ETV Bharat / bharat

ತೆಲಂಗಾಣ ಸಚಿವ ಮಲ್ಲಾರೆಡ್ಡಿ ಶಿಕ್ಷಣ ಸಂಸ್ಥೆಗಳಲ್ಲಿ ಭಾರಿ ಅವ್ಯವಹಾರ: ಆರು ಕೋಟಿ ನಗದು ವಶ - ಶಿಕ್ಷಣ ಸಂಸ್ಥೆಗಳಲ್ಲಿ ಭಾರೀ ಅವ್ಯವಹಾರ

ತೆಲಂಗಾಣ ಸಚಿವ ಮಲ್ಲಾರೆಡ್ಡಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಸಂಗ್ರಹಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

massive-irregularities-in-minister-mallareddys-educational-institutions-6-crore-cash-seized
ತೆಲಂಗಾಣ ಸಚಿವ ಮಲ್ಲಾರೆಡ್ಡಿ ಶಿಕ್ಷಣ ಸಂಸ್ಥೆಗಳಲ್ಲಿ ಭಾರೀ ಅವ್ಯವಹಾರ: ಆರು ಕೋಟಿ ನಗದು ವಶ
author img

By

Published : Nov 23, 2022, 10:59 PM IST

ಹೈದರಾಬಾದ್​ (ತೆಲಂಗಾಣ): ತೆಲಂಗಾಣ ಸಚಿವ ಮಲ್ಲಾರೆಡ್ಡಿ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳಲ್ಲಿ ಭಾರಿ ಅಕ್ರಮಗಳನ್ನು ನಡೆದಿರುವುದನ್ನು ಆದಾಯ ತೆರಿಗೆ ಪತ್ತೆ ಹಚ್ಚಿದೆ. ಅಲ್ಲದೇ, ಶೋಧ ಕಾರ್ಯದ ವೇಳೆ 6 ಕೋಟಿ ರೂಪಾಯಿ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಾರದ ಅನುದಾನದಲ್ಲಿ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಮಲ್ಲಾರೆಡ್ಡಿ ಶಿಕ್ಷಣ ಸಂಸ್ಥೆಗಳು ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಸಂಗ್ರಹಿಸಿರುವುದು ಆದಾಯ ತೆರಿಗೆ ಇಲಾಖೆಯ ತನಿಖೆಯಲ್ಲಿ ಬಯಲಾಗಿದೆ. ಜೊತೆಗೆ ಈ ಮೊತ್ತವನ್ನು ನಗದು ರೂಪದಲ್ಲಿ ತೆಗೆದುಕೊಂಡಿರುವ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ಶಿಕ್ಷಣ ಸಂಸ್ಥೆಗಳ ಹೆಸರಲ್ಲಿ ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿ ಮಲ್ಲಾರೆಡ್ಡಿ - ನಾರಾಯಣ ಆಸ್ಪತ್ರೆಗೆ ವೆಚ್ಚ ಮಾಡಲಾಗಿದೆ ಎಂದೂ ಹೇಳಲಾಗಿದೆ. ಇದುವೆರಗೂ ಹೈದರಾಬಾದ್ ಐಟಿ ಅಧಿಕಾರಿಗಳ ಜೊತೆಗೆ ಒಡಿಶಾ ಮತ್ತು ಕರ್ನಾಟಕದ 400ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ 65 ತಂಡಗಳನ್ನಾಗಿ ರಚಿಸಿ ಶೋಧ ನಡೆಸಿದ್ದಾರೆ.

ಹಿರಿಯ ಪುತ್ರ ಮಹೇಂದರ್ ರೆಡ್ಡಿ ಅಸ್ವಸ್ಥ: ಕೆಲವೆಡೆ ಶೋಧ ಕಾರ್ಯ ಅಂತ್ಯಗೊಳಿಸಲಾಗಿದ್ದು, ಇನ್ನು ಕೆಲವೆಡೆ ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ. ಸ್ಥಿರಾಸ್ತಿಯನ್ನು ಅದರ ನೈಜ ಮೌಲ್ಯಕ್ಕಿಂತ ಕಡಿಮೆ ಮೌಲ್ಯೀಕರಿಸಲಾಗಿದೆ ಎಂಬುದಕ್ಕೆ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಶೋಧ ಕಾರ್ಯದ ವೇಳೆ ಮಲ್ಲಾರೆಡ್ಡಿ ಅವರ ಹಿರಿಯ ಪುತ್ರ ಮಹೇಂದರ್ ರೆಡ್ಡಿ ಅಸ್ವಸ್ಥರಾಗಿದ್ದರು. ಎದೆನೋವು ಮತ್ತು ಭುಜ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರು ಎಂದು ಹೇಳಲಾಗಿದೆ.

ಮಗ ಅಸ್ವಸ್ಥಗೊಂಡಿರುವ ವಿಚಾರ ತಿಳಿದ ಸಚಿವ ಮಲ್ಲಾರೆಡ್ಡಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಜೊತೆಗೆ ಸಚಿವರ ನಿವಾಸದಲ್ಲಿ ಐಟಿ ಅಧಿಕಾರಿಗಳ ಶೋಧ ನಡೆಯುತ್ತಿರುವಾಗಲೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಫಿಟ್ಸ್‌ ಕಾಣಿಸಿಕೊಂಡು ಕೆಳಗೆ ಬಿದ್ದಿದ್ದು, ಆಕೆಯನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಲ್ಲಾರೆಡ್ಡಿ ಆಸ್ತಿ, ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ಲೆಕ್ಕಪತ್ರಗಳು, ಪ್ರಮಾಣ ಪತ್ರಗಳು ಸರಿಯಾಗಿವೆ ಎಂದು ಹೇಳಿದ್ದಾರೆ. ನಾವು ಕಾಲೇಜುಗಳು, ಆಸ್ಪತ್ರೆಗಳು ಮತ್ತು ಆಸ್ತಿಗಳ ವಿವರಗಳನ್ನು ಐಟಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ. ನಾವು ಅವರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ಎಲ್ಲ ಅನುಮತಿಗಳೊಂದಿಗೆ ಕಾಲೇಜು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿದ್ದೇವೆ. ನನಗೆ ಮತ್ತು ನನ್ನ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. ಗುರುವಾರ ಬೆಳಗ್ಗೆಯೊಳಗೆ ಐಟಿ ಶೋಧ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದೂ ಸಚಿವ ಮಲ್ಲಾರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಸಚಿವ ಮಲ್ಲಾರೆಡ್ಡಿ, ನಿಕಟವರ್ತಿಗಳ ಮೇಲೆ ಐಟಿ ದಾಳಿ: 50 ತಂಡಗಳಿಂದ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.