ಲಕ್ನೋ: ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರ ತಾಯಿ ರಾಮರತಿ ಅವರು ಹೃದಯ ವೈಫಲ್ಯತೆಯಿಂದ ದೆಹಲಿಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. 92 ವರ್ಷದ ರಾಮರತಿ ಅವರು ಚಿಕಿತ್ಸೆ ಪಡೆಯುತ್ತಿದ್ದ ದೆಹಲಿಯ ಆಸ್ಪತ್ರೆಯೊಂದರಲ್ಲಿ ನಿಧನರಾದರೆಂದು ಬಹುಜನ ಸಮಾಜ ಪಕ್ಷ(Bahujan Samaj Party )ತಿಳಿಸಿದೆ.
ಇನ್ನು ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಾಯಾವತಿ ದೆಹಲಿಗೆ ತೆರಳಿದ್ದು, ಭಾನುವಾರ ದೆಹಲಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಬಿಎಸ್ಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವರ್ಷವಷ್ಟೇ 95 ವರ್ಷದ ಮಾಯಾವತಿ ತಂದೆ ಪ್ರಭುದಯಾಳ್ ಕೂಡ ನಿಧನರಾಗಿದ್ದರು.
ಮಾಯಾವತಿ ತಾಯಿಯ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಷ್ ಯಾದವ್, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಇದನ್ನು ಓದಿ:Gadchiroli encounter.. ಮಹಾರಾಷ್ಟ್ರದಲ್ಲಿ 26 ನಕ್ಸಲರ ಬೇಟೆಯಾಡಿದ ಪೊಲೀಸರು