ETV Bharat / bharat

ಹರಿದ್ವಾರ: ಹುರುಳಿ ಹಿಟ್ಟು ಸೇವಿಸಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ವಿಷಾಹಾರ ಸೇವಿಸಿ 120ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

Haridwar Food Poisoning incident  people food poisoned in Haridwar  haridwar crime news  Food Safety Department  haridwar buckwheat flour  ಹರಿದ್ವಾರದಲ್ಲಿ ವಿಷ ಆಹಾರ ಸೇವಿಸಿ ಜನ ಅಸ್ವಸ್ಥ  ಉತ್ತರಾಖಂಡ್​ನಲ್ಲಿ ಜನ ವಿಷ ಆಹಾರ ಸೇವಿಸಿದ ಘಟನೆ  ಹರಿದ್ವಾರ ಅಪರಾಧ ಸುದ್ದಿ  ಆಹಾರ ಸುರಕ್ಷತಾ ಇಲಾಖೆ
ಹುರುಳಿ ಹಿಟ್ಟು ಸೇವಿಸಿ 120ಕ್ಕೂ ಹೆಚ್ಚು ಜನ ಅಸ್ವಸ್ಥ
author img

By

Published : Apr 4, 2022, 8:39 AM IST

ಹರಿದ್ವಾರ: ಶನಿವಾರ ರಾತ್ರಿ ಹುರುಳಿ ಹಿಟ್ಟು ಸೇವಿಸಿ ಮಕ್ಕಳು, ಮಹಿಳೆಯರು ಸೇರಿ ಸುಮಾರು 122 ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಾಂಗ್ರಿ ಮತ್ತು ಬ್ರಹ್ಮಪುರಿ ಗ್ರಾಮದಲ್ಲಿ ನಡೆದಿದೆ. ವಿಷಾಹಾರ ಸೇವಿಸಿ ಅಸ್ವಸ್ಥಗೊಂಡವರು ಇಲ್ಲಿನ ಜಿಡಿ ಮತ್ತು ಮೇಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಹರಿದ್ವಾರದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

ಹರಿದ್ವಾರ ಜಿಲ್ಲಾಧಿಕಾರಿ ವಿನಯ್ ಶಂಕರ್ ಪಾಂಡೆ ಆಹಾರ ಸುರಕ್ಷತಾ ಇಲಾಖೆಗೆ ಗ್ರಾಮಸ್ಥರು ಸೇವಿಸಿದ ಆಹಾರದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆ ಮಾಡುವಂತೆ ಆದೇಶಿಸಿದ್ದಾರೆ. 'ಎಲ್ಲ ರೋಗಿಗಳ ಸ್ಥಿತಿ ಸಹಜವಾಗಿದೆ. ಇದು ಸಾಮಾನ್ಯ ಆಹಾರ ವಿಷಕಾರಿ ಘಟನೆಯಾಗಿದೆ. ಶೀಘ್ರದಲ್ಲೇ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಈ ಘಟನೆಗೆ ಸಂಬಂಧಪಟ್ಟ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಶ್ರೀಲಂಕಾ ಸಚಿವರ ಸಾಮೂಹಿಕ ರಾಜೀನಾಮೆ: ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಮುಂದುವರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.