ಯೋಗಿನಿ ಏಕಾದಶಿಯಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಬಾರಿ ಯೋಗಿನಿ ಏಕಾದಶಿಯ ಜೂನ್ 13ರಂದು ಬಂದಿದೆ. ಈ ಯೋಗಿನಿ ಏಕಾದಶಿಯ ವಿಶೇಷ ಎಂದರೆ ಹರಿಹರರ ಪೂಜೆ. ಸಾಮಾನ್ಯವಾಗಿ ಏಕಾದಶಿ ವಿಷ್ಣುವಿಗೆ ಸಮರ್ಪಣೆ ಮಾಡಲಾಗುತ್ತದೆ. ಆದರೆ, ಈ ಯೋಗಿನಿ ಏಕಾದಶಿಯಂದು ವಿಷ್ಣುವಿನ ಜೊತೆಗೆ ಶಿವನ ಆರಾಧನೆಯನ್ನು ಮಾಡಲಾಗುವುದು. ಯೋಗಿನಿ ಏಕಾದಶಿಯಂದು ಸಾಮಾನ್ಯವಾಗಿ ಉಪವಾಸ ವ್ರತಾಚಾರಣೆಯನ್ನು ಮಾಡಲಾಗುತ್ತದೆ. ಈ ದಿನ ಉಪವಾಸದಿಂದ ದೇವರ ಆರಾಧನೆ ಮಾಡುವುದರಿಂದ ಒಳಿತಾಗಲಿದೆ ಎಂಬ ನಂಬಿಕೆ ಇದೆ.
ಇನ್ನು, ಈ ಯೋಗಿನಿ ಏಕಾದಶಿಯಲ್ಲಿ ಶಿವನನ್ನು ಆರಾಧಿಸುವ ಹಿನ್ನೆಲೆ ರುದ್ರಾಭಿಷೇಕ ಮಾಡುವುದರಿಂದ ಶಿವ ಮತ್ತು ವಿಷ್ಣುವಿನ ಇಬ್ಬರ ಕೃಪೆ ಲಭಿಸಲಿದೆ ಎಂಬ ನಂಬಿಕೆ ಇದೆ. ಈ ಏಕಾದಶಿ ದಿನಾಂಕದ ಕುರಿತು ಹಲವರಿಗೆ ಗೊಂದಲ ಇದೆ. ಆದರೆ, ಈ ಏಕಾದಶಿ ಮಂಗಳವಾರ ಜೂನ್ 13ರಂದು ಬೆಳಗ್ಗೆ 9.28ಕ್ಕೆ ಪ್ರಾರಂಭವಾಗಿ ಬುಧವಾರ ಅಂದರೆ, ಜೂನ್ 14ರಂದು ಬೆಳಗ್ಗೆ 8.48ಕ್ಕೆ ಕೊನೆಯಾಗುತ್ತದೆ.
ಇನ್ನು ಈ ಯೋಗಿನಿ ಏಕಾದಶಿಗೆ ರುದ್ರಾಭಿಷೇಕ ಸೇರಿದಂತೆ ವ್ರತದ ಪೂಜೆಗೆ ಮೂರು ಮುಹೂರ್ತಗಳನ್ನು ನೀಡಲಾಗಿದೆ. ಅದರ ಅನುಸಾರ ಬೆಳಗ್ಗೆ 5:23ರಿಂದ ಬೆಳಗ್ಗೆ 07:07ರವರೆಗೆ ಒಂದು ಮುಹೂರ್ತ ಇದೆ. ಉಳಿದೆರಡು ಮುಹೂರ್ತಗಳು ಬೆಳಗ್ಗೆ 07:07ರಿಂದ ಶುರುವಾಗಲಿದೆ. ಕಡೆಯ ಮುಹೂರ್ತ 10:37 ರಿಂದ ಮಧ್ಯಾಹ್ನ 12:21ರ ವರೆಗೆ ಪ್ರಾರಂಭವಾಗುತ್ತದೆ. ಈ ಮುಹೂರ್ತವು ಪೂಜೆಗೆ ಉತ್ತಮವಾಗಿದೆ ಎಂದು ನಂಬಲಾಗಿದೆ.
ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಏನು ಲಾಭ..
ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಇದು 80 ಸಾವಿರ ಬ್ರಾಹ್ಮಣರಿಗೆ ಅನ್ನದಾನ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಮದು ನಂಬಲಾಗಿದೆ
ಯೋಗಿನಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಕುಟುಂಬವೂ ಹುಟ್ಟಿದಾಗ ಅಥವಾ ಅನುಭವಿಸುತ್ತಿರುವ ಪಾಪಾಗಳಿಂದ ಮುಕ್ತಿಯನ್ನು ಪಡೆಯುತ್ತದೆ ಎಂಬ ನಂಬಿಕೆ ಇದೆ.
ಯೋಗಿನಿ ಏಕಾದಶಿಯಂದು ಉಪವಾಸ ಆಚರಿಸಿ ಹರಿಹರದ ಸ್ಮರಣೆ ಮಾಡುವುದರಿಂದ ವ್ಯಕ್ತಿ ಆಧ್ಯಾತ್ಮಿಕವಾಗಿ ಪ್ರಯೋಜನ ಪಡೆಯುವುದರ ಜೊತೆಗೆ ಜೀವನದಲ್ಲಿ ಸುಖ ಸಂತೋಷವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.
ಮತ್ತೊಂದು ನಂಬಿಕೆ ಅನುಸಾರ ಈ ದಿನದಂದು ಉಪವಾಸ ಆಚರಿಸುವುದರಿಂದ ವಿಷ್ಣುವು ನಿಧನ ನಂತರ ಮೋಕ್ಷ ನೀಡುತ್ತಾನೆ ಎಂಬ ನಂಬಿಕೆ ಇದೆ.
ಈ ವರ್ಷ ಈ ದಿನ ಹರಿಹರ ಯೋಗ ಬಂದಿದ್ದು, ಈ ದಿನ ಯೋಗಿನಿ ಏಕಾದಶಿಯಂದು ರುದ್ರಾಭಿಷೇಕ ಮಾಡುವುದರಿಂದ ಭಕ್ತರು ವಿಷ್ಣವಿನ ಜೊತೆಗೆ ಶಿವನ ಕೃಪೆಗೆ ಪಾತ್ರರಾಗುತ್ತಾರೆ.
ಉಪವಾಸ ಆಚರಣೆ ವಿಧಾನ: ಯೋಗಿನಿ ಏಕಾದಶಿಯಂದು ಆಹಾರ ಸೇವನೆ ಮಾಡುವುದು ನಿಷಿದ್ಧವಾಗಿದೆ. ಈ ದಿನ ಉಪವಾಸವನ್ನು ಕೇವಲ ಹಾಲು ಅಥವಾ ತಾಜಾ ಹಣ್ಣಿನ ರಸ ಸೇವನೆ ಮಾಡಬಹುದು. ಈ ಉಪವಾಸವನ್ನು ಗರ್ಭಿಣಿಯರು, ಅಶಕ್ತರು ಮಾಡಬಾರದು. ಏಕಾದಶಿ ದಿನ ಉಪವಾಸ ಮಾಡಿ ದೇವರ ಸ್ಮರಣೆ ಮಾಡುವುದರಿಂದ ಎಲ್ಲಾ ಶಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಪಾಲ್ಕಿ ಮೆರವಣಿಗೆಯ ವೇಳೆ ಭಕ್ತಾದಿಗಳ ಮತ್ತು ಪೊಲೀಸರ ನಡುವೆ ಮಾರಾಮಾರಿ - ವಿಡಿಯೋ