ನವದೆಹಲಿ: ಮಾವು ಮತ್ತು ದಾಳಿಂಬೆ ರಫ್ತು 2022 ರ ಜನವರಿ-ಫೆಬ್ರವರಿಯಿಂದ ಪ್ರಾರಂಭವಾಗಲಿದ್ದು ಭಾರತದ ಹಣ್ಣುಗಳು ಅಮೆರಿಕದ ಕೃಷಿ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.
ಕೃಷಿ ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆ (DAC&FW) ಹಾಗೂ ಯುಎಸ್ ಇಲಾಖೆಗಳ ನಡುವೆ ನವೆಂಬರ್ 23, 2021 ರಂದು ನಡೆದ ಒಪ್ಪಂದದ ಪ್ರಕಾರ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಮೂಲಕ ಭಾರತದಿಂದ ದಾಳಿಂಬೆ ಮತ್ತು ಮಾವಿನ ಹಣ್ಣನ್ನು ಅಮೆರಿಕಕ್ಕೆ ರಪ್ತು ಮಾಡುವುದು ಹಾಗೂ ಅಮೆರಿಕದ ಚೆರ್ರಿ ಮತ್ತು ಅಲ್ಫಾಲ್ಫಾ ಹಣ್ಣುಗಳನ್ನು ಭಾರತಕ್ಕೆ ಅಮದು ಮಾಡಕೊಳ್ಳಲಾಗುತ್ತದೆ.