ETV Bharat / bharat

ಲೋಕಸಭೆ ಚುನಾವಣೆ: ಉಭಯ ಬಣದಲ್ಲಿಲ್ಲದ ಬಿಎಸ್​ಪಿ ಸ್ವತಂತ್ರ ಸ್ಪರ್ಧೆ; ಜೆಡಿಎಸ್​ ಯಾರ ಕಡೆ?

ಲೋಕಸಭೆ ಚುನಾವಣೆ ಘೋಷಣೆಗೆ ಮೊದಲೇ ಮೈತ್ರಿ ರಾಜಕೀಯ ದೇಶದಲ್ಲಿ ಜೋರಾಗಿದೆ. 26 ಪಕ್ಷಗಳ ಇಂಡಿಯಾ, 39 ಪಕ್ಷಗಳ ಎನ್​ಡಿಎ ಪ್ರತ್ಯೇಕವಾಗಿ ಸಭೆ ನಡೆಸಿವೆ.

ಬಿಎಸ್​ಪಿ ಸ್ವತಂತ್ರ ಸ್ಪರ್ಧೆ ಘೋಷಣೆ
ಬಿಎಸ್​ಪಿ ಸ್ವತಂತ್ರ ಸ್ಪರ್ಧೆ ಘೋಷಣೆ
author img

By

Published : Jul 19, 2023, 12:44 PM IST

ಲಖನೌ (ಉತ್ತರಪ್ರದೇಶ): ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್​ಡಿಎ, ಕಾಂಗ್ರೆಸ್​ ಮುಂದಾಳತ್ವದ ಐಎನ್​ಡಿಐಎ (I.N.D.I.A) ಭರ್ಜರಿ ಸಿದ್ಧತೆ ನಡೆಸುತ್ತಿವೆ. 29 ವಿಪಕ್ಷಗಳನ್ನು ಸೇರಿಸಿಕೊಂಡು ಕಾಂಗ್ರೆಸ್​ ಬಿಹಾರ, ಬೆಂಗಳೂರಿನಲ್ಲಿ ಸಭೆ ನಡೆಸಿದ್ದರೆ, ಇತ್ತ ದೆಹಲಿಯಲ್ಲಿ ಬಿಜೆಪಿ 39 ಎನ್​ಡಿಎ ಅಂಗಪಕ್ಷಗಳನ್ನು ಗುಡ್ಡೆ ಹಾಕಿ ಬಲಪ್ರದರ್ಶನ ಮಾಡಿದೆ. ಈ ಮಧ್ಯೆ ಯಾರಿಗೂ ಬೇಡ ಎಂಬಂತೆ ಕರ್ನಾಟಕದ ಜೆಡಿಎಸ್​ ಮತ್ತು ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರ ಬಿಎಸ್​​ಪಿ ಯಾವ ಬಣದಲ್ಲೂ ಕಾಣಿಸಿಕೊಂಡಿಲ್ಲ.

ಈ ಮಧ್ಯೆ ಲೋಕಸಭೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಬಿಎಸ್​ಪಿ ಅಧಿನಾಯಕಿ ಮಾಯಾವತಿ ಅವರು ಹೇಳಿಕೆ ನೀಡಿದ್ದರೆ, ಜೆಡಿಎಸ್​ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಮುಂದೆ ಯಾವುದಾದರೂ ಬಣಕ್ಕೆ ಸೇರಲಿದೆಯಾ ಅಥವಾ ಸ್ವತಂತ್ರ ಸ್ಪರ್ಧೆಯೇ ಎಂಬುದು ಕುತೂಹಲದ ಪ್ರಶ್ನೆ.

ಏಕಾಂಗಿ ಹೋರಾಟ- ಮಾಯಾವತಿ: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ತಮ್ಮ ಪಕ್ಷವು 26 ಸದಸ್ಯ ಪಕ್ಷಗಳ ಇಂಡಿಯಾ ಮೈತ್ರಿ ಅಥವಾ 39 ಸದಸ್ಯರ ಎನ್‌ಡಿಎ ಒಕ್ಕೂಟದೊಂದಿಗೆ ಸೇರಿಲ್ಲ. ಯಾವ ಗುಂಪಿನೊಂದಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಎರಡೂ ಬಣಗಳಿಂದ ಸಮಾನ ಅಂತರವನ್ನು ಕಾಯ್ದುಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಾಗುವುದು. ಚುನಾವಣೆ ಸಮೀಪಿಸುತ್ತಿರುವುದರಿಂದ ನಮ್ಮ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಮತ್ತು ನಾವು ದೇಶಾದ್ಯಂತ ಸಭೆಗಳನ್ನು ನಡೆಸುತ್ತಿದ್ದೇವೆ ಎಂದು ಅವರು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎತ್ತ ಕಡೆ ಜೆಡಿಎಸ್​?: ಮಾಜಿ ಪ್ರಧಾನಿ ಹೆಚ್.​ಡಿ. ದೇವೇಗೌಡ ನೇತೃತ್ವದ ಜನತಾದಳ (ಜೆಡಿಎಸ್​) ಕೂಡ ಎರಡೂ ಮೈತ್ರಿಗಳಿಂದ ದೂರವಿದೆ. ನಮಗೆ ಯಾರಿಂದಲೂ ಆಹ್ವಾನ ಬಂದಿಲ್ಲ ಎಂದು ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ ಅವರು ಹೇಳಿದ್ದರು. ನಾವು ಯಾರೊಂದಿಗೂ ಗುರುತಿಸಿಕೊಂಡಿಲ್ಲ. ಯಾವ ಬಣದಿಂದಲೂ ಸಭೆಗೆ ಬನ್ನಿ ಎಂದು ಕರೆದಿಲ್ಲ, ನಾವೂ ಹೋಗಿಲ್ಲ ಎಂದು ತಟಸ್ಥ ಧೋರಣೆಯ ಮಾತನ್ನಾಡಿದ್ದರು.

ಯಾವ ಬಣದಲ್ಲಿ ಗುರುತಿಸಿಕೊಳ್ಳದ ಜನತಾದಳ ತಾನು ಸ್ವತಂತ್ರವಾಗಿ ಲೋಕಸಭೆ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿಲ್ಲ. ಅಲ್ಲದೇ, ಕರ್ನಾಟಕದಲ್ಲಿ ಬಿಜೆಪಿ ಜೊತೆ ಲೋಕಸಭೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವ ಮಾತುಗಳು ಸಾಗಿವೆ ಎಂದು ಹೇಳಲಾಗಿದೆ. ಹಾಗೊಂದು ವೇಳೆ ಮೈತ್ರಿ ಸಾಧ್ಯವಾದಲ್ಲಿ ಎನ್​ಡಿಎಗೆ ಮತ್ತೊಂದು ಅಂಗಪಕ್ಷ ಸೇರ್ಪಡೆಯಾಗಿ ಅದರ ಸಂಖ್ಯೆ 40ಕ್ಕೆ ಏರಲಿದೆ. ಇದಾಗದೇ ಇಂಡಿಯಾ ಪಾಳಯಕ್ಕೆ ಬಂದಲ್ಲಿ 26 ವಿಪಕ್ಷಗಳೊಂದಿಗೆ ಬಿಜೆಪಿ ಜೊತೆ ಕಾದಾಡಲಿದೆ.

ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ 2ನೇ ಸಭೆಯಲ್ಲಿ ಒಕ್ಕೂಟದ ರೂಪುರೇಷೆ, ಚುನಾವಣಾ ತಂತ್ರ, ಸೀಟು ಹಂಚಿಕೆ ಕುರಿತಂತೆ ನಿರ್ಧರಿಸುವ 11 ಮಂದಿಯ ಸಮನ್ವಯ ಸಮಿತಿ ರಚನೆ ಸೇರಿದಂತೆ ಹಲವು ವಿಷಯಗಳ ಮೇಲೆ ಚರ್ಚೆ ನಡೆದಿದೆ. ಇತ್ತ ದಿಲ್ಲಿಯಲ್ಲಿನ ಎನ್​ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಚುನಾವಣೆ, ಮೈತ್ರಿ ಸರ್ಕಾರ ರಚನೆಗೆ ಅಸ್ತು ಸಿಕ್ಕಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ನೇತೃತ್ವ, ಮೈತ್ರಿ ಸರ್ಕಾರ ರಚನೆ: ಎನ್​ಡಿಎ ನಿರ್ಣಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.