ಅಹಮದ್‌ನಗರ, ಮಹಾರಾಷ್ಟ್ರ: ಜಿಲ್ಲೆಯ ಸಂಗಮ್ನೇರ್ ಪಟ್ಟಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಗರದಿಂದ ಬಾಲಕಿಯನ್ನು ಅಪಹರಿಸಿ ಬಿಹಾರಕ್ಕೆ ಕರೆದೊಯ್ಯುವ ಪ್ರಯತ್ನ ನಡೆದಿದೆ.
ಇಬ್ಬರೂ ಯುವಕರು ಮೊಬೈಲ್‌ನಲ್ಲಿ PUBG Game ಆಡುತ್ತಿರುವಾಗ ಬಾಲಕಿಯೊಂದಿಗೆ ಪರಿಚಯ ಬೆಳಸಿಕೊಂಡಿದ್ದಾರೆ. ಮಹಾರಾಷ್ಟ್ರಕ್ಕೆ ಬಂದ ಬಳಿಕ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆಗ ಈ ಸಂಗತಿ ಸಂಗಮ್ನೇರ್ ಪೊಲೀಸರಿಗೆ ತಿಳಿದಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಇನ್ನು ಬಂಧಿತರ ಹೆಸರು ಅಕ್ರಮ ಶಹಾಬುದ್ದೀನ್ ಶೇಖ್ ಮತ್ತು ನೆಮತುಲ್ಲಾ ಶೇಖ್ ಎಂದು ಗುರುತಿಸಲಾಗಿದೆ. ಯುವಕರು ಬಿಹಾರದ ದರ್ಬಂಗಾ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಬಿಹಾರ ರಾಜ್ಯದ ದರ್ಬಂಗಾ ಜಿಲ್ಲೆಯ ಇಬ್ಬರು ಯುವಕರು ಸಂಗಮ್ನೇರ್‌ನ ಯುವತಿ ಜೊತೆ PUBG ಗೇಮ್ ಮತ್ತು WhatsApp ಮೂಲಕ ಪರಿಚಯ ಮಾಡಿಕೊಂಡಿದ್ದರು. ಆ ನಂತರ ಇಬ್ಬರೂ ಆ ಬಾಲಕಿಯನ್ನು ಭೇಟಿಯಾಗಲು ಸಂಗಮ್ನೇರ್ಗೆ ಬಂದಿದ್ದರು. ಹುಡುಗಿಯ ಗುರುತು ಸಿಕ್ಕಿದ ನಂತರ ಈ ಇಬ್ಬರು ಯುವಕರು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆಗ ಬಾಲಕಿ ಕಿರುಚಿಕೊಂಡಿದ್ದಾಳೆ, ಅಷ್ಟೇ ಅಲ್ಲ ಸ್ಥಳೀಯರು ಆಕೆಯ ನೆರವಿಗೆ ಧಾವಿಸಿದ್ದಾರೆ.
ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಸಂಗಮ್ನೇರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಗಮನೇರ್ ಪೊಲೀಸರು ಅಕ್ರಮ್ ಶಹಾಬುದ್ದೀನ್ ಶೇಖ್ ಮತ್ತು ನೆಮತುಲ್ಲಾ ಶೇಖ್ ಎಂಬುವವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆನ್‌ಲೈನ್ ಗೇಮಿಂಗ್ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂಬುದು ಕೆಲ ದಿನಗಳ ಹಿಂದೆ ಬಹಿರಂಗವಾಗಿತ್ತು. ಈಗ ಮೊಬೈಲ್‌ನಲ್ಲಿ ಪರಿಚಯಿಸಿಕೊಂಡು ಹುಡುಗಿಯರನ್ನು ಅಪಹರಿಸುತ್ತಿರುವುದು ಬೆಳಕಿಗೆ ಬಂದಿದೆ.
ಓದಿ: ಆನ್‌ಲೈನ್ ಗೇಮಿಂಗ್ ಆ್ಯಪ್ ಮೂಲಕ ಬಾಲಕರ ಮತಾಂತರ ಪ್ರಕರಣ: ಐಬಿ ತನಿಖೆ
ಆನ್‌ಲೈನ್ ಗೇಮಿಂಗ್ ಮೂಲಕ ಮತಾಂತರ: ಗಾಜಿಯಾಬಾದ್‌ನ ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಜೈನ ಸಮುದಾಯದ ಕುಟುಂಬವೊಂದು ಗೇಮಿಂಗ್ ಆ್ಯಪ್ ಮೂಲಕ ಮತಾಂತರ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆನೇಕ ಆಮಿಷಗಳನ್ನೊಡ್ಡಿ ನಮ್ಮ ಮಗನಿಗೆ ಅನ್ಯ ಧರ್ಮದ ಪಾಠಗಳನ್ನು ಕಲಿಸಲಾಗುತ್ತಿದೆ ಎಂದು ಆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲ, ಆನ್ ಲೈನ್ ಮೂಲಕ ಮತಾಂತರ ನಡೆಯುತ್ತಿದೆ. ಮಹಾರಾಷ್ಟ್ರ ಮೂಲದ ಶಹನವಾಜ್ ಖಾನ್ ಎಂಬ ವ್ಯಕ್ತಿ ತನ್ನ ಹೆಸರನ್ನು ಬಡ್ಡೋ ಎಂದು ಬದಲಿಸಿಕೊಂಡು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಇತ್ತ ಪಕ್ರರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಚ್ಚರಿ ಸಂಗತಿ ಗೊತ್ತಾಗಿತ್ತು. ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಪ್ರಕಾರ, ಹದಿಹರೆಯದವರನ್ನು ಫೋರ್ಟ್‌ನೈಟ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ಆಕರ್ಷಿತರಾಗುವಂತೆ ಮಾಡುತ್ತಿದ್ದು, ಆ್ಯಪ್ನಲ್ಲಿ ಮುಸ್ಲಿಂ ಹುಡುಗರು ಹಿಂದೂಗಳಂತೆ ನಟಿಸುವ ಮೂಲಕ ಹುಡುಗರನ್ನು ಈ ಆಟವಾಡಲು ಆಕರ್ಷಿಸುತ್ತಿದ್ದರು. ನಂತರ ಆಟದಲ್ಲಿ ಗೆಲ್ಲಲು ಮಕ್ಕಳಿಗೆ ಧಾರ್ಮಿಕ ಪದ್ಯಗಳನ್ನು ಹೇಳುವಂತೆ ಸೂಚಿಸುತ್ತಿದ್ದರು. ಇದರೊಂದಿಗೆ ಚಾಟ್ ಅಪ್ಲಿಕೇಶನ್‌ನಲ್ಲಿ ನಿಷೇಧಿತ ವ್ಯಕ್ತಿ ಝಾಕಿರ್‌ನ ವಿಡಿಯೋ ತೋರಿಸಿ ಮತಾಂತರಕ್ಕೆ ಆ ಮಕ್ಕಳು ಪ್ರೇರೇಪಿಸಿದ್ದರು. ಮತಾಂತರಗೊಂಡ ನಂತರ, ಇತರ ವಿಡಿಯೋಗಳನ್ನು ಸಹ ಅವರೊಂದಿಗೆ ಹಂಚಿಕೊಳ್ಳಲಾಗುತ್ತಿತ್ತು ಎಂದು ಹೇಳಿದ್ದರು.
ಈ ಪ್ರಕರಣದಲ್ಲಿ ಒಟ್ಟು 4 ಅಪ್ರಾಪ್ತರು ಸಿಲುಕಿಕೊಂಡಿದ್ದು, ಈಗಾಗಲೇ ಮತಾಂತರಗೊಂಡಿರುವ ಇಬ್ಬರು ಅಪ್ರಾಪ್ತರು ಗಾಜಿಯಾಬಾದ್‌ನ ನಿವಾಸಿಗಳು ಹಾಗು ಒಬ್ಬ ಫರಿದಾಬಾದ್‌ನ ನಿವಾಸಿ ಎಂದು ತಿಳಿದು ಬಂದಿದೆ. ಇದಲ್ಲದೇ ಚಂಡೀಗಢದ ಬಾಲಕನೊಬ್ಬ ಮತಾಂತರಗೊಂಡಿರುವ ಬಗ್ಗೆಯೂ ಮಾಹಿತಿ ಹೊರ ಬಿದ್ದಿತ್ತು. ಪೊಲೀಸರು ವಿಸ್ತೃತ ತನಿಖೆ ನಡೆಸುತ್ತಿದ್ದು, ಆರೋಪಿಗಳು ಮಕ್ಕಳ ಅಫಿಡವಿಟ್‌ನಲ್ಲಿ ಸಹಿ ಮಾಡಿದ್ದು, ಯಾವುದೇ ಒತ್ತಡವಿಲ್ಲದೆ ಅನ್ಯ ಧರ್ಮ ಸ್ವೀಕರಿಸಿದ್ದಾರೆ ಎಂದು ಪ್ರಕರಣವನ್ನು ವಿವರಿಸಿದ್ದಾರೆ. ಈ ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ.