ETV Bharat / bharat

ಕೃಷ್ಣ ಜನ್ಮಭೂಮಿ - ಶಾಹಿ ಈದ್ಗಾ ಪ್ರಕರಣ: ಜುಲೈ 1 ರಿಂದ ವಿಚಾರಣೆ

author img

By

Published : May 18, 2022, 6:39 PM IST

Updated : May 18, 2022, 6:55 PM IST

ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಮಾಡಿದಂತೆ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲೂ ವಿಡಿಯೋ ಸಮೀಕ್ಷೆ ನಡೆಯಬೇಕು. ಮಸೀದಿ ಆವರಣದಲ್ಲಿ ಹಿಂದೂ ಕಲಾಕೃತಿಗಳು ಮತ್ತು ಪುರಾತನ ಧಾರ್ಮಿಕ ಶಾಸನಗಳು ಇವೆ ಎನ್ನಲಾಗಿದೆ.

Mathura court to hear Krishna Janmabhoomi-Shahi Idgah issue on July 1
ಕೃಷ್ಣ ಜನ್ಮಭೂಮಿ- ಶಾಹಿ ಇದ್ಗಾ ಪ್ರಕರಣ: ಜುಲೈ 1 ರಿಂದ ವಿಚಾರಣೆ

ಮಥುರಾ( ಉತ್ತರಪ್ರದೇಶ): ಶ್ರೀ ಕೃಷ್ಣ ಜನ್ಮಭೂಮಿ - ಶಾಹಿ ಈದ್ಗಾ ಮಸೀದಿ ವಿವಾದದ ವಿಚಾರಣೆಯನ್ನು ಮಥುರಾದ ಸಿವಿಲ್ ಕೋರ್ಟ್​ ಜುಲೈ 1 ರಿಂದ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಹಿರಿಯ ಸಿವಿಲ್​ ಜಡ್ಜ್​​ ಕೋರ್ಟ್​​ ಜುಲೈ 1 ರಂದು ಈ ಬಗ್ಗೆ ವಿಚಾರಣೆ ನಡೆಸಲಿದೆ. ಮಥುರಾ ಮಸೀದಿಯಲ್ಲೂ ವಿಡಿಯೊ ಸಮೀಕ್ಷೆ ನಡೆಸುವಂತೆ ಕೋರಿ ಇತ್ತೀಚೆಗೆ ಅರ್ಜಿ ಸಲ್ಲಿಸಲಾಗಿದೆ.

ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಮಾಡಿದಂತೆ ಇಲ್ಲೂ ವಿಡಿಯೋ ಸಮೀಕ್ಷೆ ನಡೆಯಬೇಕು. ಮಸೀದಿ ಆವರಣದಲ್ಲಿ ಹಿಂದೂ ಕಲಾಕೃತಿಗಳು ಮತ್ತು ಪುರಾತನ ಧಾರ್ಮಿಕ ಶಾಸನಗಳು ಇವೆ ಎನ್ನಲಾಗಿದೆ. ಹೀಗಾಗಿ ವಿಡಿಯೋ ಸಮೀಕ್ಷೆ ನಡೆಸಿದರೆ ಇವೆಲ್ಲ ಕುರುಹುಗಳು ಇವೆಯೋ ಇಲ್ಲವೇ ಎಂಬ ಬಗ್ಗೆ ತಿಳಿದುಕೊಳ್ಳಲು ಸಮೀಕ್ಷೆ ನೆರವಿಗೆ ಬರಲಿದೆ ಎಂದು ಮಥುರಾ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಶಾಹಿ ಈದ್ಗಾ ಮಸೀದಿಯೊಳಗೆ ಎಲ್ಲರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಕೋರ್ಟ್​ ಮೊರೆ ಹೋಗಿತ್ತು.

ಪ್ರಾಚೀನ ಈದ್ಗಾ ಎಂದು ಕರೆಯಲ್ಪಡುವ ದೇವಾಲಯದೊಳಗೆ ಲಡ್ಡು ಗೋಪಾಲನ ಉದ್ಘಾಟನೆ ಮತ್ತು ಪೂಜೆಯನ್ನು ನಡೆಸಲು ಅನುಮತಿ ಕೋರಿ ನಾವು ಕೋರ್ಟ್​ ಮೆಟ್ಟಿಲು ಏರಿದ್ದೇವೆ. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅತಿಕ್ರಮಣ ಮಾಡಿರುವ ಆಗಿನವರು ದೇವಸ್ಥಾನ ಹಾಗೂ ಜೈಲಿನ ಅವಶೇಷಗಳ ಮೇಲೆ ಶಾಹಿ ಈದ್ಗಾವನ್ನು ನಿರ್ಮಿಸಿದ್ದಾರೆ. ಅಲ್ಲಿಯೇ ಶ್ರೀ ಕೃಷ್ಣ ಜನಿಸಿದ್ದಾನೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ದಿನೇಶ್ ಕಾರ್ತಿಕ್ ಪ್ರತಿಪಾದಿಸಿದ್ದಾರೆ.

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಮುಂದಿನ ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಮಥುರಾ ನ್ಯಾಯಾಲಯಕ್ಕೆ ಮಂಗಳವಾರವಷ್ಟೇ ಸೂಚಿಸಿತ್ತು.

ಇದನ್ನು ಓದಿ;ಜ್ಞಾನವಾಪಿ ಮಸೀದಿ ಮರು ಸರ್ವೇ ಕೋರಿ ಅರ್ಜಿ: ವಕೀಲರ ಪ್ರತಿಭಟನೆಯಿಂದಾಗಿ ವಿಚಾರಣೆ ಮುಂದೂಡಿಕೆ

Last Updated : May 18, 2022, 6:55 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.