ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಗೆದ್ದರೆ, ಪಾಲಿಕೆಯನ್ನು ಭ್ರಷ್ಟ ಮುಕ್ತಗೊಳಿಸುವುದು ಸೇರಿದಂತೆ ಮೂರು ಪ್ರದೇಶಗಳ ಸ್ವಚ್ಛಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಗದ್ದುಗೆ ಹಿಡಿಯುವ ಹವಣಿಕೆಯಲ್ಲಿರುವ ಎಎಪಿ 10 ಪ್ರಮುಖ ಘೋಷಣೆಗಳನ್ನು ಹೊರಡಿಸಿದೆ. ಇದರಲ್ಲಿ ಪ್ರಮುಖವಾಗಿ ನಗರ ಸ್ವಚ್ಛಗೊಳಿಸುವುದು. ದೆಹಲಿಯ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ, ರಸ್ತೆ ರಿಪೇರಿ ಮತ್ತು ಎಂಸಿಡಿಯ ಶಾಲೆ ಮತ್ತು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವ ಭರವಸೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ಪಾಲಿಕೆಯ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವುದು, ಜೊತೆಗೆ ಇನ್ಸ್ಪೆಕ್ಟರ್ ರಾಜ್ ಸರ್ಕಾರವನ್ನು ಪೂರ್ಣಗೊಳಿಸಲಾಗುವುದು, ಸೀಲ್ ಆಗಿರುವ ಅಂಗಡಿಗಳನ್ನು ತೆರೆಯುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ, ಎಎಪಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ರೆ, ಬಿಜೆಪಿ ವಚನಭ್ರಷ್ಟವಾಗಿದೆ. ಐದು ವರ್ಷದ ಅವಧಿಯಲ್ಲಿ ಯಾವುದೇ ಕಾರ್ಯ ಮಾಡಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ನಾನು ಭಯೋತ್ಪಾದಕನಲ್ಲ, ಭ್ರಷ್ಟನೂ ಅಲ್ಲ, ಜನರ ಪ್ರೀತಿಪಾತ್ರನು: ಸಿಎಂ ಕೇಜ್ರಿವಾಲ್