ಉಜ್ಜೈನಿ(ಮಧ್ಯಪ್ರದೇಶ): ತಂದೆಯೋರ್ವ ಮೂವರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಜ್ಜೈನಿಯಲ್ಲಿ ನಡೆದಿದೆ. ಎಲ್ಲರ ಮೃತದೇಹಗಳು ರೈಲ್ವೆ ಹಳಿ ಮೇಲೆ ಸಿಕ್ಕಿವೆ.
ಉಜ್ಜೈನಿಯಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ನಾಯ್ ಖೇಡಿ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿ ಮೇಲೆ ಮೃತದೇಹಗಳು ದೊರೆತಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಇದು ಆತ್ಮಹತ್ಯೆ ಪ್ರಕರಣವೆಂದು ಪೊಲೀಸರು ತಿಳಿಸಿದರು. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಮದ್ಯ ಸೇವಿಸಿ ಶಾಲೆಗೆ ಬಂದು ಪ್ಯಾಂಟ್ ಕಳಚಿ ನೆಲದ ಮೇಲೆ ಮಲಗಿದ ಶಿಕ್ಷಕ
ಮೃತರಲ್ಲಿ ಮೂವರು ಅಪ್ರಾಪ್ತ ಬಾಲಕಿಯರಿದ್ದಾರೆ. ತಂದೆ ರವಿ 35 ವರ್ಷದವನು ಎಂದು ಹೇಳಲಾಗ್ತಿದೆ. ಅನಾಮಿಕಾ (12), ಆರಾಧ್ಯ (7) ಮತ್ತು ಅನುಷ್ಕಾ (4) ಎಂದು ಮೃತರು. ಇವರೆಲ್ಲರೂ ಭೈರವಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗೋಯಾಲಾ ಬುಜುರ್ಗ್ ಗ್ರಾಮದ ನಿವಾಸಿಗಳಾಗಿದ್ದಾರೆ. ರೈಲ್ವೆ ಹಳಿ ಪಕ್ಕದಲ್ಲಿ ಬೈಕ್ ನಿಲ್ಲಿಸಲಾಗಿದೆ. ಟ್ರ್ಯಾಕ್ ಬಳಿ ಚಪ್ಪಲಿ, ಮಕ್ಕಳಿಗೆ ಕೊಡಿಸಲಾಗಿದ್ದ ಚಿಪ್ಸ್ ಪಾಕೆಟ್ ಪತ್ತೆಯಾಗಿವೆ.
ಗೂಡ್ಸ್ ರೈಲು ಇವರ ಮೇಲೆ ಹರಿದು ಹೋಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು. ಅಪಘಾತ ತಪ್ಪಿಸಲು ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ. ಆದರೆ, ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.