ETV Bharat / bharat

ಇನ್ಮುಂದೆ ಮ್ಯಾರೇಜ್​ ಮನೆ ಅಥವಾ ಕೋರ್ಟ್​​ನಲ್ಲಿ: ನಾಳೆಯಿಂದ ದೆಹಲಿಯಲ್ಲಿ ಕಠಿಣ ನಿಯಮ

author img

By

Published : May 9, 2021, 10:46 PM IST

Updated : May 9, 2021, 11:00 PM IST

ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಮತ್ತಷ್ಟು ಪ್ರಬಲವಾಗಿ ಹೋರಾಟ ನಡೆಸಲು ದೆಹಲಿ ಸರ್ಕಾರ ಮುಂದಾಗಿದೆ. ಹೀಗಾಗಿ ನಾಳೆಯಿಂದ ಮತ್ತಷ್ಟು ಕಠಿಣ ರೂಲ್ಸ್ ಜಾರಿಗೊಳ್ಳಲಿವೆ.

Delhi Covid
Delhi Covid

ನವದೆಹಲಿ: ನಾಳೆಯಿಂದ ಕೋವಿಡ್ ವಿರುದ್ಧದ ಹೋರಾಟ ಮತ್ತಷ್ಟು ಕಠಿಣಗೊಳ್ಳಲಿದ್ದು, ಹೊಸದಾಗಿ ಮತ್ತಷ್ಟು ನಿಯಮಗಳು ಜಾರಿಗೊಳ್ಳಲಿವೆ.

ಲಾಕ್​ಡೌನ್ ಮುಂದುವರೆಯುತ್ತಿರುವ ಕಾರಣ ನಾಳೆಯಿಂದ ದೆಹಲಿಯಲ್ಲಿ ಮತ್ತಷ್ಟು ಕಠಿಣ ನಿರ್ಬಂಧ ಜಾರಿಗೊಳ್ಳಲಿವೆ. ಹೀಗಾಗಿ ವ್ಯಕ್ತಿಗಳ ಓಡಾಟದ ಮೇಲೆ ನಿರ್ಬಂಧ ಹಾಕಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧರಿಸಿದೆ.

ಲೈಫ್​ಲೈನ್ ಸಾರಿಗೆ ಸೇವೆ, ದೆಹಲಿ ಮೆಟ್ರೋ ರೈಲು ಸ್ಥಗಿತಗೊಳ್ಳಲಿದ್ದು, ಕೇವಲ 20 ಜನರೊಂದಿಗೆ ಮನೆಯಲ್ಲಿ ಮದುವೆ ನಡೆಸಲು ಅನುಮತಿ ನೀಡಲಾಗಿದೆ. ಇದರ ಮಧ್ಯೆ ಕೋರ್ಟ್​ನಲ್ಲಿ ಮದುವೆ ನಡೆಸಲು ಅನುಮತಿ ನೀಡಲಾಗಿದೆ. ಉದ್ಯಾನ, ಸಭಾಂಗಣ, ಹೋಟೆಲ್​ ಹಾಗೂ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ. ಅಂತಹ ಸ್ಥಳಗಳಲ್ಲಿ ಮದುವೆ ಕಾರ್ಯಕ್ರಮ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಕೋವಿಡ್​ ವಿರುದ್ಧದ ಹೋರಾಟಕ್ಕೆ ಸಶಸ್ತ್ರ ಪಡೆಯ ನಿವೃತ್ತ ವೈದ್ಯರ ನೇಮಕಕ್ಕೆ ರಕ್ಷಣಾ ಇಲಾಖೆ ಅಸ್ತು

ದೆಹಲಿಯಲ್ಲಿ ಮೇ 17ರವರೆಗೆ ಲಾಕ್​ಡೌನ್​ ವಿಸ್ತರಣೆಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದರು.

Last Updated : May 9, 2021, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.