ETV Bharat / bharat

ಮಥುರಾ; ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ ವಿಚಾರಣೆ ಇಂದು

ಶ್ರೀ ಕೃಷ್ಣ ಜನ್ಮ ಭೂಮಿ ಮಾಲೀಕತ್ವ ನೀಡಬೇಕೆಂದು ಮತ್ತು ಆವರಣವನ್ನು ಅತಿಕ್ರಮಣ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸಿವಿಲ್ ನ್ಯಾಯಾಲಯ ವಿಚಾರಣೆ ನಡೆಸಲಿದೆ.

Mathura Janmabhoomi case hearing today
ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ ವಿಚಾರಣೆ
author img

By

Published : Mar 22, 2021, 9:34 AM IST

ಮಥುರಾ/ಉತ್ತರ ಪ್ರದೇಶ: ಶ್ರೀ ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯ ಮತ್ತು ಡಿಜೆ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಲಿದೆ.

ಶ್ರೀ ಕೃಷ್ಣ ಜನ್ಮಭೂಮಿಯ ಮಾಲೀಕತ್ವವನ್ನು ನೀಡಬೇಕೆಂದು ಹಾಗೂ ಅದರ ಆವರಣವನ್ನು ಅತಿಕ್ರಮಣ ಮುಕ್ತಗೊಳಿಸುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ. ಇಂದು ಈ ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಶ್ರೀ ಕೃಷ್ಣ ಜನ್ಮಸ್ಥಳ ಸಂಕೀರ್ಣವನ್ನು 13.37 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 11 ಎಕರೆ ಪ್ರದೇಶದಲ್ಲಿ ಶ್ರೀ ಕೃಷ್ಣ ಜನ್ಮಭೂಮಿ ಲೀಲಾ ಮಂಚ್, ಭಗವತ್ ಭವನ ಮತ್ತು 2.37 ಎಕರೆ ರಾಯಲ್ ಈದ್ಗಾ ಮಸೀದಿ ಉಳಿದಿದೆ. ಶ್ರೀ ಕೃಷ್ಣನ ಜನ್ಮಸ್ಥಳದ ಸ್ವಾಮ್ಯದ ಸಂಕೀರ್ಣವು ಮಸೀದಿ ಮುಕ್ತವಾಗಬೇಕೆಂದು ಒತ್ತಾಯಿಸಿ ಕೃಷ್ಣ ಭಕ್ತರ ಪರ ವಕೀಲ ರಂಜನಾ ಅಗ್ನಿಹೋತ್ರಿ ಸೇರಿದಂತೆ ಐವರು ವಕೀಲರು ಕಳೆದ ಸೆಪ್ಟೆಂಬರ್ 25 ರಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

Mathura Janmabhoomi case hearing today
ಶ್ರೀಕೃಷ್ಣ ಜನ್ಮಭೂಮಿ ವಿವಾದ ಪ್ರಕರಣ ವಿಚಾರಣೆ

ಇದನ್ನೂ ಓದಿ:ಕಾರಿನ ಮೇಲೆ ಟಿಪ್ಪರ್ ಮಗುಚಿ ಇಬ್ಬರ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.