ಇಂಫಾಲ್: ಮಣಿಪುರದ ಕೆಲವು ಭಾಗಗಳಲ್ಲಿ ಈ ಹಿಂದೆ ಘರ್ಷಣೆ ಉಂಟಾಗಿತ್ತು. ಸದ್ಯ ಮೋರೆ ಮತ್ತು ಕಾಂಗ್‌ಪೋಕ್ಪಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಹಾಗೂ ಈ ಭಾಗದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಜೊತೆಗೆ ಇಂಫಾಲ್ ಮತ್ತು ಚುರಾಚಂದ್‌ಪುರ ಪ್ರದೇಶ ಸಹಜ ಸ್ಥಿತಿಗೆ ತರಲು ಎಲ್ಲಾ ಪ್ರಯತ್ನಗಳು ನಡೆಸಲಾಗುತ್ತದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಮಣಿಪುರದಲ್ಲಿ ಮುನ್ನೆಚ್ಚರಿಕೆ ಕ್ರಮ: "ಮಣಿಪುರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪಡೆಗಳ ರಚನೆ ಮುಂದುವರೆದಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಾಗಾಲ್ಯಾಂಡ್‌ನಿಂದ ಮರು ನಿಯೋಜಿಸಲಾಗಿದೆ'' ಎಂದು ಭಾರತೀಯ ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೆ, ಗುವಾಹಟಿ ಮತ್ತು ತೇಜ್‌ಪುರದಿಂದ ಇಂದು ರಾತ್ರಿ ಪ್ರಾರಂಭವಾಗುವ ಹೆಚ್ಚುವರಿ ಭಾರತೀಯ ಸೇನಾ ಸಿಬಂದಿಯನ್ನು ಸೇರಿಸಲು ಭಾರತೀಯ ವಾಯುಪಡೆಯು ಕಾರ್ಯಾಚರಣೆಗಳನ್ನು ಕೈಗೊಳ್ಳಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಮಣಿಪುರದಲ್ಲಿ ಸೇನೆ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಮೇ 3 ರಂದು ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ಎಟಿಎಸ್‌ಯು) ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮವಹಿಸಲಾಯಿತು.
ಸಿಎಂ ಕಾನ್ರಾಡ್ ಸಂಗ್ಮಾ ಹೇಳಿದ್ದೇನು?: ಇದಕ್ಕೂ ಮುನ್ನ ಗುರುವಾರ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಮಣಿಪುರದಲ್ಲಿ ಹಿಂಸಾಚಾರದ ವರದಿಗಳ ನಂತರ ಮೇಘಾಲಯದ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಸಭೆಯನ್ನು ಕರೆದರು. ಹಿರಿಯ ಸರ್ಕಾರಿ ಅಧಿಕಾರಿಗಳು ಹಾಜರಿದ್ದ ಸಭೆಯಲ್ಲಿ, ಎಲ್ಲಾ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಸಿಎಂ ಸೂಚನೆ ನೀಡಿದರು. ತೀವ್ರ ಪರಿಸ್ಥಿತಿ ಎದುರಾದರೆ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮೇಘಾಲಯದ 200ಕ್ಕೂ ಹೆಚ್ಚು ನಿವಾಸಿಗಳು ಮಣಿಪುರದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ತಲುಪಲು ವಿದ್ಯಾರ್ಥಿಗಳು ಅಥವಾ ಕುಟುಂಬ ಸದಸ್ಯರಿಗೆ ಸರ್ಕಾರ ಸಹಾಯವಾಣಿ ತೆರೆಯಲಾಗುತ್ತದೆ ಎಂದು ಸಂಗ್ಮಾ ಹೇಳಿದರು.
ನಕಲಿ ವಿಡಿಯೋಗಳ ಬಗ್ಗೆ ಇರಲಿ ಎಚ್ಚರಿಕೆ: ನಕಲಿ ವಿಡಿಯೋಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೇನೆ ಜನರಿಗೆ ಹೇಳಿದೆ. "ಮಣಿಪುರದ ಭದ್ರತಾ ಪರಿಸ್ಥಿತಿಯ ಕುರಿತು ನಕಲಿ ವಿಡಿಯೋಗಳು ಸೇರಿದಂತೆ ಅಸ್ಸೋಂ ರೈಫಲ್ಸ್ ಪೋಸ್ಟ್‌ನ ಮೇಲಿನ ದಾಳಿಯ ವಿಡಿಯೋವನ್ನು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ದುರುದ್ದೇಶಪೂರಿತ ಅಂಶಗಳಿಂದ ಪ್ರಸಾರ ಮಾಡಲಾಗುತ್ತಿದೆ. ಅಧಿಕೃತ ಮತ್ತು ಪರಿಶೀಲಿಸಿದ ಮೂಲಗಳ ಮೂಲಕ ಮಾತ್ರ ವಿಷಯವನ್ನು ನಂಬಬೇಕು ಎಂದು ಇಂಡಿಯ್ ಆರ್ಮಿ ವಿನಂತಿ ಮಾಡುತ್ತದೆ ಎಂದು ಭಾರತೀಯ ಸೇನೆಯ ಟ್ವೀಟ್ ಮಾಡಿದೆ.
ಏನಿದು ಪ್ರಕರಣ?: ಇಂಫಾಲ್ ಕಣಿವೆಯಲ್ಲಿ ಪ್ರಾಬಲ್ಯ ಹೊಂದಿರುವ ಮೇಟೈಸ್ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಬೇಡಿಕೆಯನ್ನು ಪ್ರತಿಭಟಿಸಲು ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಅಖಿಲ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಮಣಿಪುರ (ಎಟಿಎಸ್‌ಯುಎಂ) ಕರೆ ನೀಡಿದ್ದ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ'ಯಲ್ಲಿ ಮೇ 3ರಂದು ಹಿಂಸಾಚಾರ ನಡೆದಿತ್ತು. ಮಣಿಪುರದ ಹಲವಾರು ಜಿಲ್ಲೆಗಳಲ್ಲಿ ಬುಡಕಟ್ಟು ಗುಂಪುಗಳು ಪ್ರಭಟನಾ ಮೆರವಣಿಗೆಗಳನ್ನು ನಡೆಸಿದ ನಂತರ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರವು ಐದು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ. ದೊಡ್ಡ ಗುಂಪು ಸೇರುವುದನ್ನು ನಿಷೇಧಿಸುವುದರ ಜೊತೆಗೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಇದನ್ನೂ ಓದಿ: ಗಂಡಕ್ ನದಿಯಲ್ಲಿ ಈಜಲು ಹೋದ ಐವರು ಹುಡುಗರು ನೀರು ಪಾಲು..!