ETV Bharat / bharat

ಸಾಲ ತೀರಿಸಲಾಗದ ಕುಡುಕ ಪತಿಯೊಬ್ಬ ತನ್ನ ಪತ್ನಿಯನ್ನೇ ಸಾಲದಾತರಿಗೆ ಒಪ್ಪಿಸಿಬಿಟ್ಟ!

author img

By

Published : Apr 28, 2022, 2:54 PM IST

ಸಾಲಗಾರರಿಂದ ಪಡೆದ ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ ನನ್ನ ಪತಿ ಮತ್ತು ಮಾವ ಸೇರಿಕೊಂಡು ಕೆಲ ಗ್ರಾಮಸ್ಥರಿಗೆ ನನ್ನನ್ನು ಒಪ್ಪಿಸಿದರು ಎಂದು 24 ವರ್ಷದ ವಿವಾಹಿತ ಮಹಿಳೆ ತಿಳಿಸಿದ್ದಾರೆ.

ರಾಜಸ್ಥಾನದ ಚುರು ಜಿಲ್ಲೆಯ ಸದರ್ ಪೊಲೀಸ್ ಠಾಣೆ
ರಾಜಸ್ಥಾನದ ಚುರು ಜಿಲ್ಲೆಯ ಸದರ್ ಪೊಲೀಸ್ ಠಾಣೆ

ಚುರು (ರಾಜಸ್ಥಾನ): ಸಾಲ ತೀರಿಸೋಕೆ ಆಸ್ತಿ-ಪಾಸ್ತಿ ಮಾರಾಟ ಮಾಡುವುದುಂಟು. ಆದರೆ, ಇಲ್ಲೊಬ್ಬ ಕುಡುಕ ವ್ಯಕ್ತಿ ತನ್ನ ಪತ್ನಿಯನ್ನೇ ಸಾಲದಾತರಿಗೆ ಒಪ್ಪಿಸಿದ್ದಾನೆ. ಈ ಬಗ್ಗೆ ಸ್ವತಃ ಸಂತ್ರಸ್ತೆಯೇ ಪೊಲೀಸರಿಗೆ ಪತಿ ಮತ್ತು ಮಾವನ ವಿರುದ್ಧ ದೂರು ನೀಡಿದ್ದಾರೆ.

ರಾಜಸ್ಥಾನದ ಚುರು ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಸಾಲಗಾರರಿಂದ ಪಡೆದ ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಪತಿ ಮತ್ತು ಮಾವ ಸೇರಿಕೊಂಡು ಕೆಲ ಗ್ರಾಮಸ್ಥರಿಗೆ ನನ್ನನ್ನು ಒಪ್ಪಿಸಿದರು ಎಂದು ಆಕೆ ತಿಳಿಸಿದ್ದಾರೆ.

ಸಿಕರ್ ಜಿಲ್ಲೆಗೆ ಸೇರಿದ ಹಳ್ಳಿಯೊಂದಕ್ಕೆ ಮದುವೆ ಮಾಡಿಕೊಟ್ಟ ನಂತರ ವರದಕ್ಷಿಣೆಗಾಗಿ ಗಂಡನ ಮನೆಯಲ್ಲಿ ಚಿತ್ರಹಿಂಸೆ ನೀಡಿದರು. ಪ್ರತಿದಿನ ಮದ್ಯ ಸೇವಿಸುವ ಪತಿ ಗ್ರಾಮದ ಕೆಲವರಿಂದ 5 ಲಕ್ಷ ರೂ ಸಾಲ ಮಾಡಿಕೊಂಡಿದ್ದ. ಈ ಸಾಲ ಮರುಪಾವತಿಗೆ ಪತಿ ಹಾಗೂ ಮಾವ ಸೇರಿಕೊಂಡು ನನ್ನನ್ನು ಸಾಲದಾತರ ಬಳಿ ಬಿಟ್ಟರು ಎಂದು ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಠಾಣಾಧಿಕಾರಿ ಮಾಹಿತಿ ನೀಡಿದರು.

ಪೊಲೀಸರಿಗೆ ದೂರು ನೀಡಿದ ವಿಷಯ ಗೊತ್ತಾಗಿ ಮತ್ತಷ್ಟು ಆಕ್ರೋಶಕೊಂಡು ಗಂಡ ಮತ್ತು ಮಾವ ನನ್ನನ್ನು ಥಳಿಸಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಮತ್ತೊಮ್ಮೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪತ್ರದ ಮೂಲಕ ಪತ್ನಿಗೆ ತಲಾಖ್​ ನೀಡಿದ ಪತಿ.. ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ನವವಿವಾಹಿತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.