ನವದೆಹಲಿ: ಭಾರತದಲ್ಲಿ ಕೋವಿಡ್ ವ್ಯಾಕ್ಸಿನ್ ಅಭಿವೃದ್ಧಿಗೊಳ್ಳುತ್ತಿದ್ದಂತೆ ಅನೇಕ ದೇಶಗಳಿಗೆ ವ್ಯಾಕ್ಸಿನ್ ರವಾನೆ ಮಾಡಿದ್ದ ಭಾರತ ಇದೀಗ ಎರಡನೇ ಅಲೆಯಲ್ಲಿ ಸಿಲುಕಿ ನರಳಾಡುತ್ತಿದ್ದು, ಇದೇ ಕಾರಣಕ್ಕಾಗಿ ಎರಡನೇ ಡೋಸ್ ರವಾನೆ ಮಾಡುವಲ್ಲಿ ವಿಫಲಗೊಂಡಿದೆ ಎಂದು ಹೇಳಲಾಗುತ್ತಿದೆ.
ಭಾರತದ ಮಾನವೀಯ ಶಕ್ತಿ ಪ್ರದರ್ಶಿಸಲು ಭಾರತ ಲಸಿಕೆ ಮೈತ್ರಿ ಕಾರ್ಯಕ್ರಮದಡಿ ವಿದೇಶಗಳಿಗೆ ಕೋವಿಡ್ ಲಸಿಕೆ ರವಾನೆ ಮಾಡಿತ್ತು. ಆದರೆ ಸದ್ಯ ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಕಾರಣ ಈ ಕಾರ್ಯಕ್ರಮ ಸ್ಥಗಿತಗೊಂಡಿದೆ. ಇದೇ ಕಾರಣಕ್ಕಾಗಿ ಯುಎಸ್, ಯುರೋಪಿಯನ್ ದೇಶ, ಯುಎಇ, ಸಿಂಗಾಪುರ ಮತ್ತು ಚೀನಾದ ರೆಡ್ಕ್ರಾಸ್ನಿಂದಲೂ ವಿದೇಶಿ ವೈದ್ಯಕೀಯ ನೆರವು ಪಡೆಯಲು ಭಾರತಕ್ಕೆ ಒತ್ತಾಯ ಮಾಡಿವೆ.
ದೇಶದಲ್ಲಿ ಲಸಿಕೆಯ ಕೊರತೆ ಕಂಡು ಬಂದಾಗ ಅದನ್ನ ವಿದೇಶಗಳಿಗೆ ನೀಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಕೋವಿಡ್ನ ಮೊದಲ ಡೋಸ್ ಪಡೆದುಕೊಂಡಿರುವ ನೇಪಾಳ,ಭೂತಾನ್, ಶ್ರೀಲಂಕಾ ಮತ್ತು ಆಫ್ರಿಕನ್ ದೇಶಗಳು ಭಾರತಕ್ಕೆ ಎರಡನೇ ಡೋಸ್ಗಾಗಿ ಬೇಡಿಕೆ ಇಟ್ಟಿವೆ ಎಂದು ತಿಳಿದು ಬಂದಿದೆ.