ETV Bharat / bharat

ತಾಯಿ ಕಳ್ಕೊಂಡ 'ಕೃಷ್ಣ'ನಿಗೆ ಎದೆಹಾಲುಣಿಸಲು ಮುಂದಾದ 'ಯಶೋಧೆ'ಯರು: ಮಹಾರಾಷ್ಟ್ರದಲ್ಲಿ ಅಪರೂಪದ ಘಟನೆ

ತನ್ನ ಮಗುವೊಂದು ಕಣ್ಬಿಟ್ಟು ಹೊಸ ಪ್ರಪಂಚ ನೊಡುವ ಮುನ್ನವೇ ತಾಯಿ ಇಹಲೋಕ ಬಿಟ್ಟು ಹೋಗಿದ್ದಳು. ಆ ಮಗು ಹಸಿವಿನಿಂದ ಹಾಲಿಗಾಗಿ ಹಾತೊರೆಯುತ್ತಿದ್ದರೆ, ಅಲ್ಲಿದ್ದ ತಾಯಂದಿರು ಕೃಷ್ಣನನ್ನು ಯಶೋಧೆ ಸಲಹಿದಂತೆ ಅವರ ಎದೆಹಾಲು ನೀಡಿ ಸಲಹಿದ ಘಟನೆ ನಡೆದಿದೆ.

nagpur
nagpur
author img

By

Published : May 31, 2021, 10:16 AM IST

ನಾಗ್ಪುರ(ಮಹಾರಾಷ್ಟ್ರ): ಹೆರಿಗೆ ಸಮಯದಲ್ಲಿ ಕೋವಿಡ್​ ಸೋಂಕಿತ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಇನ್ನೊಂದೆಡೆ ಆಕೆ ಹೆತ್ತ ಮಗು ಹಾಲಿಗಾಗಿ ಹಸಿವಿನಿಂದ ಕಂಗೆಟ್ಟು ಅಳುತ್ತಿತ್ತು. ಆ ದೃಶ್ಯ ನೊಡಲಾಗದೆ ಅಲ್ಲಿದ್ದ ಹಲವಾರು ತಾಯಂದಿರು ಹಸುಳೆಗೆ ಎದೆಹಾಲು ನೀಡಲು ಮುಂದೆ ಬಂದರು. ಈ ಅಪರೂಪದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಿತು.

ನಾಗ್ಪುರದ ಮೀನಲ್​ ವರ್ನೇಕರ್ ಅವರಿಗೆ ಥಾಣೆಯ ಚೇತನ್​ ಎಂಬವರ ಜೊತೆ ವಿವಾಹವಾಗಿತ್ತು. ವಿವಾಹದ ಬಳಿಕ ಸತಿ-ಪತಿ ಇಬ್ಬರೂ ಥಾಣೆಯಲ್ಲಿಯೇ ವಾಸಿಸುತ್ತಿದ್ದರು. ಈ ನಡುವೆ ಗರ್ಭವತಿಯಾದ ಮೀನಲ್​ ತನ್ನ ತಾಯಿ ಮನೆಗೆ ಬಂದಿದ್ದಾರೆ. ಆದ್ರೆ ಆಕೆ 8 ತಿಂಗಳ ಗರ್ಭಿಣಿಯಾಗಿರುವಾಗಲೇ ಆಕೆಗೆ ಕೊರೊನಾ ಸೋಂಕಿತ್ತು. ತಕ್ಷಣವೇ ಆಕೆಯನ್ನು ಪೋಷಕರು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

nagpur
ಮಗು ಇವಾನ್

ಆದ್ರೆ ಆಕೆ ಪ್ರಸವ ಸಂದರ್ಭದಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ತಕ್ಷಣವೇ ವೈದ್ಯರು ಆಪರೇಷನ್​ ಮಾಡಿ ಮಗುವನ್ನು ಬದುಕಿಸುವಲ್ಲಿ ಸಫಲರಾದರು.

ಇನ್ನು ಮರಣಕ್ಕೂ ಮುನ್ನ ತನಗೆ ಹುಟ್ಟುವ ಮಗುವಿಗೆ ಇವಾನ್​ ಅನ್ನೋ ಹೆಸರಿಡಬೇಕೆಂದು ಆಕೆ ಆಶಿಸಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ. ಆಪರೇಷನ್​ ಬಳಿಕ ಇವಾನ್​ ತಾಯಿ ಹಾಲು ಮಾತ್ರವೇ ಕುಡಿಯಬೇಕೆಂದು ಹೇಳಿದ್ದರಂತೆ. ಈ ಸಂದರ್ಭ ಅನೇಕ ತಾಯಂದಿರು ಇವಾನ್​ಗೆ ಎದೆಹಾಲು ನೀಡಲು ಮುಂದೆ ಬಂದಿದ್ದಾರೆ. ಪ್ರಸ್ತುತ ಇವಾನ್​ ಆರೋಗ್ಯವಾಗಿದ್ದು, ಇನ್ನೆರಡು ತಿಂಗಳವರೆಗೆ ಆತನಿಗೆ ತಾಯಿ ಹಾಲು ಮಾತ್ರವೇ ನೀಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ​

ಇದನ್ನೂ ಓದಿ: ಮಟನ್ ಶಾಪ್​ಗೆ ಸೋನು ಸೂದ್ ಹೆಸರು: ಅಂಗಡಿ ಮಾಲೀಕನಿಗೆ 'ರಿಯಲ್‌ ಹೀರೋ' ಹೇಳಿದ್ದಿಷ್ಟು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.