ನವದೆಹಲಿ/ಇಂಫಾಲ್: ಈಶಾನ್ಯ ಭಾಗದ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬುಡಕಟ್ಟು ಜನಾಂಗದ ಆಂದೋಲನದ ಸಂದರ್ಭದಲ್ಲಿ ಈ ಹಿಂಸಾಚಾರ ಉಂಟಾಗಿದ್ದು, ಹಲವೆಡೆ ಬೆಂಕಿ ಹಚ್ಚಲಾಗಿದೆ. ಈಗಾಗಲೇ ಭದ್ರತೆ ಮತ್ತು ಪರಿಹಾರ ಕಾರ್ಯಕ್ಕಾಗಿ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ. ಜೊತೆಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ ಪರಿಸ್ಥಿತಿ ಅಲೋಕಿಸಿದ್ದಾರೆ.
-
My state Manipur is burning, kindly help @narendramodi @PMOIndia @AmitShah @rajnathsingh @republic @ndtv @IndiaToday pic.twitter.com/VMdmYMoKqP
— M C Mary Kom OLY (@MangteC) May 3, 2023 " class="align-text-top noRightClick twitterSection" data="
">My state Manipur is burning, kindly help @narendramodi @PMOIndia @AmitShah @rajnathsingh @republic @ndtv @IndiaToday pic.twitter.com/VMdmYMoKqP
— M C Mary Kom OLY (@MangteC) May 3, 2023My state Manipur is burning, kindly help @narendramodi @PMOIndia @AmitShah @rajnathsingh @republic @ndtv @IndiaToday pic.twitter.com/VMdmYMoKqP
— M C Mary Kom OLY (@MangteC) May 3, 2023
ಇಂಫಾಲ್ ಕಣಿವೆಯಲ್ಲಿ ಪ್ರಾಬಲ್ಯ ಹೊಂದಿರುವ ಬುಡಕಟ್ಟು ಜನಾಂಗವಲ್ಲದ ಮೈಟೀಸ್ ಸಮುದಾಯದ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ವಿವಾದಕ್ಕೆ ಕಾರಣವಾಗಿದೆ. ಈ ಬೇಡಿಕೆಯನ್ನು ವಿರೋಧಿಸಿ ಚುರಾಚಂದ್‌ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಅಖಿಲ ಬುಡಕಟ್ಟು ವಿದ್ಯಾರ್ಥಿ ಸಂಘ (ಎಟಿಎಸ್ಯುಎಂ)ವು ಬುಧವಾರ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎರಡು ಕಡೆಯ ಜನಾಂಗಗಳ ನಡುವೆ ಘರ್ಷಣೆಗಳು ಭುಗಿಲೆದ್ದಿವೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಲವಾರು ಸುತ್ತಿನ ಅಶ್ರುವಾಯು ಪ್ರಯೋಗಿಸಿದ್ದಾರೆ.
-
Manipur is burning. BJP has created fissures among communities and destroyed the peace of a beautiful state.
— Mallikarjun Kharge (@kharge) May 4, 2023 " class="align-text-top noRightClick twitterSection" data="
BJP's politics of hate, division and its greed for power is responsible for this mess.
We appeal to people from all sides to exercise restraint and give peace a chance.
">Manipur is burning. BJP has created fissures among communities and destroyed the peace of a beautiful state.
— Mallikarjun Kharge (@kharge) May 4, 2023
BJP's politics of hate, division and its greed for power is responsible for this mess.
We appeal to people from all sides to exercise restraint and give peace a chance.Manipur is burning. BJP has created fissures among communities and destroyed the peace of a beautiful state.
— Mallikarjun Kharge (@kharge) May 4, 2023
BJP's politics of hate, division and its greed for power is responsible for this mess.
We appeal to people from all sides to exercise restraint and give peace a chance.
ಆದರೆ, ಇದರ ನಂತರದಲ್ಲಿ ಹಿಂಸಾಚಾರವು ಮಣಿಪುರದ ಇತರ ಭಾಗಗಳಿಗೆ ಹರಡಿದ್ದು, ಕೆಲವು ಭಾಗಗಳು ಬೆಂಕಿಯಿಂದ ಇಡೀ ರಾತ್ರಿ ಹೊತ್ತಿ ಉರಿದಿವೆ. ಇದೇ ವೇಳೆ, ಹಿಂಸಾಚಾರ ಪೀಡಿತ ಸ್ಥಳಗಳಿಂದ ಎಲ್ಲ ಸಮುದಾಯಗಳ 7,500ಕ್ಕೂ ಹೆಚ್ಚು ಜನರನ್ನು ರಾತ್ರಿಯಿಡೀ ಸ್ಥಳಾಂತರ ಮಾಡಲಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಮಣಿಪುರ ಪೊಲೀಸ್ ಪಡೆಗಳೊಂದಿಗೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಪಡೆಗಳು ಈಗಾಗಲೇ ಸ್ಥಳಕ್ಕೆ ದೌಡಾಯಿಸಿವೆ. ಸಿಆರ್‌ಪಿಎಫ್‌ನ ಸುಮಾರು 15 ತುಕಡಿಗಳು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ನಿಯೋಜನೆಗಾಗಿ ಕ್ಷಿಪ್ರ ಕಾರ್ಯಪಡೆ (ಆರ್ಎಎಫ್)ಯ ಐದು ತುಕಡಿಗಳನ್ನು ಸಹ ಕಳುಹಿಸಲಾಗಿದೆ. ಇತರ 15 ಆರ್ಎಎಫ್ ತುಕಡಿಗಳಿಗೆ ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ.
-
#WATCH | Indian Army & Assam Rifles undertook major rescue operations to evacuate more than 7,500 civilians of all communities relentlessly throughout the night to restore law & order in Manipur.
— ANI (@ANI) May 4, 2023 " class="align-text-top noRightClick twitterSection" data="
(Source: Indian Army) pic.twitter.com/SXtR7rjsE1
">#WATCH | Indian Army & Assam Rifles undertook major rescue operations to evacuate more than 7,500 civilians of all communities relentlessly throughout the night to restore law & order in Manipur.
— ANI (@ANI) May 4, 2023
(Source: Indian Army) pic.twitter.com/SXtR7rjsE1#WATCH | Indian Army & Assam Rifles undertook major rescue operations to evacuate more than 7,500 civilians of all communities relentlessly throughout the night to restore law & order in Manipur.
— ANI (@ANI) May 4, 2023
(Source: Indian Army) pic.twitter.com/SXtR7rjsE1
ಸಿಎಂ ಬಿರೇನ್ ಜೊತೆ ಶಾ ಮಾತುಕತೆ: ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸದ್ಯದ ಪರಿಸ್ಥಿತಿ ಮತ್ತು ಶಾಂತಿ ಮರು ಸ್ಥಾಪಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಮಿತ್ ಶಾ ಅವರಿಗೆ ಸಿಎಂ ವಿವರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಜೆಪಿಯ ದ್ವೇಷ ರಾಜಕಾರಣ ಕಾರಣ - ಖರ್ಗೆ: ಈ ಹಿಂಸಾಚಾರದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದು, ''ಮಣಿಪುರದಲ್ಲಿ ಎರಡು ಸಮುದಾಯಗಳ ನಡುವಿನ ಹಿಂಸಾತ್ಮಕ ಘರ್ಷಣೆಗೆ ಬಿಜೆಪಿಯ ದ್ವೇಷದ ರಾಜಕಾರಣ ಕಾರಣ. ಜನರು ಸಂಯಮದಿಂದ ವರ್ತಿಸಿ ರಾಜ್ಯದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು'' ಎಂದು ಹೇಳಿದ್ದಾರೆ.
ಮಣಿಪುರ ಉರಿಯುತ್ತಿದೆ - ಮೇರಿ ಕೋಮ್ ಟ್ವೀಟ್: ಮತ್ತೊಂದೆಡೆ, ತಮ್ಮ ತವರು ರಾಜ್ಯ ಮಣಿಪುರದ ಪರಿಸ್ಥಿತಿ ಬಗ್ಗೆ ಖ್ಯಾತ ಬಾಕ್ಸರ್, ಮಾಜಿ ರಾಜ್ಯಸಭಾ ಸಂಸದೆ ಎಂ.ಸಿ.ಮೇರಿ ಕೋಮ್ ಟ್ವೀಟ್ ಮಾಡಿ, ''ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ'' ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.
ಅಲ್ಲದೇ, ಈ ಬಗ್ಗೆ ಮಾತನಾಡಿರುವ ಅವರು, ''ಮಣಿಪುರದ ಪರಿಸ್ಥಿತಿ ಬಗ್ಗೆ ಬೇಸರ ಇದೆ. ನಿನ್ನೆ ರಾತ್ರಿಯಿಂದ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಮತ್ತು ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ಹಿಂಸಾಚಾರದಲ್ಲಿ ಕೆಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಈ ಪರಿಸ್ಥಿತಿಯು ಬೇಗನೆ ಸಹಜ ಸ್ಥಿತಿಗೆ ಬರಬೇಕು'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೊಲೆರೊ-ಟ್ರಕ್ ಭೀಕರ ರಸ್ತೆ ಅಪಘಾತ: ಮದುವೆಗೆ ತೆರಳುತ್ತಿದ್ದ ಒಂದೇ ಕುಟುಂಬದ 11 ಜನ ಸಾವು!