ನವದೆಹಲಿ: 70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳನ್ನು ಕೋವಿಡ್ನಿಂದ ರಕ್ಷಿಸುವ ಸಲುವಾಗಿ ಮಧ್ಯಂತರ ಜಾಮೀನು ಅಥವಾ ತುರ್ತು ಪೆರೋಲ್‌ನಿಂದ ಬಿಡುಗಡೆ ಮಾಡಲು ಸೂಚಿಸುವಂತೆ ಪರಿಸರ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಮಧ್ಯಂತರ ಜಾಮೀನು ಅಥವಾ ತುರ್ತು ಪೆರೋಲ್ಗೆ ಒಪ್ಪದವರನ್ನು ಸೂಕ್ತ ಕಾರಾಗೃಹಗಳಿಗೆ ಸ್ಥಳಾಂತರ ಮಾಡಬೇಕೆಂದು, ಆ ಕಾರಾಗೃಹಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಬೇಕೆಂದು ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಸುಪ್ರೀಂಕೋರ್ಟ್ ಈ ಬಗ್ಗೆ ಉನ್ನತ ಸಮಿತಿಯೊಂದನ್ನು ರಚಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಳಿಕೊಂಡಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ಮಾನದಂಡಗಳ ಸೂಚಿಸುವಂತೆ ಹೇಳಿತ್ತು ಎಂದು ಪಾಟ್ಕರ್ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆ(WHO) ಯ ಮಾಹಿತಿ ಪ್ರಕಾರ, ಶೇ 64ರಷ್ಟು ಕೋವಿಡ್ ಪ್ರಕರಣಗಳು 25 ರಿಂದ 64 ವರ್ಷದೊಳಗಿನ ವಯಸ್ಸಿನ ವ್ಯಕ್ತಿಗಳದ್ದಾಗಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜ್ 70 ವರ್ಷ ಮೇಲ್ಪಟ್ಟವರು 20 ವರ್ಷ ಮೇಲ್ಪಟ್ಟವರಿಗಿಂತ 20 ಪಟ್ಟು ಹೆಚ್ಚು ಆಸ್ಪತ್ರೆಗಳಿಗೆ ದಾಖಲಾಗುವ ಸಂಭವ ಇರುತ್ತದೆ ಎಂದು ಹೇಳಿದೆ. ವಿಶ್ವಸಂಸ್ಥೆಯ ಹಿರಿಯರು ಹೆಚ್ಚಾಗಿ ವೈರಸ್ನಿಂದ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದೆ ಎಂದು ಪಾಟ್ಕರ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅನ್ಲಾಕ್ ಹೊಸ ಮಾರ್ಗಸೂಚಿ: ಯಾವ ಜಿಲ್ಲೆಯಲ್ಲಿ ಏನಿರುತ್ತೆ.. ಏನಿರಲ್ಲ..?
ಕಾರಾಗೃಹಗಳಲ್ಲಿರುವ ವೃದ್ಧರನ್ನು ಕೋವಿಡ್ನಿಂದ ರಕ್ಷಿಸಲು, ಬೇರೆಡೆಗೆ ಸ್ಥಳಾಂತರ ಮಾಡಲು ಯಾವುದೇ ಮಾನದಂಡವಿಲ್ಲ. ಕಾರಾಗೃಹದಲ್ಲಿ ಕೈದಿಗಳು ಮಾನಸಿಕ ಅಸ್ವಸ್ಥರಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಮೇಧಾ ಪಾಟ್ಕರ್ ಹೇಳಿದ್ದಾರೆ.
ಎನ್‌ಸಿಆರ್‌ಬಿ (ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ) ಪ್ರಕಟಿಸಿದ ಭಾರತದಲ್ಲಿನ ಕಾರಾಗೃಹದ ಅಂಕಿಅಂಶಗಳ ಪ್ರಕಾರ, ಕೈದಿಗಳ ಸಂಖ್ಯೆ ಅಧಿಕವಾಗಿದೆ. ವೈದ್ಯಕೀಯ ಸಿಬ್ಬಂದಿ ತೀರಾ ಕಡಿಮೆಯಿದೆ ಎಂದು ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ.