ಲಖನೌ : ಉತ್ತರಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ಮಾಯಾವತಿ, ಉತ್ತರಪ್ರದೇಶ ಚುನಾವಣೆಗೆ ಅಸಾದುದ್ದೀನ್ ಒವೈಸಿ ಅವರ AIMIM ಪಕ್ಷದ ಜೊತೆ ಬಿಎಸ್ಪಿ ಕೈಜೋಡಿಸಲಿದೆ ಎಂಬ ವರದಿಯನ್ನು ತಳ್ಳಿ ಹಾಕಿದ್ದಾರೆ.
ಯುಪಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ AIMIM ಮತ್ತು BSP ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಸುಳ್ಳು, ಇದು ಜನರನ್ನು ದಾರಿತಪ್ಪಿಸುವ ವರದಿ. ಮತ್ತು ಆಧಾರರಹಿತವಾಗಿದೆ. ಇದರಲ್ಲಿ ಯಾವುದೂ ಸತ್ಯವಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.
ಪಂಜಾಬ್ ಅನ್ನು ಹೊರತುಪಡಿಸಿ, ಬಿಎಸ್ಪಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಎಸ್ಪಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಜೊತೆ ಮೈತ್ರಿ ಮಾಡಿಕೊಂಡಿದೆ.
ಇದನ್ನೂ ಓದಿ:ಮೇನಕಾ ಗಾಂಧಿ ನಮ್ಮ ಪಕ್ಷದವರು ಎನ್ನುವುದಕ್ಕೆ ನನಗೆ ನಾಚಿಕೆ ಆಗುತ್ತದೆ : ಅಜಯ್ ವಿಷ್ಣೋಯಿ