ETV Bharat / bharat

ಬ್ರಾಹ್ಮಣರಿಗೆ ಮಾಯಾವತಿ ಬಲೆ: ಬಿಜೆಪಿಯ ಸಾಂಪ್ರದಾಯಿಕ 'ಮತಬುಟ್ಟಿ'ಗೆ ಹಾಕಿಕೊಳ್ಳಲು ಕಸರತ್ತು - ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಸುದ್ದಿ

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಬ್ರಾಹ್ಮಣ ಸಮುದಾಯವನ್ನು ಮೂಲೆ ಗುಂಪು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಮಧ್ಯೆ, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಇದೀಗ ಯುಪಿಯ ಬ್ರಾಹ್ಮಣ ಸಮುದಾಯವನ್ನು ಓಲೈಸುವ ತಂತ್ರ ಹೆಣೆದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ "ನಮ್ಮ ಪಕ್ಷ ಮುಂದಿನ ವರ್ಷ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುತ್ತೇವೆ" ಎಂದು ಅವರು ಹೇಳಿದ್ದಾರೆ.

Mayawati's Outreach To Brahmins Before UP Polls
ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ
author img

By

Published : Jul 18, 2021, 4:57 PM IST

ಲಖನೌ (ಉತ್ತರಪ್ರದೇಶ): ಉತ್ತರಪ್ರದೇಶದ ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಹೇಳಿದ ಬಹುಜನ ಸಮಾಜವಾದಿ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ, ಇದೀಗ ಯುಪಿಯ ಬ್ರಾಹ್ಮಣ ಸಮುದಾಯವನ್ನು ಓಲೈಸುವ ತಂತ್ರ ಹೆಣೆದಿದ್ದಾರೆ.

"ನಮ್ಮ ಪಕ್ಷ ಮುಂದಿನ ವರ್ಷ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುತ್ತೇವೆ" ಎಂದು ಅವರು ಹೇಳಿದ್ದು ಈ ಬೆಳವಣಿಗೆಗೆ ಸಾಕ್ಷಿಯಾಗಿದೆ. ಬ್ರಾಹ್ಮಣ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಪಕ್ಷವು ಜುಲೈ 23 ರಂದು ಅಯೋಧ್ಯೆಯಲ್ಲಿ ಬ್ರಾಹ್ಮಣ ಸಮ್ಮೇಳನ ನಡೆಸಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬ್ರಾಹ್ಮಣರು ಹೆಚ್ಚಾಗಿರುವ ಅಯೋಧ್ಯೆಯಿಂದ ಮುಂದಿನ ವಾರ ತಮ್ಮ ಚುನಾವಣಾ ಪ್ರಚಾರ ಶುರು ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ "ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರು ಯಾರೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಭರವಸೆ ನನಗಿದೆ" ಎಂದರು.

"ಬಿಎಸ್​ಪಿ ಪ್ರಧಾನ ಕಾರ್ಯದರ್ಶಿ ಎಸ್.​ಸಿ ಮಿಶ್ರಾ ಅವರ ನೇತೃತ್ವದಲ್ಲಿ ಜುಲೈ 23 ರಂದು ಅಯೋಧ್ಯೆಯಿಂದ ಬ್ರಾಹ್ಮಣ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡುವ ಭರವಸೆ ನೀಡಲು ಅಭಿಯಾನವನ್ನು ಪ್ರಾರಂಭಿಸಲಾಗುವುದು"ಎಂದು ಮಾಯಾವತಿ ಹೇಳಿದ್ದಾರೆ.

ದಲಿತ ಸಮುದಾಯದ ಮೇಲೆ ಬಿಜೆಪಿ ಹಣ ಬಲ ಸೇರಿ ಹಲವು ರೀತಿಯ ಪ್ರಭಾವ ಬೀರಲು ಪ್ರಯತ್ನಿಸಿತು. ಆದಾಗ್ಯೂ ದಲಿತರು ನಮ್ಮ ಪಕ್ಷಕ್ಕೇ ನಿಷ್ಠರಾಗಿದ್ದಾರೆ. ಹಾಗೇ ಬ್ರಾಹ್ಮಣರೂ ಸಹ ಬಿಜೆಪಿಯ ಯಾವುದೇ ಪ್ರಭಾವಕ್ಕೂ ಒಳಗಾಗದೆ ಬಿಎಸ್​ಪಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮಾಯಾವತಿ ಮನವಿ ಮಾಡಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ದಲಿತರ ಮೇಲೆ ಪ್ರಭಾವ ಬೀರಲು ಎಲ್ಲ ವಿಧಾನಗಳನ್ನು ಬಳಸಿದವು. ಅವರು ಹಣದ ಶಕ್ತಿಯನ್ನು ಬಳಸಿದರು. ಸುಳ್ಳು ಭರವಸೆಗಳನ್ನು ನೀಡಿದರು ಮತ್ತು ದಲಿತ ಸಮುದಾಯದ ಮೇಲೆ ಪ್ರಭಾವ ಬೀರಲು ಮಾಧ್ಯಮಗಳನ್ನೂ ಸಹ ಬಳಸಿದರು. ಆದರೆ ಈ ನಕಲಿ ಭರವಸೆಗಳಿಂದ ದಲಿತರನ್ನು ದಾರಿ ತಪ್ಪಿಸಲು ಸಾಧ್ಯವಾಗಲಿಲ್ಲ. ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ. ದಲಿತ ಸಮುದಾಯದ ಮತಗಳ ಶೇಕಡಾವಾರು ಪ್ರಮಾಣವು ಹಾಗೇ ಇದೆ. ಇದು ಸಮಾಜವಾದಿ ಪಕ್ಷಕ್ಕೂ ಹೋಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಸಂಸದೀಯ ಸ್ಥಾನಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಸೋನಿಯಾ ಗಾಂಧಿ

ಬ್ರಾಹ್ಮಣ ಸಮುದಾಯವು ಕಳೆದ ಚುನಾವಣೆಗಳಲ್ಲಿ ಬಿಜೆಪಿಗೆ ನೀಡಿದ ಮತಗಳನ್ನು ನೋಡಿದಾಗ ವಿಷಾದವಾಗುತ್ತಿದೆ. ರಾಜ್ಯ ಚುನಾವಣೆಗಳಲ್ಲಿ ಪ್ರಚಾರ ಆರಂಭಿಸಿದಾಗ ಬಿಜೆಪಿ ಮತ್ತೆ ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತದೆ. ಆದರೆ ಬ್ರಾಹ್ಮಣ ಸಮುದಾಯದವರು ಬಿಜೆಪಿಗೆ ಈ ಬಾರಿ ಖಂಡಿತವಾಗಿಯೂ ಮತ ಹಾಕುವುದಿಲ್ಲ. 2007ರಂತೆ ಈ ಸಲವೂ ನಮ್ಮ ಪಕ್ಷವನ್ನೇ ಬೆಂಬಲಿಸುತ್ತಾರೆಂಬ ನಂಬಿಕೆ ನನಗೆ ಇದೆ ಎಂದು ಮಾಯಾವತಿ ಹೇಳಿದರು.

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಬ್ರಾಹ್ಮಣ ಸಮುದಾಯವನ್ನು ಬದಿಗೊತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮಾಯಾವತಿ ಬ್ರಾಹ್ಮಣರಿಗೆ ಮನವಿ ಮಾಡಿದ್ದಾರೆ. ಸಾಂಪ್ರದಾಯಿಕವಾಗಿ ದಲಿತ ಮತಬ್ಯಾಂಕ್‌ನಲ್ಲಿ ಪ್ರಾಬಲ್ಯ ಹೊಂದಿದ್ದ ಮಾಯಾವತಿ 2007 ರಲ್ಲಿ ಅಧಿಕಾರಕ್ಕೆ ಬಂದದ್ದು ಒಂದು ಅನನ್ಯ ಸಂಯೋಜನೆಯ ಹಿನ್ನೆಲೆಯಲ್ಲಿ - ಶೇಕಡಾ 21 ರಷ್ಟು ದಲಿತ ಮತಗಳು ಮತ್ತು ಶೇಕಡಾ 11 ರಷ್ಟು ಬ್ರಾಹ್ಮಣ ಮತಗಳು ಇವರಿಗೆ ಬಿದ್ದಿದ್ದವು. 2007ರ ರಾಜ್ಯ ಚುನಾವಣೆಯಲ್ಲಿ ಮಾಯಾವತಿ ಬ್ರಾಹ್ಮಣ ಸಮುದಾಯದ 85 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.