ನವದೆಹಲಿ : ಇಂದು ವಿಶ್ವ ರೇಬೀಸ್ ದಿನಾಚರಣೆ ಹಿನ್ನೆಲೆ '2030ರ ವೇಳೆಗೆ ಭಾರತದಿಂದ ರೇಬೀಸ್ ನಿರ್ಮೂಲನೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ'ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹಸಿರು ನಿಶಾನೆ ತೋರಿದ್ದಾರೆ. 2030ರ ವೇಳೆ ನಾವು ರೇಬೀಸ್ ಮುಕ್ತರಾಗಬೇಕಿದೆ ಎಂದಿದ್ದಾರೆ.
ಬಳಿಕ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವರು, ರೇಬೀಸ್ ಚುಚ್ಚು ಮದ್ದಿನ ದರ ಇಳಿಕೆ ಮಾಡುವಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕಾರ್ಯ ಪ್ರವೃತ್ತವಾಗಿದೆ. 2030ರ ವೇಳೆಗೆ ರೇಬೀಸ್ ರೋಗದ ವಿರುದ್ಧ ಜಯ ದಾಖಲಿಸಲಿದ್ದೇವೆ.
ಇದು ಆರೋಗ್ಯ ಸಚಿವಾಲಯ ಮತ್ತು ಪಶು ಸಂಗೋಪನಾ ಸಚಿವಾಲಯ ಹಾಗೂ ಆಯುಷ್ ಸಚಿವಾಲಯದ ಸಮಗ್ರ ಪ್ರಯತ್ನವಾಗಿರಲಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜನ ವಲಸೆ ಬಂದಾಗ ಈ ವೈರಸ್ ಸಹ ಅವರೊಂದಿಗೆ ಬರುತ್ತದೆ.
ನಾವೀಗಾಗಲೇ ಟಿಬಿ ಕಾಯಿಲೆಯ ಅಂತ್ಯಕ್ಕೆ ಬಂದು ನಿಂತಿದ್ದೇವೆ. ಇದರಂತೆಯೇ ರೇಬೀಸ್ ವಿರುದ್ಧವೂ ಹೋರಾಡಿ ಗೆಲುವು ಪಡೆಯುವುದಕ್ಕಾಗಿ ಅಭಿಯಾನ ಆರಂಭಿಸಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ವಿಶ್ವ ರೇಬೀಸ್ ದಿನ: ಇಂದಿನಿಂದ ಮೂರು ದಿನಗಳ ಕಾಲ ಉಚಿತ ಲಸಿಕೆ