ETV Bharat / bharat

ಬೆಲೆ ಏರಿಕೆ ಬಗ್ಗೆ ದೇವರ ವೇಷ ಧರಿಸಿ ನಾಟಕ.. ಬುಲೆಟ್​ನಲ್ಲಿ ಬಂದ 'ಶಿವ-ಪಾರ್ವತಿ', ಶಿವ ಅರೆಸ್ಟ್​

ಶಿವನ ವೇಷ ಧರಿಸಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇದರಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವ ಶಂಕಿತ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಲೆ ಏರಿಕೆ ಬಗ್ಗೆ ದೇವರ ವೇಷ ಧರಿಸಿ ನಾಟಕ
ಬೆಲೆ ಏರಿಕೆ ಬಗ್ಗೆ ದೇವರ ವೇಷ ಧರಿಸಿ ನಾಟಕ
author img

By

Published : Jul 10, 2022, 6:04 PM IST

ಗುವಾಹಟಿ(ಅಸ್ಸೋಂ): ಬೀದಿ ನಾಟಕದಲ್ಲಿ ಶಿವನ ಪಾತ್ರ ಮಾಡಿದ್ದ ವ್ಯಕ್ತಿಯನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಲಾಗಿದೆ. ಶಿವ ಹಾಗೂ ಪಾರ್ವತಿ ವೇಷ ಧರಿಸಿಕೊಂಡು ಅಸ್ಸೋಂನ ನಾಗಾಂವ್ ಪಟ್ಟಣದ ಬೀದಿಗಳಲ್ಲಿ ಅದರಲ್ಲೂ ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ನುಕ್ಕಡ್ ನಾಟಕ ಪ್ರದರ್ಶಿಸುತ್ತ ಬೆಲೆ ಏರಿಕೆ ಮತ್ತು ಹಣದುಬ್ಬರದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರು. ಪರಿಣಾಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

ಶಿವನ ವೇಷ ಧರಿಸಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇದರಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವ ಶಂಕಿತ ಆರೋಪಿಗಳನ್ನು ಬಂಧಿಸಬೇಕಿದೆ ಎಂದು ಸದರ್ ಪಿಎಸ್ ಪ್ರಭಾರಿ ಮನೋಜ್ ರಾಜವಂಶಿ ಮಾಹಿತಿ ನೀಡಿದ್ದಾರೆ.

ಬೆಲೆ ಏರಿಕೆ ಮತ್ತು ಹಣದುಬ್ಬರದಂತಹ ಸಾಮಾನ್ಯ ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯಲು ನುಕ್ಕಡ್ ನಾಟಕವನ್ನು ಪ್ರದರ್ಶಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಸಂಘಟನೆಗಳು ಇವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು, ಇವರಿಬ್ಬರು ಹಿಂದೂ ದೇವರು ಮತ್ತು ದೇವತೆಯನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ ಮತ್ತು ಆ ರೀತಿ ಮಾಡಲು ಅವರಿಗೆ ಸ್ವಾತಂತ್ರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

ಈ ರೀತಿಯ ಕೃತ್ಯವನ್ನು ನಾವು ಸಹಿಸುವುದಿಲ್ಲ. ನಾವು ಉದಾರವಾದಿಗಳು. ಆದರೆ, ಅದರ ಲಾಭ ಪಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : 25 ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ.. ವಿಧವೆಯಂತೆ ಜೀವನ ಸಾಗಿಸುತ್ತಿದ್ದ ಮಹಿಳೆ ಬಾಳಲ್ಲಿ ಹೊಸ ಬೆಳಕು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.