ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಇಂದು ರಾಷ್ಟ್ರೀಯ ವೈದ್ಯಕೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಯಜಿ 2023ರ ಫಲಿತಾಂಶ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್: neet.nta.nic.in ನಲ್ಲಿ ಚೆಕ್ ಮಾಡಿಕೊಳ್ಳಬಹುದು. ತಮಿಳುನಾಡಿನ ಪ್ರಬಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಶೇ 99.99 ಅಂಕಗಳನ್ನು ಗಳಿಸುವ ಮೂಲಕ ನೀಟ್-ಯುಜಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಒಟ್ಟು 20.38 ಲಕ್ಷ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, 11.45 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಯುಪಿಯಿಂದ ಹೆಚ್ಚು ವಿದ್ಯಾರ್ಥಿಗಳು ಅರ್ಹ: ರಾಜ್ಯಗಳ ಪೈಕಿ ಉತ್ತರ ಪ್ರದೇಶವು ಅತ್ಯಧಿಕ ಸಂಖ್ಯೆಯಲ್ಲಿ (1.39 ಲಕ್ಷ), ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (1.31 ಲಕ್ಷ) ಮತ್ತು ರಾಜಸ್ಥಾನದ ವಿದ್ಯಾರ್ಥಿಗಳು (1 ಲಕ್ಷಕ್ಕೂ ಹೆಚ್ಚು) ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ. ಒಟ್ಟು 11,45,976 ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಹತೆ ಪಡೆದಿದ್ದಾರೆ.
-
NTA declares the result/NTA scores/rank of National Eligibility cum Entrance Test (NEET-UG) 2023 pic.twitter.com/K1Rg0nH8HU
— ANI (@ANI) June 13, 2023 " class="align-text-top noRightClick twitterSection" data="
">NTA declares the result/NTA scores/rank of National Eligibility cum Entrance Test (NEET-UG) 2023 pic.twitter.com/K1Rg0nH8HU
— ANI (@ANI) June 13, 2023NTA declares the result/NTA scores/rank of National Eligibility cum Entrance Test (NEET-UG) 2023 pic.twitter.com/K1Rg0nH8HU
— ANI (@ANI) June 13, 2023
ನೀಟ್- ಯುಜಿ ಪರೀಕ್ಷೆ ಟಾಪರ್ಸ್(ಪುರುಷ):
- ಪ್ರಬಂಜನ್ ಜೆ
- ಬೋರಾ ವರುಣ್ ಚಕ್ರವರ್ತಿ
- ಕೌಸ್ತವ್ ಬೌರಿ
- ಧ್ರುವ ಅಡ್ವಾಣಿ
- ಸೂರ್ಯ ಸಿದ್ಧಾರ್ಥ್ ಎನ್
- ಶ್ರೀನಿಕೇತ್ ರವಿ
- ಸ್ವಯಂ ಶಕ್ತಿ ತ್ರಿಪಾಠಿ
- ವರುಣ್ ಎಸ್
- ಪಾರ್ತ್ ಖಂಡೇಲ್ವಾಲ್
- ಸಾಯನ್ ಪ್ರಧಾನ್
ನೀಟ್- ಯುಜಿ ಪರೀಕ್ಷೆ ಟಾಪರ್ಸ್ (ಮಹಿಳೆ)
- ಪ್ರಾಂಜಲ್ ಅಗರ್ವಾಲ್
- ಆಶಿಕಾ ಅಗರ್ವಾಲ್
- ಆರ್ಯ ಆರ್.ಎಸ್
- ಮೀಮಾಂಸಾ ಮೌನ್
- ಸುಮೇಘ ಸಿನ್ಹಾ
- ಕಣಿ ಯಸಶ್ರೀ
- ಬರೀರಾ ಅಲಿ
- ರಿದ್ಧಿ ವಾಜರಿಂಗ್ಕರ್
- ಕವಲಕುಂಟ್ಲ ಪ್ರಣತಿ ರೆಡ್ಡಿ
- ಜಾಗೃತಿ ಬೊಡೆದ್ದುಲ
ಎನ್‌ಟಿಎ ಅಧಿಕಾರಿ ಮಾಹಿತಿ: NTA ಮೇ 7ರಂದು ಭಾರತದ ಹೊರಗಿನ 14 ನಗರಗಳು ಸೇರಿದಂತೆ ದೇಶಾದ್ಯಂತ 499 ನಗರಗಳಲ್ಲಿ ನೆಲೆಗೊಂಡಿರುವ 4,097 ಕೇಂದ್ರಗಳಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ನಡೆಸಿತು. "ಪರೀಕ್ಷೆಯಲ್ಲಿ ಏಳು ಅಭ್ಯರ್ಥಿಗಳನ್ನು ಅಕ್ರಮ ಎಸಗಿದ್ದರು ಎಂದು ಗುರುತಿಸಲಾಗಿದೆ. ನಿಯಮಾನುಸಾರ ನೀಟ್ ಪರೀಕ್ಷೆಯನ್ನು ನಡೆಸಲಾಗಿದೆ" ಎಂದು ಹಿರಿಯ ಎನ್‌ಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು) ನಡೆಸಲಾಯಿತು. ಭಾರತದ ಹೊರಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ಸಿಟಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಇದನ್ನೂ ಓದಿ: Employment in India: 3ನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಉದ್ಯೋಗ ನೇಮಕಾತಿ ಹೆಚ್ಚಳ
''ಎನ್‌ಟಿಎ ಅಭ್ಯರ್ಥಿಗಳಿಗೆ ಅಖಿಲ ಭಾರತ ಶ್ರೇಣಿಯನ್ನು ಒದಗಿಸಿದೆ. ಪ್ರವೇಶ ಪಡೆಯುವವರಿಗೆ ತಮ್ಮ ವ್ಯಾಪ್ತಿಯಲ್ಲಿರುವ ಎಂಬಿಬಿಎಸ್ ಮತ್ತು ಬಿಡಿಎಸ್ ಸೀಟುಗಳಿಗೆ ಶ್ರೇಣಿಯ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ರಚಿಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ರಾಜ್ಯಕ್ಕೆ ಅರ್ಜಿ ಸಲ್ಲಿಸಿದಾಗ, ಅವರು ತಮ್ಮ ವರ್ಗವನ್ನು ರಾಜ್ಯ ವರ್ಗ ಪಟ್ಟಿಯ ಪ್ರಕಾರ ನಮೂದಿಸುತ್ತಾರೆ. ರಾಜ್ಯ ಕೌನ್ಸೆಲಿಂಗ್ ಅಧಿಕಾರಿಗಳು, ಅದಕ್ಕೆ ಅನುಗುಣವಾಗಿ ಅವರ ಮೆರಿಟ್ ಪಟ್ಟಿಯನ್ನು ಮಾಡುತ್ತಾರೆ. ಇದರಲ್ಲಿ ಎನ್‌ಟಿಎ ಯಾವುದೇ ಪಾತ್ರವನ್ನು ಹೊಂದಿಲ್ಲ" ಎಂದು ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: Satellite launch: ಸ್ಟಾರ್ಟಪ್ ಕಂಪನಿ ಅಜಿಸ್ಟಾ ಬಿಎಸ್‌ಟಿ ಉಪಗ್ರಹ ಕಕ್ಷೆಗೆ ಸೇರ್ಪಡೆ!