ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಬಯೋಲಾಜಿಕಲ್ ಇ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಮಹಿಮಾ ದಾಟ್ಲಾ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇಂದು ನಾನು ಬಯೋಲಾಜಿಕಲ್ ಇ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಮಹಿಮಾ ದಾಡ್ಲಾ ಅವರನ್ನು ಭೇಟಿ ಮಾಡಿದೆ. ಬಯೋಲಾಜಿಕಲ್ ಇ ಹೊಸ ಕಾರ್ಬೆವಾಕ್ಸ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ಈ ಕುರಿತಂತೆ ಸಮಗ್ರವಾಗಿ ಮಾಹಿತಿ ನೀಡಿದರು. ಲಸಿಕೆ ಉತ್ಪಾದನೆಗಾಗಿ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
-
Met Ms Mahima Datla, MD of @Biological_E, who briefed me on the progress of their upcoming #COVID19 vaccine, Corbevax.
— Mansukh Mandaviya (@mansukhmandviya) August 6, 2021 " class="align-text-top noRightClick twitterSection" data="
I assured all the Government support for the vaccine. pic.twitter.com/QzRohNalhe
">Met Ms Mahima Datla, MD of @Biological_E, who briefed me on the progress of their upcoming #COVID19 vaccine, Corbevax.
— Mansukh Mandaviya (@mansukhmandviya) August 6, 2021
I assured all the Government support for the vaccine. pic.twitter.com/QzRohNalheMet Ms Mahima Datla, MD of @Biological_E, who briefed me on the progress of their upcoming #COVID19 vaccine, Corbevax.
— Mansukh Mandaviya (@mansukhmandviya) August 6, 2021
I assured all the Government support for the vaccine. pic.twitter.com/QzRohNalhe
ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಜಾನ್ಸನ್ ಮತ್ತು ಜಾನ್ಸನ್ ಕೋವಿಡ್-19 ಲಸಿಕೆ ಉತ್ಪಾದಿಸುತ್ತಿದೆ. ದೇಶದಲ್ಲಿ ಒಟ್ಟಾರೆ ಪೂರೈಕೆಯನ್ನು ಹೆಚ್ಚಿಸಲು ಕಂಪನಿ ಒಂದು ತಿಂಗಳಲ್ಲಿ 75 ರಿಂದ 80 ದಶಲಕ್ಷ ಪ್ರಮಾಣದ ಲಸಿಕೆ ಉತ್ಪಾದಿಸುವ ಯೋಜನೆ ಹೊಂದಿದೆ. ಲಸಿಕೆಯನ್ನು ಹೂಸ್ಟನ್‌ನ ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಮತ್ತು ಡೈನವಾಕ್ಸ್ ಟೆಕ್ನಾಲಜೀಸ್ ಕಾರ್ಪ್‌ನೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ಓದಿ: Monsoon session : ಚರ್ಚೆ ಇಲ್ಲದೆ ಲೋಕಸಭೆಯಲ್ಲಿ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಅಂಗೀಕಾರ
ಭಾರತದಲ್ಲಿ ಪ್ರತಿದಿನ 40 ಸಾವಿರಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 44,643 ಹೊಸ ಪ್ರಕರಣ ವರದಿಯಾಗಿವೆ. ಒಟ್ಟು 463 ಸೋಂಕಿತರು ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 57,97,808 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ತಿಳಿಸಿದೆ.