ETV Bharat / bharat

ಇಂದಿನಿಂದ ಏನೆಲ್ಲಾ ಬದಲಾವಣೆ?.. ಎಸ್​​ಬಿಐ ಐಎಂಪಿಎಸ್ ವರ್ಗಾವಣೆ ಮಿತಿ ಏರಿಕೆ: ಎಲ್​ಪಿಜಿ ದರಗಳೂ ಪರಿಷ್ಕರಣೆ

author img

By

Published : Feb 1, 2022, 9:58 AM IST

ಎಸ್​ಬಿಐ ಹೊಸ ನಿಯಮದ ಪ್ರಕಾರ 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಹಣ ವರ್ಗಾವಣೆ ಮಾಡುವ ವ್ಯಕ್ತಿಗಳು 20 ರೂಪಾಯಿ ಮತ್ತು ಹೆಚ್ಚುವರಿ ಜಿಎಸ್​​ಟಿ ಪಾವತಿ ಮಾಡಬೇಕಾಗುತ್ತದೆ. ಆದರೆ, 2 ಲಕ್ಷ ರೂಪಾಯಿವರೆಗಿನ ವರ್ಗಾವಣೆಗೆ ಶುಲ್ಕ ಇರುವುದಿಲ್ಲ.

many-rules-change-from-1-february-2022-sbi-imps-rates-lpg-price-changes
ಎಸ್​​ಬಿಐ ಐಎಂಪಿಎಸ್ ವರ್ಗಾವಣೆ ಮಿತಿ ಏರಿಕೆ: ಎಲ್​ಪಿಜಿ ದರಗಳೂ ಪರಿಷ್ಕರಣೆ

ಮುಂಬೈ: 2022ರ ಫೆಬ್ರವರಿ 1ರಿಂದ ಅನ್ವಯವಾಗುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳು ಜನಸಾಮಾನ್ಯರ ಜೀವನದ ಮೇಲೆ ಅತಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಐಎಂಪಿಎಸ್ (IMPS) ಮೂಲಕ ಹಣವನ್ನು ವರ್ಗಾವಣೆ ಮಾಡುವ ವ್ಯಕ್ತಿಗಳಿಗೆ ಹಣ ವರ್ಗಾವಣಾ ಶುಲ್ಕವನ್ನು ಏರಿಕೆ ಮಾಡಲಾಗಿದೆ.

ಐಎಂಪಿಎಸ್ ಮೂಲಕ ವರ್ಗಾವಣೆ ಮಾಡಬಹುದಾದ ಹಣದ ಮಿತಿಯನ್ನು 2 ಲಕ್ಷದಿಂದ 5 ಲಕ್ಷದವರೆಗೆ ಏರಿಕೆ ಮಾಡಲಾಗಿದೆ. ಆದರೆ 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಹಣ ವರ್ಗಾವಣೆ ಮಾಡುವ ವ್ಯಕ್ತಿಗಳು 20 ರೂಪಾಯಿ ಮತ್ತು ಹೆಚ್ಚುವರಿ ಜಿಎಸ್​​ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ, 2 ಲಕ್ಷ ರೂಪಾಯಿವರೆಗಿನ ವರ್ಗಾವಣೆಗೆ ಶುಲ್ಕ ಇರುವುದಿಲ್ಲ.

ಎಲ್​ಪಿಜಿ ದರದಲ್ಲೂ ಬದಲಾವಣೆ

ಪ್ರತಿ ತಿಂಗಳ ಮೊದಲ ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಕಂಪನಿಗಳು ಪರಿಷ್ಕರಣೆ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಆಧರಿಸಿ, ದೇಶೀಯ ಕಂಪನಿಗಳು ಪೆಟ್ರೋಲ್, ಡೀಸೆಲ್, ಎಲ್​ಪಿಜಿ ಬೆಲೆ ನಿಗದಿಪಡಿಸುತ್ತವೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪ್ರಸ್ತುತ, ದೇಶದ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್​​ಪಿಜಿ ಸಿಲಿಂಡರ್ ಬೆಲೆ 899.50 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ 926 ರೂಪಾಯಿ, ಮುಂಬೈನಲ್ಲಿ 899.50 ರೂಪಾಯಿ ಮತ್ತು ಚೆನ್ನೈನಲ್ಲಿ 915.50 ರೂಪಾಯಿ ಇದೆ. ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1998.50 ರೂಪಾಯಿ, ಕೋಲ್ಕತ್ತಾದಲ್ಲಿ 2,076 ರೂಪಾಯಿ, ಮುಂಬೈನಲ್ಲಿ 1,948.50 ರೂಪಾಯಿ ಮತ್ತು ಚೆನ್ನೈನಲ್ಲಿ 2,131 ರೂಪಾಯಿ ಇದೆ.

ಇದನ್ನೂ ಓದಿ: ಬಜೆಟ್‌ ಪ್ರತಿಯೊಂದಿಗೆ ರಾಷ್ಟ್ರಪತಿ ಭವನಕ್ಕೆ ಬಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.