ETV Bharat / bharat

ರಾಜಸ್ಥಾನದ ಅರಣ್ಯಗಳಿಂದ 23ಕ್ಕೂ ಹೆಚ್ಚು ಹುಲಿಗಳು ಕಣ್ಮರೆ: ಕಾರಣವೇನು? - Ranthambore core area

ರಣಥಂಬೋರ್ ಕೋರ್ ಪ್ರದೇಶದ ಒಂಬತ್ತು ಹುಲಿಗಳು, ರಣಥಂಬೋರ್ ಬಫರ್ ವಲಯದಿಂದ ಎರಡು ಹುಲಿಗಳು ಮತ್ತು ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಹೊರಗಿನ ಕೈಲಾದೇವಿ ಪ್ರದೇಶದಿಂದ ಎರಡು ಹುಲಿಗಳು ನಾಪತ್ತೆಯಾಗಿವೆ.

over 23 tigers gone missing in rajasthans forests
ರಾಜಸ್ಥಾನದ ಅರಣ್ಯಗಳಿಂದ 23ಕ್ಕೂ ಹೆಚ್ಚು ಹುಲಿಗಳು ಕಣ್ಮರೆ
author img

By

Published : Nov 18, 2022, 9:01 AM IST

Updated : Nov 18, 2022, 9:07 AM IST

ಭರತ್​ಪುರ(ರಾಜಸ್ಥಾನ): ಕಳೆದ ಮೂರು ವರ್ಷಗಳಲ್ಲಿ ರಾಜಸ್ಥಾನದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, 14 ಹುಲಿಗಳು ಮತ್ತು ಒಂಬತ್ತು ಮರಿಗಳು ಕಣ್ಮರೆಯಾಗಿವೆ. ಅರಣ್ಯ ಇಲಾಖೆಯವರು ಹುಲಿಗಳ ಸಂರಕ್ಷಣೆಗೆ ಕಾವಲು ಕಾಯುತ್ತಿದ್ದರೂ ಹಲವಾರು ಹುಲಿಗಳು ಮಾಯವಾಗುತ್ತಿವೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿಂದ ನಾಪತ್ತೆ?: ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದಿಂದ ಗರಿಷ್ಠ ಸಂಖ್ಯೆಯ ಹುಲಿಗಳು ನಾಪತ್ತೆಯಾಗಿವೆ. ಇವುಗಳ ಪೈಕಿ ರಣಥಂಬೋರ್ ಕೋರ್ ಪ್ರದೇಶದ 9 ಹುಲಿಗಳು, ರಣಥಂಬೋರ್ ಬಫರ್ ವಲಯದಿಂದ 2 ಹುಲಿಗಳು ಮತ್ತು ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಹೊರಗಿನ ಕೈಲಾದೇವಿ ಪ್ರದೇಶದಿಂದ 2 ಹುಲಿಗಳು ನಾಪತ್ತೆಯಾಗಿವೆ. ಅದರ ಜೊತೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮುಕುಂದರ ಬೆಟ್ಟದಿಂದ ಕೂಡ ಒಂದು ಹುಲಿ ಕಾಣೆಯಾಗಿದೆ.

ಅಧಿಕಾರಿಗಳು ಹೇಳುವುದೇನು?: ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶದ ಡಿಎಫ್‌ಒ ಸಂಗ್ರಾಮ್ ಸಿಂಗ್ ಮಾತನಾಡಿ, 'ಹುಲಿಗಳು ಕಣ್ಮರೆಯಾಗಲು ಹಲವು ಕಾರಣಗಳಿವೆ. ಇಲ್ಲಿ ಕೆಲವು ಹುಲಿಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯವಿರುವ ಹುಲಿಗಳಿವೆ. ಸಾಮರ್ಥ್ಯ ಕಡಿಮೆ ಇರುವಂತವು ತಮ್ಮದೇ ಒಂದು ವಲಯವನ್ನು ಸ್ಥಾಪಿಸಲು ಸಾಧ್ಯವಾಗದೇ ಕಾಡಿನಿಂದ ಹೊರ ಹೋಗಿರುವ ಸಾಧ್ಯತೆಗಳಿವೆ. ಅಂತಹ ಸಂದರ್ಭದಲ್ಲಿ ಆ ಹುಲಿಗಳನ್ನು ಪತ್ತೆ ಹಚ್ಚಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಅರಣ್ಯದಲ್ಲಿ ಸಿಬ್ಬಂದಿಗೆ ತಲುಪಲು ಸಾಧ್ಯವಾಗದಂತಹ ಹಲವು ಪ್ರದೇಶಗಳಿವೆ. ಅಂತಹ ಜಾಗಗಳಲ್ಲಿ ಹುಲಿಗಳಿದ್ದರೆ ಅವುಗಳನ್ನು ಪತ್ತೆ ಹಚ್ಚುವುದು ಕಷ್ಟ. ಆಗ ಹುಲಿ ಕಣ್ಮರೆಯಾಗಿದೆ ಎಂದು ಪರಿಗಣಿಸಲಾಗುತ್ತದೆ' ಎಂದರು.

'ದಟ್ಟ ಕಾಡಿನಲ್ಲಿ ಹುಲಿಗಳು ಸ್ವಾಭಾವಿಕವಾಗಿ ಸಾವನ್ನಪ್ಪಿದರೆ ಅವುಗಳ ದೇಹವನ್ನು ಕೆಲವೇ ದಿನಗಳಲ್ಲಿ ಇತರ ಕಾಡುಪ್ರಾಣಿಗಳು ಮತ್ತು ಕೀಟಗಳು ತಿಂದು ಬಿಡುತ್ತವೆ. ಕೆಲವೊಮ್ಮೆ ಹುಲಿಗಳು ಸಾವನ್ನಪ್ಪಿರುವುದಕ್ಕೆ ಯಾವುದೇ ಪುರಾವೆಗಳೂ ದೊರೆಯದಂತೆ ದೇಹವನ್ನು ಖಾಲಿ ಮಾಡಿರುತ್ತವೆ. ಈಗ ನಾಪತ್ತೆಯಾಗಿರುವ ಹುಲಿಗಳಿಗೆ ಬೇಟೆಯಾಡಿರುವ ಕುರುಹುಗಳೂ ಪತ್ತೆಯಾಗಿಲ್ಲ' ಎಂದು ಹೇಳಿದರು.

'ಸಾಮಾನ್ಯವಾಗಿ ಒಂದು ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದರೆ ನಾಲ್ಕೂ ಬದುಕುಳಿಯುತ್ತವೆ ಎಂದುಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಬದುಕುಳಿಯುವ ಪ್ರಮಾಣ ಶೇ 50ರಷ್ಟು ಆಗಿರುತ್ತದೆ. ಆ ನಾಲ್ಕು ಮರಿಗಳಲ್ಲಿ ಎರಡು ಸ್ವಾಭಾವಿಕವಾಗಿ ಸಾಯಬಹುದು ಅಥವಾ ಅನೇಕ ಬಾರಿ ಪರಸ್ಪರ ಗಲಾಟೆ ಮಾಡಿಕೊಂಡು ಮತ್ತು ಇತರ ಕಾರಣಗಳಿಂದ ಸಾಯುವ ಸಾಧ್ಯತೆಯೂ ಇರುತ್ತದೆ' ಎಂದರು.

'ಈಗ ಕಣ್ಮರೆಯಾಗಿರುವ ಹುಲಿಗಳನ್ನು ಸಾವನ್ನಪ್ಪಿವೆ ಎಂದು ಪರಿಗಣಿಸಬೇಕಾಗಿಲ್ಲ. ಯಾಕೆಂದರೆ 2010ರಲ್ಲಿ ರಣಥಂಭೋರ್​ ಹುಲಿ ಸಂರಕ್ಷಿತ ಪ್ರದೇಶದಿಂದ ಟಿ-38 ಹುಲಿ ನಾಪತ್ತೆಯಾಗಿತ್ತು. ಆದರೆ 10 ವರ್ಷಗಳ ನಂತರ 2020ರ ಅಕ್ಟೋಬರ್​ನಲ್ಲಿ ಈ ಹುಲಿ ಮತ್ತೆ ಕಾಡಿಗೆ ಮರಳಿದ್ದು ಈಗ ರಣಥಂಬೋರ್‌ನಲ್ಲಿ ತಿರುಗಾಡುತ್ತಿದೆ' ಎಂದು ಮಾಹಿತಿ ನೀಡಿದರು.

ಇಲಾಖೆ ಕೈಗೊಂಡಿರುವ ಕ್ರಮಗಳೇನು?: ಅರಣ್ಯ ಇಲಾಖೆ ವತಿಯಿಂದ ಹುಲಿಗಳ ರಕ್ಷಣೆಗಾಗಿ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗಡಿ ಗೃಹ ರಕ್ಷಕರು, ಗೃಹ ರಕ್ಷಕರು ಮತ್ತು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 299 ಗಡಿ ಗೃಹರಕ್ಷಕರು ಅರಣ್ಯ ಇಲಾಖೆ ನೌಕರರೊಂದಿಗೆ ಗಸ್ತು ತಿರುಗುತ್ತಾರೆ. ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳ ಸೂಕ್ಷ್ಮ ಸ್ಥಳಗಳಲ್ಲಿ ಹೊಸ ಔಟ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಇ-ಸರ್ವೇಲೆನ್ಸ್ ಟವರ್‌ಗಳು ಮತ್ತು ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಮೇಲ್ವಿಚಾರಣೆಯನ್ನೂ ಮಾಡಲಾಗುತ್ತದೆ.

ಇದನ್ನೂ ಓದಿ: 50ರ ಹೊಸ್ತಿಲಲ್ಲಿ ಬಂಡೀಪುರ ಟೈಗರ್ ರಿಸರ್ವ್...‌ 10 ಹುಲಿ ಇದ್ದ ಕಾಡಲ್ಲೀಗ 140ಕ್ಕೂ ಹೆಚ್ಚು ಹುಲಿಗಳು!

Last Updated : Nov 18, 2022, 9:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.