ETV Bharat / bharat

ಫಿಫಾ ವಿಶ್ವಕಪ್ ಹಬ್ಬ: ಕತಾರ್‌ನಲ್ಲಿ ಪ್ರತಿಧ್ವನಿಸಲಿದೆ ಭಾರತೀಯ ಪ್ರತಿಭೆಯ ಮಧುರ ಧ್ವನಿ - ಫಿಫಾ ವಿಶ್ವಕಪ್

ಫುಟ್​​ಬಾಲ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕತಾರ್ ದೇಶ ಫಿಫಾ ವಿಶ್ವಕಪ್ ಆಯೋಜಿಸುತ್ತಿದೆ. ಕ್ರೀಡಾಕೂಟದ ಉದ್ಘಾಟನಾ ಪಂದ್ಯವು ಇಂದು ರಾತ್ರಿ (ಭಾರತೀಯ ಕಾಲಮಾನ) ರಾತ್ರಿ 9:30ಕ್ಕೆ ಪ್ರಾರಂಭವಾಗುತ್ತದೆ.

Shefali Chaurasia
ಗಾಯಕಿ ಶೆಫಾಲಿ ಚೌರಾಸಿಯಾ
author img

By

Published : Nov 20, 2022, 7:45 AM IST

ಮಂಡ್ಲಾ(ಮಧ್ಯ ಪ್ರದೇಶ): ಏನನ್ನಾದರೂ ಸಾಧಿಸುವ ಉತ್ಸಾಹವಿದ್ದರೆ ಅದು ಖಂಡಿತವಾಗಿಯೂ ಒಬ್ಬ ವ್ಯಕ್ತಿಯನ್ನು ಶ್ರೇಷ್ಠಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತದೆ. ಈ ವಿಷಯವನ್ನು ಗಾಯಕಿ ಶೆಫಾಲಿ ಚೌರಾಸಿಯಾ ನಿಜವಾಗಿಸಿದ್ದಾರೆ. ಮಧ್ಯ ಪ್ರದೇಶದ ಮಂಡ್ಲಾ ಎಂಬಲ್ಲಿನ ನೈನ್‌ಪುರದಂತಹ ಪುಟ್ಟ ಪಟ್ಟಣದಿಂದ ಬಂದಿರುವ ಈಕೆ ಕತಾರ್‌ನಲ್ಲಿ ನಡೆಯಲಿರುವ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಹಾಡುಗಳ ಮೂಲಕ ಮೋಡಿ ಮಾಡಲಿದ್ದಾರೆ.

ಗಾಯಕಿ ಶೆಫಾಲಿ ಚೌರಾಸಿಯಾ

13 ಪ್ರದರ್ಶನಗಳು: ಶೆಫಾಲಿ ಅವರು ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಕಾರ್ಯಕ್ರಮ ನೀಡಲು ಆಯ್ಕೆಯಾಗಿದ್ದಾರೆ. ಗ್ರಾವಿಟಾಸ್ ಮ್ಯಾನೇಜ್‌ಮೆಂಟ್ ಎಫ್​​ಝಡ್​​ಇ (Free Zone Establishment) ಇವರನ್ನು ಯುಎಇಗೆ ಆಹ್ವಾನಿಸಿದೆ. ಅಲ್ಲಿ ಅವರು ಒಟ್ಟು 13 ಪ್ರದರ್ಶನಗಳನ್ನು ನೀಡುವರು.

ಈ ಪ್ರತಿಭೆ ಪಾನ್ ಉದ್ಯಮಿ ಸಂತೋಷ್ ಚೌರಾಸಿಯಾ ಎಂಬವರ ಪುತ್ರಿ. ಬಾಲ್ಯದಿಂದಲೂ ಉತ್ನತ ಸ್ಥಾನಕ್ಕೇರುವ ಮಹದಾಸೆ ಹೊಂದಿದ್ದು ಕಠಿಣ ಪರಿಶ್ರಮ ಹಾಗೂ ಸಂಗೀತಾಭ್ಯಾಸ ಮಾಡುವ ಮೂಲಕ ಸಾಕಾರಗೊಳಿಸಿದ್ಧಾರೆ. ವಿಶ್ವಕಪ್‌ನಲ್ಲಿ ಪಂದ್ಯದ ವೇಳೆ, ಸಾರ್ವಜನಿಕ ಮನರಂಜನೆಗಾಗಿ ಹಾಡಲಿದ್ದು ಪ್ರದರ್ಶನವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಗುತ್ತದೆ.

ಭಾರತದ 70 ಸದಸ್ಯರ ತಂಡ ಕತಾರ್​ಗೆ: ಜಾಗತಿಕ ಟೂರ್ನಿಯಲ್ಲಿ ಭಾರತದಿಂದ 60 ರಿಂದ 70 ಸದಸ್ಯರ ತಂಡ ಕತಾರ್ ತಲುಪಿದೆ.

ಇದನ್ನೂ ಓದಿ: FIFA World Cup 2022: ತಂಡಗಳ ಗುಂಪುಗಳನ್ನು ಬಿಡುಗಡೆ ಮಾಡಿದ ಫಿಫಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.