ETV Bharat / bharat

ಅಪನಂಬಿಕೆಯ ಕಾಲದಲ್ಲಿ ಸುಪ್ರೀಂಕೋರ್ಟ್​ನ​ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ರೈತನ ಮಗ ರಮಣ.. - N V Ramana Biography

ಐದು ದಶಕಗಳ ಹಿಂದೆ ಆಂಧ್ರಪ್ರದೇಶದ ಸಿಜೆಐ ಹುದ್ದೆ ಅಲಂಕರಿಸಿದ ನ್ಯಾಯಮೂರ್ತಿ ಕೋಕಾ ಸುಬ್ಬಾ ರಾವ್ ಅವರ ನಂತರ ಶನಿವಾರ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೇಶದ ಅತ್ಯುನ್ನತ ಕಾನೂನು ಪೀಠ ಏರಿದ ಎರಡನೇ ವ್ಯಕ್ತಿಯಾಗಿದ್ದಾರೆ ಎನ್​​ ವಿ ರಮಣ. ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ರಮಣ ಅವರು 2022ರ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ.

ಎನ್​ವಿ ರಮಣ
ಎನ್​ವಿ ರಮಣ
author img

By

Published : Apr 24, 2021, 8:53 PM IST

'ಜನರು ನಮ್ಮನ್ನು ತಲುಪಲು ಸಾಧ್ಯವಾಗದೆ ಇದ್ದಾಗ, ನಾವೇ ಅವರ ಬಳಿ ತೆರಳಬೇಕು' ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನೂತನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಈ ಸುವರ್ಣ ಪದಗಳು ಹೇಳಿ ನಿಖರವಾಗಿ ಒಂದು ತಿಂಗಳಾಯಿತು. ಇಂದು 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ದೆಹಲಿಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಜನರಿಗೆ ಉಚಿತ ಕಾನೂನು ನೆರವು ನೀಡುವಂತೆ ಸಲಹೆ ನೀಡಿದ್ದು, ಅವರಲ್ಲಿನ ಜನಪರ ಕಾಳಜಿಗೆ ಕೈಗನ್ನಡಿಯಾಗಿದೆ.

ಐದು ದಶಕಗಳ ಹಿಂದೆ ಆಂಧ್ರಪ್ರದೇಶದ ಸಿಜೆಐ ಹುದ್ದೆ ಅಲಂಕರಿಸಿದ ನ್ಯಾಯಮೂರ್ತಿ ಕೋಕಾ ಸುಬ್ಬಾ ರಾವ್ ಅವರ ನಂತರ ಶನಿವಾರ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ, ದೇಶದ ಅತ್ಯುನ್ನತ ಕಾನೂನು ಪೀಠ ಏರಿದ ಎರಡನೇ ವ್ಯಕ್ತಿಯಾಗಿದ್ದಾರೆ ಎನ್​​ ವಿ ರಮಣ. ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ರಮಣ ಅವರು 2022ರ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ.

ಎನ್.ವಿ.ರಮಣ ಅವರು ಕೃಷಿ ಕುಟುಂಬದಲ್ಲಿ 1957ರ ಆಗಸ್ಟ್ 27ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನವರಂ ಗ್ರಾಮದಲ್ಲಿ ಜನಿಸಿದರು. ಪೂರ್ಣ ಪ್ರಮಾಣದ ವಕೀಲರಾಗುವ ಮೊದಲು ರಮಣ ಪ್ರಮುಖ ತೆಲುಗಿನ 'ಈನಾಡು' ದಿನ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದರು.

1983ರಲ್ಲಿ ವಕೀಲರಾಗಿ ವೃತ್ತಿಗೆ ಸೇರಿಕೊಂಡರು. ಆಂಧ್ರಪ್ರದೇಶದ ಆಡಳಿತ ನ್ಯಾಯಮಂಡಳಿಗಳು ಮತ್ತು ಭಾರತದ ಸುಪ್ರೀಂಕೋರ್ಟ್‌ನಲ್ಲಿ ನಾಗರಿಕ, ಅಪರಾಧ, ಸಾಂವಿಧಾನಿಕ, ಕಾರ್ಮಿಕ, ಸೇವೆ ಮತ್ತು ಚುನಾವಣೆಗೆ ಸಂಬಂಧಿಸಿದ ಹಲವು ವಿಷಯಗಳ ಅಭ್ಯಾಸ ಮಾಡಿದರು.

ಎನ್​ವಿ ರಮಣ ಪ್ರಮಾಣ ವಚನ
ಎನ್​ವಿ ರಮಣ ಪ್ರಮಾಣ ವಚನ

ನ್ಯಾಯಮೂರ್ತಿ ರಮಣ ಅವರನ್ನು 2000ರ ಜೂನ್​ನಲ್ಲಿ ಆಂಧ್ರಪ್ರದೇಶದ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. 2013ರ ಮಾರ್ಚ್ ಮತ್ತು ಮೇ ನಡುವೆ ಅಲ್ಪಾವಧಿಗೆ ಆಂಧ್ರಪ್ರದೇಶದ ಹೈಕೋರ್ಟ್‌ನ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು.

2014ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಅವರನ್ನು ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಕಣಿವೆಯಲ್ಲಿ ಅಂತರ್ಜಾಲ ಪುನಃಸ್ಥಾಪನೆ, ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಮರು ರಚನೆ ಮತ್ತು ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಸುಪ್ರೀಂಕೋರ್ಟ್‌ನಲ್ಲಿ ಹಲವು ಉನ್ನತ ಪ್ರಕರಣಗಳನ್ನು ನಿರ್ವಹಿಸಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬಹುಮತ ಸಾಬೀತುಪಡಿಸುವಂತೆ ಕೇಳಿಕೊಂಡ ನ್ಯಾಯಪೀಠದ ನೇತೃತ್ವ ವಹಿಸಿದ್ದವರ ಪೈಕಿ ರಮಣ ಕೂಡ ಒಬ್ಬರು.

2019ರಲ್ಲಿ ತಮ್ಮ ಸಂವಿಧಾನ ದಿನದ ಭಾಷಣದ ವೇಳೆ ನ್ಯಾಯಮೂರ್ತಿ ರಮಣ ಅವರು, 'ನಾವು ಹೊಸ ಸಾಧನಗಳನ್ನು ರೂಪಿಸಬೇಕು. ಹೊಸ ವಿಧಾನಗಳನ್ನು ರಚಿಸಬೇಕು. ಹೊಸ ತಂತ್ರಗಳನ್ನು ಆವಿಷ್ಕರಿಸಬೇಕು.

ಹೊಸ ನ್ಯಾಯಕಶಾಸ್ತ್ರವನ್ನು ವಿಕಸನಗೊಳಿಸಿ ಕೇವಲ ನಿರ್ಧಾರಗಳನ್ನು ನೀಡಲು ಮತ್ತು ಸಾಂವಿಧಾನಿಕ ಉದ್ದೇಶಗಳನ್ನು ಸಾಧಿಸಲು ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು' ಎಂದಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಮಾತುಗಳನ್ನು ಮುಂದಿನ 16 ತಿಂಗಳ ಅಧಿಕಾರಾವಧಿಯಲ್ಲಿ ರಮಣ ಕಾರ್ಯರೂಪಕ್ಕೆ ತರುತ್ತಾರೆ ಎಂಬ ಬಲವಾದ ನಂಬಿಕೆ ಗರಿಗೆದರಿದೆ.

ಎನ್​ವಿ ರಮಣ
ಎನ್​ವಿ ರಮಣ

ಸುಮಾರು ಐದು ವರ್ಷಗಳ ಹಿಂದೆ ನ್ಯಾಯಮೂರ್ತಿ ಟಿ.ಎಸ್. ಠಾಕೂರ್​ ಅವರು ನ್ಯಾಯಾಂಗವು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಬಹಿರಂಗವಾಗಿ ವಿಷಾದಿಸಿದರು. ಸುಧಾರಿಸುವ ಬದಲು, ಸಮಯ ಕಳೆದಂತೆ ಪರಿಸ್ಥಿತಿ ಹದಗೆಡುತ್ತಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಡ್ಬೆ ಅವರ ಅಧಿಕಾರಾವಧಿಯಲ್ಲಿ ಅಪೆಕ್ಸ್ ನ್ಯಾಯಾಲಯದಲ್ಲಿ ಐದು ಖಾಲಿ ಹುದ್ದೆಗಳು ಭರ್ತಿ ಆಗಿಲ್ಲ.

ಈ ವರ್ಷವೂ ಇನ್ನೂ ಐದು ಖಾಲಿ ಹುದ್ದೆಗಳು ಇದೇ ಪಟ್ಟಿಗೆ ಸೇರ್ಪಡೆಯಾಗಲಿವೆ. ನ್ಯಾಯಮೂರ್ತಿ ರಮಣ ಅವರು ಕೊಲ್ಜಿಯಂನಲ್ಲಿ ಸರ್ವಾನುಮತ ಸಾಧಿಸುವ ಕಠಿಣ ಕಾರ್ಯವಿದೆ. ಬಾಕಿ ಇರುವ ಹೊಣೆ ಕಡಿಮೆ ಮಾಡುವುದಲ್ಲದೆ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಹೊಣೆಗಾರಿಕೆ ಇದೆ.

ದೇಶಾದ್ಯಂತ ಬಾಕಿ ಇರುವ ಪ್ರಕರಣಗಳು 4.4 ಕೋಟಿ ಗಡಿ ತಲುಪಿದೆ. ಭಾರತದ ಸಂವಿಧಾನದ 224 ಎ ವಿಧಿ ಅನ್ವಯ ತಾತ್ಕಾಲಿಕ ನ್ಯಾಯಾಧೀಶರ ನೇಮಕಕ್ಕೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು ಹಸಿರು ನಿಶಾನೆ ತೋರಿದೆ. ಆ ನೇಮಕಾತಿಗಳ ಜವಾಬ್ದಾರಿ ನ್ಯಾಯಮೂರ್ತಿ ರಮಣ ಅವರ ಹೆಗಲ ಮೇಲೆ ಬರುತ್ತದೆ.

ಮನೆಯ ಹಿರಿಯ ಯಜಮಾನನಾಗಿ ನ್ಯಾಯಮೂರ್ತಿ ರಮಣ ಅವರು ನ್ಯಾಯದ ರಥವನ್ನು ಮುನ್ನಡೆಸಬೇಕಿದೆ. ಅದೇ ಸಮಯದಲ್ಲಿ ಮಾಸ್ಟರ್ ಆಫ್ ರೋಸ್ಟರ್ ಆಗಿ ವಿಜಯಶಾಲಿಯಾಗಿಬೇಕಿದೆ.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಭಾರತದ ಮುಖ್ಯ ನ್ಯಾಯಮೂರ್ತಿ ದೀರ್ಘಾವಧಿಯ ಸುಧಾರಣೆಗಳನ್ನು ತೆಗೆದುಕೊಳ್ಳಲು ಕನಿಷ್ಠ 3 ವರ್ಷಗಳ ಅಧಿಕಾರಾವಧಿ ಹೊಂದಿರಬೇಕು ಎಂಬ ವಾದ ವ್ಯಕ್ತಪಡಿಸಿದ್ದು ಸಮಯೋಚಿತ.

ಭಾರತದ ಮುಖ್ಯ ನ್ಯಾಯಮೂರ್ತಿ ಶಾಸಕಾಂಗ ಮತ್ತು ಕಾರ್ಯಾಂಗದ ಬೆಂಬಲದೊಂದಿಗೆ ಕ್ರಿಯಾತ್ಮಕ ಶೈಲಿಯಲ್ಲಿ ಕಾರ್ಯನಿರ್ವಹಿಸಬೇಕು. ಭಾರತದ ಸಂವಿಧಾನವು ಊಹಿಸಿದಂತೆ ಎಲ್ಲಾ ದೇಶವಾಸಿಗಳಿಗೆ ನ್ಯಾಯ ದೊರಕಿಸಿಕೊಡುವ ಉನ್ನತ ದೇಗುಲ.

ಪ್ರಧಾನಿ ಮತ್ತು ಮುಖ್ಯ ನ್ಯಾಯಮೂರ್ತಿಗಳು ಆಗಾಗ ಭೇಟಿಯಾದರೆ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಭಾರತದ ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಮಾತುಗಳನ್ನು ಈಗ ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ.

ನ್ಯಾಯಾಂಗವು ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿಯ ಕೊರತೆ ಎದುರಿಸುತ್ತಿದೆ. ಅದರ ಮೇಲಿನ ಎಲ್ಲಾ ಖರ್ಚುಗಳನ್ನು ಯೋಜಿತೇತರ ಖರ್ಚು ಎಂದು ಪರಿಗಣಿಸಲಾಗುತ್ತಿದೆ.

ಅದರ ಜೊತೆಗೆ ನ್ಯಾಯಮೂರ್ತಿ ರಮಣ ಅವರೇ ಇತ್ತೀಚೆಗೆ ಕಾನೂನು ಶಿಕ್ಷಣದ ಕಳಪೆ ಮಾನದಂಡಗಳು ಕಳವಳಕ್ಕೆ ಮತ್ತೊಂದು ಮುಖ್ಯ ಕಾರಣವೆಂದಿದ್ದಾರೆ.

ರಾಜ್ಯ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ ನ್ಯಾಯಮೂರ್ತಿ ರಮಣ ಅವರು ನ್ಯಾಯಾಂಗ ಅಧಿಕಾರಿಗಳ ತರಬೇತಿಯಲ್ಲಿ ಮಾನದಂಡಗಳ ಸುಧಾರಣೆಗೆ ಶ್ರಮಿಸಿದ್ದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ ಇದ್ದಾಗ, ಲೋಕ ಅದಾಲತ್‌ಗಳನ್ನು ಹೆಚ್ಚು ವ್ಯಾಪಕವಾಗಿ ನಡೆಸುವ ಮೂಲಕ ಮೆಚ್ಚುಗೆ ಗಳಿಸಿದರು.

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅವರ ಆರೋಹಣವನ್ನು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ​​'ರೇ ಆಫ್ ಹೋಪ್' (ಭರವಸೆಯ ಆಶಾಕಿರಣ) ಎಂದು ಸರಿಯಾಗಿ ನುಡಿದಿದೆ.

ಕೋವಿಡ್‌ನ ಪ್ರಭಾವದಿಂದ ದೇಶದ ಆರೋಗ್ಯ ವ್ಯವಸ್ಥೆಯು ಕುಸಿಯುತ್ತಿರುವ ಗಳಿಗೆ ಇದು. ಇತರ ಸ್ವಾಯತ್ತ ಸಂಸ್ಥೆಗಳು ಸಹ ಸಂಕುಚಿತ ರಾಜಕೀಯದ ಕುಲುಮೆಯಲ್ಲಿ ಬೇಯುತ್ತಿವೆ.

ಜನರ ಹಕ್ಕುಗಳ ರಕ್ಷಣೆಗೆ ಉಳಿದಿರುವ ಏಕೈಕ ಭರವಸೆಯ ಭದ್ರಕೋಟೆ ಸುಪ್ರೀಂಕೋರ್ಟ್ ಮಾತ್ರವೇ. ನ್ಯಾಯಾಂಗದ ಮೌಲ್ಯಗಳು ಮತ್ತು ಗೌರವವನ್ನು ಎತ್ತಿಹಿಡಿಯುವಲ್ಲಿ ನ್ಯಾಯಮೂರ್ತಿ ರಮಣ ಅವರು ಈಗ ಪ್ರಾಥಮಿಕ ಪಾತ್ರ ನಿರ್ವಹಸಬೇಕಿದೆ.

ನ್ಯಾಯಮೂರ್ತಿ ಕೋಕಾ ಸುಬ್ಬಾ ರಾವ್ ಅವರು ನೀಡಿದ ಗಮನಾರ್ಹ ತೀರ್ಪುಗಳಲ್ಲಿ ಪ್ರಾಮಾಣಿಕತೆ ಮತ್ತು ನಿರ್ಭಯತೆಯ ತನ್ನದೇ ಆದ ನೈಸರ್ಗಿಕ ಗುಣಲಕ್ಷಣಗಳನ್ನು ಪ್ರತಿಬಿಂಬಿಸುವ ಮೂಲಕ ದೇಶದ ಕಾನೂನು ಸ್ವತಃ ಒಂದು ಸ್ಥಾನ ಗಳಿಸಿದ್ದರು.

ನ್ಯಾಯಮೂರ್ತಿ ರಮಣ ಅವರ ಅಧಿಕಾರಾವಧಿಯೂ ಅದೇ ಮಾರ್ಗದಲ್ಲಿ ಮುಂದುವರಿಯುತ್ತದೆ ಎಂಬ ಬಹು ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.