ETV Bharat / bharat

ಉತ್ತರಾಖಂಡದಲ್ಲಿ ಮಳೆಯಾರ್ಭಟಕ್ಕೆ 40 ಸಾವು: ನೈನಿತಾಲ್ ಸಂಪರ್ಕ ಕಡಿತ, ಪ್ರವಾಹ ಪರಿಸ್ಥಿತಿ ನಿರ್ಮಾಣ

'ದೇವತೆಗಳ ಭೂಮಿ' ಎಂದೆ ಪ್ರಖ್ಯಾತವಾಗಿರುವ ಉತ್ತರಾಖಂಡದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇಲ್ಲಿಯವರೆಗೆ 40 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಸ್ಥಳಗಳಲ್ಲಿ ಮನೆಗಳು ಉರುಳಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.

Uttrakhand rains
Uttrakhand rains
author img

By

Published : Oct 19, 2021, 3:57 PM IST

Updated : Oct 19, 2021, 6:36 PM IST

ನೈನಿತಾಲ್​(ಉತ್ತರಾಖಂಡ): ದೇವರ ನಾಡು ಕೇರಳದಲ್ಲಿ ಮಳೆಯಾರ್ಭಟ ಕಡಿಮೆಯಾಗುತ್ತಿದ್ದಂತೆ ಇದೀಗ ಉತ್ತರಾಖಂಡ ವರುಣನ ಅವಕೃಪೆಗೆ ತುತ್ತಾಗಿದ್ದು, ರಕ್ಕಸ ಮಳೆಗೆ ಈಗಾಗಲೇ 40 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಭೀಕರ ಮಳೆಯಿಂದಾಗಿ ಬಹುತೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಪ್ರಮುಖವಾಗಿ ಅನೇಕ ಮನೆಗಳು ಧರೆಗುರುಳಿದ್ದು, ಅನೇಕರು ಜೀವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

  • #WATCH | An under construction bridge, over a raging Chalthi River in Champawat, washed away due to rise in the water level caused by incessant rainfall in parts of Uttarakhand. pic.twitter.com/AaLBdClIwe

    — ANI (@ANI) October 19, 2021 " class="align-text-top noRightClick twitterSection" data=" ">

ಸತತ ಮಳೆಯಿಂದಾಗಿ ಮೇಘ ಸ್ಫೋಟ ಹಾಗೂ ಭೂಕುಸಿತ ಉಂಟಾಗಿದ್ದು, ನೈನಿತಾಲ್​​ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ 10 ಜನರು ಸಾವಿಗೀಡಾಗಿದ್ದಾರೆ. ಅದರಲ್ಲಿ ಐವರು ಕಾರ್ಮಿಕರು ಸೇರಿಕೊಂಡಿದ್ದು, ಇಬ್ಬರು ಬಿಹಾರ ಹಾಗೂ ಮೂವರು ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದೆ.

ಪ್ರವಾಹ ಹಾಗೂ ಭೂಕುಸಿತದಿಂದಾಗಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬೇರೆ ಬೇರೆ ರಾಜ್ಯಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನೈನಿತಾಲ್​​ ಸಂಪರ್ಕ ಕಡಿತಗೊಂಡಿದೆ. ರಾಮಗಢದಲ್ಲಿ ಮನೆ ಕುಸಿದು ಐವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿರಿ: Watch:ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ನದಿ, ತುಂಡು ಭೂಮಿಯಲ್ಲಿ ಸಿಲುಕಿದ ಗಜರಾಜ

ಇದನ್ನೂ ಓದಿರಿ: ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ ಸಂಬಂಧಿ.. ಬಿಡುಗಡೆಗಾಗಿ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕಿ!

  • #WATCH | Uttarakhand:Locals present at a bridge over Gaula River in Haldwani shout to alert a motorcycle rider who was coming towards their side by crossing the bridge that was getting washed away due to rise in water level. Motorcycle rider turned back & returned to his own side pic.twitter.com/Ps4CB72uU9

ರಾಜ್ಯದಲ್ಲಿ ಪರಿಸ್ಥಿತಿ ಉಲ್ಭಣಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಈಗಾಗಲೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್​​ ಧಾಮಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಕೂಡ ಪ್ರವಾಹ ಪೀಡಿತ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಜನರ ರಕ್ಷಣೆಗೆ ಹೆಲಿಕಾಪ್ಟರ್​

  • Uttarakhand CM Pushkar Singh Dhami conducted aerial survey of areas affected due to heavy rainfall. He later reviewed the assessment of losses after reaching Rudraprayag.

    Minister Dhan Singh Rawat and state's DGP Ashok Kumar also accompanied him. pic.twitter.com/IAKWGs29Nd

ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರ ರಕ್ಷಣೆಗೆ ಹೆಲಿಕಾಪ್ಟರ್​ಗಳ ಸಹಾಯ ಪಡೆದುಕೊಳ್ಳಲಾಗಿದ್ದು, ಎರಡು ಹೆಲಿಕಾಪ್ಟರ್​ ನೈನಿತಾಲ್​ ಹಾಗೂ ಮತ್ತೊಂದು ಗರ್​ವಾಲ್​ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಕಳೆದ 48 ಗಂಟೆಗಳಿಂದ ಮಳೆ ಪೀಡಿತ ಸ್ಥಳದ ಯಾವುದೇ ಪ್ರದೇಶದಲ್ಲಿ ವಿದ್ಯುತ್​ ಹಾಗೂ ದೂರವಾಣಿ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ​​

Last Updated : Oct 19, 2021, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.