ETV Bharat / bharat

ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡನ ಹತ್ಯೆಗೈದ ನಕ್ಸಲರು

author img

By

Published : Feb 5, 2023, 7:18 PM IST

Updated : Feb 5, 2023, 8:13 PM IST

ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

maoists-kill-bjp-leader-in-bijapur-chhattisgarh
ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡನ ಹತ್ಯೆಗೈದ ನಕ್ಸಲರು

ಬಿಜಾಪುರ (ಛತ್ತೀಸ್​ಗಢ): ಛತ್ತೀಸ್​ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯಾದವರನ್ನು ನೀಲಕಂಠ ಕಕ್ಕೆಂ ಎಂದು ಗುರುತಿಸಲಾಗಿದ್ದು, ಇಲ್ಲಿನ ಉಸುರ್​ ಮಂಡಲದ ಬಿಜೆಪಿ ಅಧ್ಯಕ್ಷರಾಗಿದ್ದರು. ಅಲ್ಲದೇ, ಈ ಘಟನೆ ನಂತರ ಕರಪತ್ರ ಎಸೆದಿರುವ ನಕ್ಸಲರು ಹತ್ಯೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಬಾಂಬ್ ಸ್ಫೋಟದಲ್ಲಿ ಟಿಎಂಸಿ ಪಕ್ಷದ ಇಬ್ಬರು ಕಾರ್ಯಕರ್ತರ ಸಾವು: ಕಾಂಗ್ರೆಸ್ ಕೈವಾಡ ಆರೋಪ

ಮದುವೆ ಸಮಾರಂಭಕ್ಕೆ ಬಂದಿದ್ದ ನೀಲಕಂಠ: ಕಳೆದ 15 ವರ್ಷಗಳಿಂದ ಉಸುರ್​ ಮಂಡಲದ ಬಿಜೆಪಿ ಅಧ್ಯಕ್ಷರಾಗಿ ನೀಲಕಂಠ ಕಕ್ಕೆಂ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ತಮ್ಮ ನಾದಿನಿ ಮದುವೆ ಸಮಾರಂಭಕ್ಕೆಂದು ಸ್ವಗ್ರಾಮ ಆವಪಲ್ಲಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ನಕ್ಸಲರು ಬಂದು ನೀಲಕಂಠ ಕಕ್ಕೆಂ ಮೇಲೆ ದಾಳಿ ಮಾಡಿದ್ದಾರೆ. ಕುಟುಂಬದವರ ಎದುರೇ ನೀಲಕಂಠ ಕಕ್ಕೆಂ ಅವರ ತಲೆಯನ್ನು ಕಡಿದು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.

ನೀಲಕಂಠನಿಗೆ ಎಚ್ಚರಿಕೆ ನೀಡಿದ್ದ ನಕ್ಸಲರು?: ಹತ್ಯೆಯ ನಂತರ ನಕ್ಸಲೀಯರು ಕರಪತ್ರಗಳನ್ನು ಸ್ಥಳದಲ್ಲೇ ಎಸೆದಿದ್ದಾರೆ. ಈ ಹಿಂದೆಯೂ ನಕ್ಸಲೀಯರು ನೀಲಕಂಠ ಕಕ್ಕೆಂ ಅವರಿಗೆ ಎಚ್ಚರಿಕೆ ನೀಡಿದ್ದರು ಹೇಳಲಾಗುತ್ತಿದೆ. ಇದೀಗ ಅವಪಲ್ಲಿ ಗ್ರಾಮಕ್ಕೆ ನೀಲಕಂಠ ಆಗಮಿಸಿದ ವಿಷಯ ತಿಳಿದು ಹತ್ಯೆಗೆ ಯೋಜನೆ ರೂಪಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ನೀಲಕಂಠ ಅವರನ್ನು ಮನೆಯಿಂದ ಹೊರಗೆ ತಂದು ಕೊಡಲಿ ಮತ್ತು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮದಲ್ಲಿ ಆತಂಕದ ವಾತಾವರಣ: ಈ ಕೊಲೆ ಪ್ರಕರಣದಿಂದ ಇಡೀ ಆವಪಲ್ಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ, ನಕ್ಸಲರ ಈ ಕೃತ್ಯದ ಬಗ್ಗೆ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ನಕ್ಸಲ್​ ಪೀಡಿತ ಗ್ರಾಮದ Inspiring story.. ನಕ್ಸಲ್​ 'ಮಾವ' ಸ್ಫೋಟಿಸಿದ ಶಾಲೆಯಲ್ಲಿ ಸೊಸೆ ಶಿಕ್ಷಕಿ!

ಈ ಹಿಂದೆಯೂ ಬಿಜೆಪಿ ಮುಖಂಡರ ಹತ್ಯೆ: ಸದ್ಯ ನೀಲಕಂಠ ಕಕ್ಕೆಂ ಹತ್ಯೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು, ಎರಡು ವರ್ಷಗಳ ಹಿಂದೆ ಇದೇ ಬಿಜಾಪುರ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಮಜ್ಜಿ ಎಂಬುವವರನ್ನು ನಕ್ಸಲರು ಹತ್ಯೆ ಮಾಡಿದ್ದರು. ಇದಲ್ಲದೇ ಎರಡು ವರ್ಷಗಳ ಹಿಂದೆ ಬಿಜೆಪಿಯ ಯುವ ಮುಖಂಡ ಜಗದೀಶ್ ಕೊಂಡ್ರಾ ಅವರನ್ನೂ ನಕ್ಸಲೀಯರು ಕೊಂದು ಹಾಕಿದ್ದರು.

ಕೆಲ ವರ್ಷಗಳ ಹಿಂದೆ ಬಿಹಾರ, ಛತ್ತೀಸ್​ಗಢ, ಜಾರ್ಖಂಡ್​ ಸೇರಿದಂತೆ ಅನೇಕ ಭಾಗಗಳಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿತ್ತು. ಹಲವು ಕಡೆಗಳಲ್ಲಿ ನಕ್ಸಲ್​ ಪೀಡಿತ ಪ್ರದೇಶಗಳು, ಗ್ರಾಮಗಳು ಇದ್ದವು. ಆದರೆ, ನಿರಂತರವಾಗಿ ನಕ್ಸಲರ ದಮನಕ್ಕೆ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ. 2010ರಲ್ಲಿ 96 ಜಿಲ್ಲೆಗಳು ನಕ್ಸಲ್​ ಪೀಡಿತವಾಗಿದ್ದವು. 2021-22ರ ವೇಳೆಗೆ 46 ಜಿಲ್ಲೆಗಳು ಮಾತ್ರ ನಕ್ಸಲ್​ ಬಾಧಿತವಾಗಿವೆ ಎಂದು ಕಳೆದ ವರ್ಷ ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿತ್ತು.

ಇದನ್ನೂ ಓದಿ: ಚಿನ್ನಾಭರಣ ದೋಚಲು ಯತ್ನ; ದರೋಡೆಕೋರನ ಬೆರಳು ಕಚ್ಚಿ ಕತ್ತರಿಸಿದ ಮಹಿಳೆ!

Last Updated : Feb 5, 2023, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.