ETV Bharat / bharat

ಗುತ್ತಿಗೆದಾರನ ಕೊಡಲಿಯಿಂದ ಕೊಚ್ಚಿದ ಮಾವೋಗಳು; ಅಟ್ಟಹಾಸದಲ್ಲಿ ಮೂರು ವಾಹನಗಳು ಭಸ್ಮ! - Naxalite News

ಶಸ್ತ್ರಸಜ್ಜಿತ ಮಾವೋವಾದಿಗಳ ಉಪಟಳದಿಂದ ಓರ್ವ ವ್ಯಕ್ತಿ ಸೇರಿದಂತೆ ಮೂರು ವಾಹನಗಳು ಸುಟ್ಟು ಕರಕಲಾಗಿವೆ. ಮೃತ ವ್ಯಕ್ತಿ ಗುತ್ತಿಗೆ ಕೆಲಸ ಮಾಡುತ್ತಿದ್ದನು. ಮಾವೋವಾದಿಗಳು ಮೊದಲು ಆತನನ್ನು ಕೊಡಲಿಯಿಂದ ಕೊಚ್ಚಿದ ಬಳಿಕ ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ.

Maoists hack Contractor To Death, Set afire 3 Vehicles In Malkangiri
ಮಾವೋವಾದಿಗಳ ಅಟ್ಟಹಾಸ
author img

By

Published : Dec 17, 2020, 4:35 PM IST

ಮಲ್ಕಂಗಿರಿ (ಒಡಿಶಾ) : ಒಡಿಶಾದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.

ಗುತ್ತಿಗೆದಾರನೊಬ್ಬನನ್ನು ಮನಬಂದಂತೆ ಕೊಚ್ಚಿ ಕೊಲೆಗೈದಿರುವ ಮಾವೋವಾದಿಗಳು, ಟ್ರ್ಯಾಕ್ಟರ್ ಮತ್ತು ಜೀಪು ಸೇರಿದಂತೆ ಒಟ್ಟು ಮೂರು ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಮೃತನನ್ನು ಸುಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ.

ಓದಿ: ಛತ್ತಿಸ್​ಗಢದಲ್ಲಿ ನಕ್ಸಲರ ಅಟ್ಟಹಾಸ: ಇಬ್ಬರ ಹತ್ಯೆ, ಸ್ಫೋಟದಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯ

ಒಡಿಶಾದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಸುಮಾರು 15 ರಿಂದ 20 ಮಾವೋವಾದಿಗಳು ಮೊದಲು ಸುಕುಮಾರ್​ನನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾರೆ. ಆ ಬಳಿಕ ಎಸ್‌ಯುವಿ ಸೇರಿದಂತೆ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಸುಕುಮಾರ್‌ಗೆ ಸೇರಿದ ವಾಹನವೂ ಇದೆ.

ಮಾವೋವಾದಿಗಳ ಅಟ್ಟಹಾಸ

ಗುರುವಾರ ಮಲ್ಕಂಗಿರಿ ಜಿಲ್ಲೆಯ ಮಥಿಲಿ ಪೊಲೀಸ್ ವ್ಯಾಪ್ತಿಯಲ್ಲಿರುವ ಗೋಲಿಯಾ ಎಂಬ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.