ETV Bharat / bharat

ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ: ತಂದೆ, ಮಗ ಸಾವು

ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಅಹಮದಾಬಾದ್‌ನ ಧೋಲ್ಕಾದಲ್ಲಿ ನಡೆದಿದೆ.

author img

By ETV Bharat Karnataka Team

Published : Sep 6, 2023, 4:51 PM IST

ಸಾಮೂಹಿಕ ಆತ್ಮಹತ್ಯೆ
ಸಾಮೂಹಿಕ ಆತ್ಮಹತ್ಯೆ

ಅಹಮದಾಬಾದ್ (ಗುಜರಾತ್​)​: ಅಹಮದಾಬಾದ್​ ಜಿಲ್ಲೆಯ ಧೋಲ್ಕಾ ಪ್ರದೇಶದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ್ದರೇ, ತಾಯಿ ಹಾಗೂ ಮತ್ತೋರ್ವ ಮಗ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಕಿರಣ್​ ರಾಥೋಡ್ (52), ಹರ್ಷ ​ರಾಥೋಡ್ ಸಾವನ್ನಪ್ಪಿದ್ದಾರೆ. ನಿತಾಬೆನ್ ಕಿರಣ್​ ರಾಥೋಡ್ ಮತ್ತು ಹರ್ಷಿಲ್​ ರಾಥೋಡ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಕಿರಣ್​​ ರಾಥೋಡ್​ ಮೂಲತಃ ಮೆಹಸಾನಾ ವಿಜಾಪುರದವರಾಗಿದ್ದು, ಪ್ರಸ್ತುತ ಢೋಲ್ಕಾದ ಸಮೀಪದ ಮಾಫ್ಲಿಪುರ ಗ್ರಾಮದ ರಾಮದೇವನಗರ ಸೊಸೈಟಿಯಲ್ಲಿ ಇವರು ಕುಟುಂಬ ನೆಲೆಸಿತ್ತು. ಕೆಲ ದಿನಗಳ ಹಿಂದಷ್ಟೇ ಕಿರಣ್​ರ ಮಗಳು ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು. ಕುಟುಂಬದ ವಿರೋಧದ ನಡುವೆಯೇ ವಿವಾಹವಾಗಿದ್ದಕ್ಕೆ ಕಿರಣ್ ಕುಟುಂಬ ಬೇಸರಗೊಂಡಿತ್ತು. ಮತ್ತೊಂದೆಡೆ, ಮಗಳ ಅತ್ತೆಯ ಕುಟುಂಬ, ಕಿರಣ್ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ನಿನ್ನೆ ಮಧ್ಯಾಹ್ನ ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳು ಒಟ್ಟಾಗಿ ವಿಷ ಸೇವಿಸಿದ್ದಾರೆ. ಪೊಲೀಸ್​ ತನಿಖೆ ವೇಳೆ ಡೆತ್​ನೋಟ್​ ಪತ್ತೆಯಾಗಿದ್ದು, ಇದರಲ್ಲಿ ತಮ್ಮ ಮಗಳ ಅತ್ತಯ ವಿರುದ್ಧ ಆರೋಪ ಮಾಡಿರುವುದು ಬೆಳಕಿಗೆ ಬಂದಿದೆ. ಅದರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಧೋಲ್ಕಾ ಡಿವೈಎಸ್ಪಿ ಪ್ರಕಾಶ ಪ್ರಜಾಪತಿ ಪ್ರತಿಕ್ರಿಯೆ ನೀಡಿ, ಮೃತ ಕಿರಣ್​ ರಾಥೋಡ್ (52) ಜಿಇಬಿಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಅವರ ಮಗಳ ಮದುವೆ ಮನೆಯವರ ಒಪ್ಪಿಗೆ ಇಲ್ಲದೇ ನಡೆದಿತ್ತು. ಇದರಿಂದ ಇಡೀ ಕಟುಂಬ ಬೇಸರಗೊಂಡಿತ್ತು. ಅದೇ ಸಮಯದಲ್ಲಿ, ಮಗಳ ಅತ್ತೆ ಮನೆಯವರು ಕಿರುಕುಳ ನೀಡಿರುವುದಕ್ಕೆ ಮನನೊಂದು ಮಂಗಳವಾರ ಮಧ್ಯಾಹ್ನ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಕಿರಣ್​ ಅವರ ಪತ್ನಿ ಮತ್ತೋರ್ವ ಮಗ ಚಿಂತಾಜನಕ ಸ್ಥಿತಿಯಲ್ಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಟ್​ನೋಟ್​ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ವಡೋದರದಲ್ಲಿ ಇಂತಹದ್ದೇ ಘಟನೆ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು ಪತಿ, ಪತ್ನಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ವಯಂ ಪ್ರೇರಿತರಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಮುಂಡಗೋಡದಲ್ಲಿ ಇಬ್ಬರು ಟಿಬೆಟಿಯನ್ ವ್ಯಕ್ತಿಗಳ ನಡುವೆ ಮಾರಾಮಾರಿ: ಓರ್ವ ಸಾವು, ಮಾಜಿ ಸೈನಿಕನಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.