ನವದೆಹಲಿ: ''ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳ ಕುಸಿತ ಕಂಡಿವೆ. ಸ್ಥೂಲ ಆರ್ಥಿಕ ದೃಷ್ಟಿಕೋನದಿಂದ ನೋಡಿದರೆ, ಅತೀ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದರಿಂದ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತದ ಸಾರ್ವಜನಿಕ ಹಣಕಾಸು ವ್ಯವಸ್ಥೆಯು ದೃಢವಾಗಿದೆ'' ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿದರು.
ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ ಶುಕ್ರವಾರ ಈ ಕುರಿತು ಮಾತನಾಡಿದರು. ಬ್ಯಾಂಕ್‌ಗಳು ಮತ್ತು ವಿಮಾ ಕಂಪನಿಗಳೊಂದಿಗೆ ಅದಾನಿ ಸಮೂಹವು ವಂಚನೆ ಮಾಡಿರುವ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮನಾಥನ್ ಅವರು, ''ಭಾರತದ ಸಾರ್ವಜನಿಕ ಹಣಕಾಸು ಸಂಸ್ಥೆಗಳು ಸದೃಢವಾಗಿವೆ. ಠೇವಣಿದಾರರಿಗೆ, ಪಾಲಿಸಿದಾರರಿಗೆ ಹಾಗೂ ಈ ಸಂಸ್ಥೆಗಳಲ್ಲಿ ಷೇರುಗಳನ್ನು ಹೊಂದಿರುವ ಯಾರಿಗಾದರೂ ಹಣಕಾಸಿನ ಸ್ಥಿರತೆಯ ದೃಷ್ಟಿಕೋನ ಬಗ್ಗೆ ಯಾವುದೇ ಕಾಳಜಿ ಇಲ್ಲದಂತಾಗಿದೆ. ಯಾವುದೇ ಒಂದು ಕಂಪನಿಯ ಪಾಲುದಾರಿಕೆಗಳಿಂದ ಬೃಹತ್ ಮಟ್ಟದಲ್ಲಿ ಪರಿಣಾಮ ಉಂಟಾಗುವ ಸಾಧ್ಯತೆ ತೀರಾ ಕಡಿಮೆಯಿದೆ. ಈ ದೃಷ್ಟಿಕೋನದ ಅನ್ವಯ ಯಾವುದೇ ಕಾಳಜಿ ವಹಿಸಬೇಕಿಲ್ಲ" ಎಂದು ಅವರು ಬಜೆಟ್ ಬಳಿಕ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಶೇಕಡಾ 70ರಷ್ಟು ಕುಸಿತ ಕಂಡ ಅದಾನಿ ಷೇರು: ಅದಾನಿ ಎಂಟರ್‌ಪ್ರೈಸಸ್‌ನ ಷೇರು ಬೆಲೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಗರಿಷ್ಠ 4,190 ರೂ.ಗಳಿಂದ ಅಂದ್ರೆ ಶೇಕಡಾ 70ರಷ್ಟು ಕುಸಿತ ಕಂಡಿದೆ. ಜನವರಿಯಿಂದ, ಬಿಎಸ್‌ಇ ಸೆನ್ಸೆಕ್ಸ್ 1,000 ಪಾಯಿಂಟ್‌ಗಳಷ್ಟು ಕುಸಿದಿದೆ. ಇದು ಅದಾನಿ ಗುಂಪಿನ ಷೇರುಗಳಲ್ಲಿನ ಮಾರಾಟದಿಂದ ಈ ಪ್ರಕ್ರಿಯೆ ನಡೆದಿದೆ. ಸ್ಟಾಕ್ ಮಾರುಕಟ್ಟೆಯಲ್ಲಿನ ಪ್ರಕ್ಷುಬ್ಧತೆಯು ಹೂಡಿಕೆ ಸಂಗ್ರಹಣೆಗಳ ಪರಿಷ್ಕೃತ ಅಂದಾಜಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಸುತ್ತುತ್ತಿರುವ ಪ್ರಕ್ರಿಯೆಯಿಂದ ಬೃಹತ್ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸೋಮನಾಥನ್ ತಿಳಿಸಿದರು.
ಷೇರು ಮಾರುಕಟ್ಟೆ ಏರಿಳಿತ ಸಾಮಾನ್ಯ ಪ್ರಕ್ರಿಯೆ: "ಅವರು ಅಡ್ಡ ಪ್ರದರ್ಶನವನ್ನು ನೀಡವರು ಆಗಿದ್ದಾರೆ. ಷೇರು ಮಾರುಕಟ್ಟೆಗಳು ಮತ್ತು ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಮಾತ್ರ ಈ ರೀತಿಯ ಏರಿಳಿತದ ಪ್ರಕ್ರಿಯೆಗಳು ಆಸಕ್ತಿಯನ್ನುಂಟು ಮಾಡುತ್ತವೆ. ಸ್ಥೂಲ (ಬೃಹತ್) ಆರ್ಥಿಕ ದೃಷ್ಟಿಕೋನದ ಹಿನ್ನೆಲೆ ಗಮನಿಸಿದರೆ, ಇದು ಸಮಸ್ಯೆಯ ವಿಷಯವೇ ಅಲ್ಲ. ಇದು ನಮ್ಮ ದೃಷ್ಟಿಕೋನದಲ್ಲಿ ಮಾತ್ರ ಸಂಪೂರ್ಣ ಸಮಸ್ಯೆ ಕಾಣುತ್ತಿದೆ. ಸ್ಥೂಲ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಯಾವುದೇ ಮಾರುಕಟ್ಟೆಗಳಿಗೆ ಮೇಲೆ ಪರಿಣಾಮ ಬೀರುವುದಿಲ್ಲ. ಷೇರು ಮಾರುಕಟ್ಟೆ ಬೆಲೆಗಳಲ್ಲಿನ ಏರಿಳಿತ ಒಂದು ಸಾಮಾನ್ಯ ಪ್ರಕ್ರಿಯೆ ಅಷ್ಟೇ ಆಗಿದೆ. ಇದು ಎಲ್ಲಾ ಸಂದರ್ಭಗಳಲ್ಲಿ ಷೇರು ಮಾರುಕಟ್ಟೆಗಳಲ್ಲಿ ನಡೆಯುವ ಸಾಮಾನ್ಯ ವಿದ್ಯಮಾನವಾಗಿದೆ ಎಂದು ಕಾರ್ಯದರ್ಶಿ ಅಭಿಪ್ರಾಯಪಟ್ಟಿದ್ದಾರೆ.
ಸರಿಯಾದ ಹೂಡಿಕೆಯ ವಾತಾವರಣ ಸೃಷ್ಟಿಸಿ: "ಸರ್ಕಾರದ ಕಾಳಜಿ ಏನಿದ್ರೆ, ಸರಿಯಾದ ಹೂಡಿಕೆಯ ವಾತಾವರಣವನ್ನು ಸೃಷ್ಟಿಸುವುದು. ಹಣಕಾಸು ಮಾರುಕಟ್ಟೆಯ ಉತ್ತಮ ರೀತಿಯಲ್ಲಿ ನಿಯಂತ್ರಿಸಿ ಅದನ್ನು ನಿರ್ಮಿಸಬೇಕು. ಪಾರದರ್ಶಕತೆಯಿಂದ ಮಾರುಕಟ್ಟೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸರ್ಕಾರ ಖಚಿತಪಡಿಸಬೇಕು ಎಂದ ಅವರು, ಸರ್ಕಾರದ ಬೃಹತ್ ಆರ್ಥಿಕ ನೀತಿಗಳು ಉತ್ತಮವಾಗಿವೆ'' ಎಂದರು.
ಹಿಂಡೆನ್‌ಬರ್ಗ್ ರಿಸರ್ಚ್ ವರದಿ: ಗೌತಮ್ ಅದಾನಿ ನೇತೃತ್ವದ ಸಮೂಹ ವಹಿವಾಟು ಮತ್ತು ಷೇರು ಬೆಲೆ ಕುರಿತಂತೆ ಹಲವು ವಂಚನೆಗಳ ಬಗ್ಗೆ ಯುಎಸ್ ಮೂಲದ ಕಿರು-ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್ ವರದಿಯಲ್ಲಿ ತಿಳಿಸಿದೆ. ಈ ಆರೋಪಗಳ ನಂತರವೇ ಅದಾನಿ ಸಮೂಹದ ಷೇರುಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ಜನವರಿ 24 ರಂದು ಹಿಂಡೆನ್‌ಬರ್ಗ್ ವರದಿಯನ್ನು ಬಿಡುಗಡೆ ಮಾಡಿತ್ತು. ಅದಾನಿ ಎಂಟರ್‌ಪ್ರೈಸಸ್‌ನ 20,000-ಕೋಟಿ ರೂ. ಮೌಲ್ಯದ ಷೇರುಗಳ ಮೇಲೆ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಆದರೆ, ತಮ್ಮ ಮೇಲಿನ ಆರೋಪಗಳನ್ನು ಅದಾನಿ ಸಂಸ್ಥೆಯು ತಳ್ಳಿಹಾಕಿದೆ.
ಇದನ್ನೂ ಓದಿ: ಷೇರುಗಳ ಏರಿಳಿತ, ಅದಾನಿ ಎಫ್ಪಿಒ ರದ್ದು: ಹೂಡಿಕೆದಾರರಿಗೆ ₹20 ಸಾವಿರ ಕೋಟಿ ವಾಪಸ್