ETV Bharat / bharat

ಕಾಲುವೆಗೆ ಉರುಳಿ ಬಿದ್ದ ಬೊಲೆರೋ ವಾಹನ: 7 ಮಂದಿ ಸಾವು - ಒಡಿಶಾದ ಸಂಬಲ್​ಪುರದಲ್ಲಿ ಭೀಕರ ರಸ್ತೆ ಅಪಘಾತ

ಒಡಿಶಾದ ಸಂಬಲ್​ಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

many person died  many person died in Bolero overturns  many person died in Bolero overturns in Canal  ಕಾಲುವೆಗೆ ಬಿದ್ದ ವಾಹನ  ಸಂಬಲ್‌ಪುರದಲ್ಲಿ ಭೀಕರ ರಸ್ತೆ ಅಪಘಾತ  ಮದುವೆಗೆಂದು ತೆರಳಿದ್ದ ವಾಹನ  ಸಂಬಲ್​ಪುರದ ಘಮ್ಮನ್ ಕಾಲುವೆ ಬಳಿ ಈ ಅಪಘಾತ  ಒಡಿಶಾದ ಸಂಬಲ್​ಪುರದಲ್ಲಿ ಭೀಕರ ರಸ್ತೆ ಅಪಘಾತ  ಜನರು ಕಾಲುವೆಯಲ್ಲಿ ಉಸಿರುಗಟ್ಟಿ
ಭೀಕರ ಅಪಘಾತ: ಕಾಲುವೆಗೆ ಬಿದ್ದ ವಾಹನ
author img

By

Published : Mar 31, 2023, 12:13 PM IST

ಸಂಬಲ್‌ಪುರ (ಒಡಿಶಾ): ಮದುವೆಗೆ ತೆರಳಿದ್ದ ವಾಹನವೊಂದು ನಿಯಂತ್ರಣ ಕಳೆದುಕೊಂಡು ಕಾಲುವೆಗೆ ಉರುಳಿ ಬಿದ್ದು 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಸಂಬಲ್​ಪುರದ ಘಮ್ಮನ್ ಕಾಲುವೆ ಬಳಿ ಸಂಭವಿಸಿದೆ. ಮೃತರನ್ನು ಅಜಿತ್ ಖಮಾರಿ, ದಿವ್ಯಾ ಲುಹಾನ್, ಸರೋಜ್ ಸೇಠ್, ಸುಮಂತ್ ಭೋಯ್, ಸುಬಲ್ ಭೋಯ್, ರಮಾಕಾಂತ್ ಭೋಯ್ ಮತ್ತು ಚಾಲಕ ನತಿಘನ್ ಭೋಯ್ ಎಂದು ಗುರುತಿಸಲಾಗಿದೆ.

ಸಂಬಲ್‌ಪುರದ ಪರ್ಮನ್‌ಪುರದಿಂದ ಜಾರ್ಸುಗುಡ ಜಿಲ್ಲೆಯ ಬದ್ಧರ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಅವಘಡ ಜರುಗಿದೆ. ಚಾಲಕನಿಗೆ ಯು-ಟರ್ನ್ ತಿಳಿಯದ ಕಾರಣ ವಾಹನ ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ವಾಹನದಿಂದ ಹೊರಬರಲಾಗದೆ ಉಸಿರುಗಟ್ಟಿ ಏಳು ಮಂದಿ ಸಾವನ್ನಪ್ಪಿದ್ದಾರೆ. ನಸುಕಿನ ಜಾವ 2 ಗಂಟೆಯ ಸುಮಾರಿಗೆ ಅಪಘಾತ ನಡೆದಿದ್ದು ರಾತ್ರಿ ಆಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿತ್ತು. ನಾಲ್ವರು ಗಾಯಾಳುಗಳಿಗೆ ಸಂಬಲ್‌ಪುರ ಜಿಲ್ಲಾ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಇಲ್ಲಿನ ಜರ್ಸುಗುಡ ಜಿಲ್ಲೆಯ ಲಖನ್‌ಪುರ ತಾಲೂಕಿನ ಲಾಧರ ಗ್ರಾಮದಿಂದ ಸಂಬಲ್‌ಪುರ ಜಿಲ್ಲಾಡಳಿತ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ಮನ್‌ಪುರ ಪ್ರದೇಶಕ್ಕೆ ವಧು-ವರರ ಸಂಬಂಧಿಕರು ತೆರಳಿದ್ದರು. ಈ ಪೈಕಿ ಕೆಲವರು ತಡರಾತ್ರಿ ಬೇರೊಂದು ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದಾರೆ. ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಅಪಘಾತವಾಗಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಕಾಲುವೆಯಲ್ಲಿ ಮುಳುಗಿದ್ದ ವಾಹನವನ್ನು ಜೆಸಿಬಿ ಮೂಲಕ ಹೊರ ತೆಗೆದಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ: ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.