ETV Bharat / bharat

ಭಾರತೀಯ ಮೀನುಗಾರರಿಗೆ ಗುಂಡು: ಪಾಕ್‌ ಹೈಕಮಿಷನ್‌ ಕರೆದು ಕೇಂದ್ರ ಸರ್ಕಾರ ಖಂಡನೆ - ಭಾರತ

ಭಾರತೀಯ ಮೀನುಗಾರರ ದೋಣಿ ಮೇಲೆ ಪಾಕ್‌ ಕಡಲ ಭದ್ರತಾ ಪಡೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯನ್ನು ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿದೆ.

India summons Pak's high commission official
ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ; ಪಾಕ್‌ ಹೈಕಮಿಷನ್‌ಗೆ ಸಮನ್ಸ್‌
author img

By

Published : Nov 8, 2021, 10:05 PM IST

ನವದೆಹಲಿ: ಭಾರತೀಯ ಮೀನುಗಾರರತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದ ಪಾಕ್‌ ವಿರುದ್ಧ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ನ ಅಧಿಕಾರಿಯನ್ನು ಕರೆಸಿಕೊಂಡಿರುವ ವಿದೇಶಾಂಗ ಸಚಿವಾಲಯ ಘಟನೆಯನ್ನು ಖಂಡಿಸಿದೆ.

ಪಾಕಿಸ್ತಾನದ ಕಡಲ ಭದ್ರತಾ ಪಡೆ ಕಳೆದ ಶನಿವಾರ ಭಾರತೀಯ ಮೀನುಗಾರಿಕಾ ದೋಣಿ 'ಜಲ್ಪರಿ' ಮೇಲೆ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಓರ್ವ ಭಾರತೀಯ ಮೀನುಗಾರ ಸಾವನ್ನಪ್ಪಿದರೆ, ಮತ್ತೋರ್ವ ಮೀನುಗಾರ ಗಂಭೀರವಾಗಿ ಗಾಯಗೊಂಡಿದ್ದನು.

ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸದಂತೆ ತನ್ನ ಪಡೆಗಳಿಗೆ ಸೂಚನೆ ನೀಡುವಂತೆ ಪಾಕ್‌ ಸರ್ಕಾರಕ್ಕೆ ಭಾರತ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.