿನ್ಹಾ 16 ಹೆಚ್ಚು ಮತಗಳನ್ನು ಗಳಿಸಿ, ಗೆಲುವು ಸಾಧಿಸಿದ್ದಾರೆ.

ಕಾಶ್ಮೀರ ಪ್ರದೇಶದಲ್ಲಿ, ಪುಲ್ವಾಮಾ, ಬಂಡಿಪೋರಾ ಮತ್ತು ಶ್ರೀನಗರದಲ್ಲಿ ತಲಾ ಒಂದು ವಾರ್ಡ್‌ನಲ್ಲಿ ಬಿಜೆಪಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆ ಇದಾಗಿದ್ದು, ಹೀಗಾಗಿ ಈ ಗೆಲುವು ಹೆಚ್ಚು ಮಹತ್ವದ್ದಾಗಿದೆ.

Last Updated : Jan 5, 2021, 7:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.