ETV Bharat / bharat

ಕೇರಳ ಸ್ಫೋಟ ಪ್ರಕರಣ; ಗಲ್ಫ್​ನಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ತೊರೆದು ಬಂದಿದ್ದ ಆರೋಪಿ​ - ಯೆಹೋವನ ಪ್ರಾರ್ಥನಾ ಸಭೆ ವೇಳೆ ನಡೆದ ಸ್ಫೋಟ

ಕೇರಳ ಸ್ಫೋಟ ಪ್ರಕರಣ ಸಂಬಂಧ ವಿಶೇಷ ತನಿಖಾದಳದ ಅಧಿಕಾರಿಗಳು ಉನ್ನತ ತನಿಖೆ ನಡೆಸುತ್ತಿದ್ದಾರೆ.

man-who-claimed-responsibility-for-kalamassery-blasts-brilliant-left-lucrative-job-in-gulf-police
ಕೇರಳ ಸ್ಪೋಟ ಪ್ರಕರಣ : ಗಲ್ಫ್​ನಲ್ಲಿ ಹೆಚ್ಚಿನ ಸಂಬಳದ ಉದ್ಯೋಗ ತೊರೆದು ಬಂದಿದ್ದ ಆರೋಪಿ​
author img

By PTI

Published : Nov 1, 2023, 1:41 PM IST

ಕೊಚ್ಚಿ(ಕೇರಳ) : ಕೊಚ್ಚಿಯ ಕಲಮಶ್ಶೇರಿ ಎಂಬಲ್ಲಿ ಕಳೆದ ಭಾನುವಾರ ಯೆಹೋವನ ಪ್ರಾರ್ಥನಾ ಸಭೆ ವೇಳೆ ನಡೆದ ಸ್ಫೋಟ ಪ್ರಕರಣ ಸಂಬಂಧ ವಿಶೇಷ ತನಿಖಾ ದಳದ ಅಧಿಕಾರಿಗಳು ಉನ್ನತಮಟ್ಟದ ತನಿಖೆ ನಡೆಸುತ್ತಿದ್ದಾರೆ. ಸ್ಫೋಟ ಪ್ರಕರಣದಲ್ಲಿ ಓರ್ವ ಬಾಲಕಿ ಸೇರಿ ಮೂವರು ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಸ್ಫೋಟ ನಡೆದ ಕೆಲವು ಗಂಟೆಗಳ ಬಳಿಕ ಡೊಮಿನಿಕ್​ ಮಾರ್ಟಿನ್​ ಎಂಬ ವ್ಯಕ್ತಿ ಸ್ಫೋಟದ ಹೊಣೆಗಾರಿಕೆ ಹೊತ್ತು ಪೊಲೀಸರಿಗೆ ಶರಣಾಗಿದ್ದನು. ಈತನನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯು ಗಲ್ಫ್​ನಿಂದ ಹೆಚ್ಚಿನ ಸಂಬಳದ ಉದ್ಯೋಗವನ್ನು ತೊರೆದು ಬಂದಿದ್ದಾನೆ. ಮಾರ್ಟಿನ್ ತೀಕ್ಷ್ಣ ಬುದ್ಧಿ ಉಳ್ಳವನು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಸೋಮವಾರ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ವಿಶೇಷ ತನಿಖಾ ದಳದ ಅಧಿಕಾರಿಗಳು, ಮಂಗಳವಾರ ಆಲುವಾದ ಅಥನಿಯಲ್ಲಿರುವ ಆರೋಪಿಯ ಮನೆಗೆ ಕರೆದುಕೊಂಡು ಬಂದು ಶೋಧ ಕಾರ್ಯ ನಡೆಸಿದ್ದಾರೆ. ಈ ಮನೆಯಲ್ಲಿಯೇ ಆರೋಪಿ ಸ್ಪೋಟಕವನ್ನು ತಯಾರಿಸಿರುವುದಾಗಿ ಅಧಿಕಾರಿಗಳು ಶಂಕಿಸಿದ್ದಾರೆ.

ಕಳೆದ ಭಾನುವಾರ ಪೊಲೀಸರಿಗೆ ಶರಣಾಗಿದ್ದ ಮಾರ್ಟಿನ್​, ತಾನು ಸ್ಪೋಟ ಕೃತ್ಯ ಎಸಗಲು ವಸ್ತುಗಳನ್ನು ಖರೀದಿಸಿದ್ದ ಬಗ್ಗೆ ಬಿಲ್​ನ್ನು ಪೊಲೀಸರಿಗೆ ನೀಡಿದ್ದನು. ಜೊತೆಗೆ ಪೆಟ್ರೋಲ್​ ಖರೀದಿಸಿರುವ ಬಿಲ್​ನ್ನು ಆರೋಪಿ ನೀಡಿದ್ದನು. ಇದು ಆರೋಪಿ ಕೃತ್ಯ ಎಸಗಿರುವ ಬಗ್ಗೆ ಪ್ರಾಥಮಿಕ ಸಾಕ್ಷಿ ಆಗಿದೆ. ಜೊತೆಗೆ ಮಾರ್ಟಿನ್​ ಅಸಾಧಾರಣ ಬುದ್ಧಿಯನ್ನು ಹೊಂದಿದ್ದಾನೆ. ದುಷ್ಕೃತ್ಯ ಎಸಗಲು ಆರೋಪಿಯು ಗಲ್ಫ್​ ದೇಶದಲ್ಲಿನ ಹೆಚ್ಚಿನ ಸಂಬಳದ ಉದ್ಯೋಗ ಸಂಬಳವನ್ನು ತ್ಯಜಿಸಿ ಬಂದಿರುವುದು ತಿಳಿದುಬಂದಿದೆ. ಆರೋಪಿಯು ಎಲೆಕ್ಟ್ರಾನಿಕ್ಸ್​ನಲ್ಲಿ ಹೆಚ್ಚಿನ ಪ್ರಾವೀಣ್ಯತೆ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಆರೋಪಿ ಮಾರ್ಟಿನ್​ನ್ನು​ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಆರೋಪಿಯು ಪ್ರಕರಣ ಸಂಬಂಧ ತಾನೇ ವಾದ ಮಂಡಿಸುವುದಾಗಿ ನ್ಯಾಯಾಲಯವನ್ನು ಒತ್ತಾಯಿಸಿದ್ದಾನೆ. ಪ್ರಕರಣ ಸಂಬಂಧ ಆರೋಪಿ ವಿರುದ್ಧ ಸೆಕ್ಷನ್​ 302(ಕೊಲೆ ), ಸ್ಫೋಟಕ ವಸ್ತುಗಳ ಕಾಯ್ದೆ ಸೆಕ್ಷನ್​ 3, ಯುಎಪಿಎ ಸಂಬಂಧಿತ ಪ್ರಕರಣ ದಾಖಲಿಸಲಾಗಿದೆ.

ಕಳೆದ ಭಾನುವಾರ ಬೆಳಗ್ಗೆ ಕೊಚ್ಚಿಯ ಕಲಮಶ್ಶೇರಿ ಎಂಬಲ್ಲಿ ನಡೆಯುತ್ತಿದ್ದ ಯಹೋವನ ಸಭೆಯ ಸಂದರ್ಭ ಸರಣಿ ಸ್ಫೋಟ ಸಂಭವಿಸಿತ್ತು. ಸದ್ಯ 21 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ಬಳಿಕ ಆರೋಪಿ ಮಾರ್ಟಿನ್​ ಸ್ಫೋಟದ ಹೊಣೆ ಹೊತ್ತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ. ಆರೋಪಿಯು ಯಾಕೆ ಕೃತ್ಯ ಎಸಗಿದ್ದಾನೆ. ಇದರ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ : ಕೇರಳ ಸ್ಪೋಟ: ಚಿಕಿತ್ಸೆ ಫಲಕಾರಿಯಾಗದೇ 12ರ ಬಾಲಕಿ ಸಾವು. ಮೃತರ ಸಂಖ್ಯೆ 3ಕ್ಕೆ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.